(www.vknews.com) : ಉತ್ತರ ಪ್ರದೇಶ ಜನಸಂಖ್ಯೆ ನಿಯಂತ್ರಣ ಮಸೂದೆಯನ್ನು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಬಲವಾಗಿ ಖಂಡಿಸುತ್ತದೆ ಹಾಗೂ ಯೋಗಿ ಸರ್ಕಾರದ ಉದ್ದೇಶ ಮತ್ತು ಮಸೂದೆ ಪರಿಚಯಿಸುವ ಸಂಯಮವನ್ನು ಪ್ರಶ್ನಿಸುತ್ತದೆ.
ಉತ್ತರ ಪ್ರದೇಶ ಜನಸಂಖ್ಯೆ(ನಿಯಂತ್ರಣ, ಸ್ಥಿರೀಕರಣ ಮತ್ತು ಕಲ್ಯಾಣ) ಮಸೂದೆ 2021 ನ 2 ಮಕ್ಕಳ ನೀತಿ ಮತ್ತು ಅದರ ಉಲ್ಲಂಘನೆ ಮಾಡಿದವರ ವಿರುದ್ಧ ಕ್ರಮಗಳಾದ ಚುನಾವಣೆಯಲ್ಲಿ ಸ್ಪರ್ಧಿಸುವ ವುದರಿಂದ ಹೊರಹಾಕುವುದು, ಸರ್ಕಾರಿ ಹುದ್ದೆಗಳಿಗಾಗಿ ಅರ್ಜಿ ಸಲ್ಲಿಸುವದರಿಂದ ತಡೆಯುವುದು, ಸರ್ಕಾರದ ಯಾವುದೇ ಸೌಲಭ್ಯ ಪ ಪಡೆಯುವುದರಿಂದ ತಡೆಯುವುದನ್ನು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಷ್ಟ್ರೀಯ ಅಧ್ಯಕ್ಷರಾದ ಡಾ. ಎಸ್. ಕ್ಯೂ. ಆರ್. ಇಲಿಯಾಸ್ ಇಂಡಿಯಾ ರವರು ಬಲವಾಗಿ ಖಂಡಿಸಿದರು.
ಜನಸಂಖ್ಯೆ ಯು ಸೀಮಿತ ಪರಿಸರ ಮತ್ತು ಆರ್ಥಿಕ ಸಂಪನ್ಮೂಲಕ್ಕಾಗಿ ಭಾರ ಎಂಬ ವಾದವನ್ನು ಡಾ ಇಲಿಯಾಸ್ ರವರು ಅಲ್ಲಗೆಳೆದರು ಹಾಗೂ ಮಾನವ ಸಂಪನ್ಮೂಲ ಯಾವುದೇ ದೇಶಕ್ಕಾಗಿ ಅಮೂಲ್ಯ ಸಂಪತ್ತು ಎಂದು ಹೇಳಿದರು ಹಾಗೂ ಬೇಡಿಕೆಗಳನ್ನು ಪೂರೈಸಲು ನಮ್ಮ ದೇಶದಲ್ಲಿ ಸಂಪನ್ಮೂಲಗಳ ಯಾವುದೇ ಕೊರತೆ ಇಲ್ಲ ಆದರೆ ಸಮಾನ ಹಂಚಿಕೆಯಲ್ಲಿ ತೊಂದರೆ ಉಂಟಾಗುತ್ತದೆ ಎಂದು ಹೇಳಿದರು.
ಯುಪಿಯಲ್ಲಿ ಪ್ರಸ್ತಾವಿತ ಮಸೂದೆ ಸಾಂವಿಧಾನಿಕವಾಗಿ ಮತ್ತು ಕಾನೂನುಬದ್ಧವಾಗಿ ಪ್ರಶ್ನಾರ್ಹವಾಗಿದೆ ಎಂದು ಅವರು ಹೇಳಿದರು. ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಶಬ್ದವನ್ನು ಸೃಷ್ಟಿಸುವುದು ಕೋಮು ಧ್ರುವೀಕರಣವನ್ನು ತೀಕ್ಷ್ಣಗೊಳಿಸುತ್ತದೆ ಮತ್ತು ಸಮಾಜದಲ್ಲಿ ಪೂರ್ವಾಗ್ರಹ ಮತ್ತು ಧರ್ಮಾಂಧತೆಯನ್ನು ಗಾಢವಾಗಿಸುತ್ತದೆ.
ಈ ಜನಸಂಖ್ಯೆ ನಿಯಂತ್ರಣ ಮಸೂದೆಯು ಸಾಂವಿಧಾನಿಕವಾಗಿ ಹಾಗೂ ಕಾನೂನುಬದ್ಧವಾಗಿ ಪ್ರಶ್ನಾರ್ಹ ಎಂದು ಹೇಳಿದರು. ಇದರ ಉದ್ದೇಶ ವಿಧಾನಸಭಾ ಚುನಾವಣೆ ಮೊದಲು ಗದ್ದಲ ಉಂಟು ಮಾಡುವುದರಿಂದ ಕೋಮು ಧ್ರುವೀಕರಣ ಮತ್ತು ಸಮಾಜದಲ್ಲಿ ಪಕ್ಷಪಾತ ಮತ್ತು ಧರ್ಮಾಂಧತೆ ಉಂಟಾಗುತ್ತದೆ ಎಂದು ಡಾ.ಎಸ್. ಕ್ಯೂ .ಆರ್. ಇಲಿಯಾಸ್ ರವರು ಹೇಳಿದರು.
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.