ಉಡುಪಿ,(ವಿಶ್ವ ಕನ್ನಡಿಗ ನ್ಯೂಸ್ ): ಇಲ್ಲಿನ ಬ್ರಹ್ಮಾವರ ಸಮೀಪದ ಕುಂಬ್ರಗೋಡು ಅಪಾರ್ಟ್ ಮೆಂಟ್ನಲ್ಲಿ ಮಹಿಳೆಯ ಕುತ್ತಿಗೆಗೆ ವೈರ್ ಬಿಗಿದು ಕೊಲೆ ಮಾಡಿದ ಘಟನೆ ನಡೆದಿದೆ. ಮ್ರತ ಯುವತಿಯನ್ನು 35 ವರ್ಷದ ವಿಶಾಲ ಗಾಣಿಗ ಎಂದು ಗುರುತಿಸಲಾಗಿದೆ.ಒಂದು ವಾರದ ಹಿಂದೆ ದುಬೈನಿಂದ ಉಡುಪಿಗೆ ಬಂದಿದ್ದಳು . ಪತಿ ರಾಮಕೃಷ್ಣ ಗಾಣಿಗ ಹಾಗೂ ಪುತ್ರಿ ಜೊತೆ ದುಬೈನಲ್ಲಿ ವಾಸವಾಗಿದ್ದರು. ಕಳೆದ ಜೂನ್ 30ರಂದು ಉಡುಪಿಗೆ ಮಗಳ ಜೊತೆ ಆಗಮಿಸಿದ್ದರು. ತಂದೆ ಮನೆಯಲ್ಲಿ ಉಳಿದುಕೊಂಡಿದ್ದ ವಿಶಾಲ, ಬ್ರಹ್ಮಾವರದಲ್ಲಿರೋ ಅಪಾರ್ಟ್ ಮೆಂಟ್ಗೆ ಹೋಗಿ ಬಳಿಕ ಬ್ಯಾಂಕ್ ಕೆಲಸ ಮುಗಿಸಿಕೊಂಡು ಬರೋದಾಗಿ ಹೇಳಿ ಹೋಗಿದ್ದರು. ಸಂಜೆಯಾದ್ರೂ ಮನೆಗೆ ಬಾರದ ಮಗಳನ್ನು ಹುಡುಕಿಕೊಂಡು ಬ್ರಹ್ಮಾವರಕ್ಕೆ ತಂದೆ ಬಂದಾಗ ಕೊಲೆ ಪ್ರಕರಣ ಬಯಲಾಗಿದೆ. ಬ್ರಹ್ಮಾವರ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.