ಜೆದ್ದಾ(www.vknews.in): ಸೌದಿ ಅರೇಬಿಯಾವು ಆಗಸ್ಟ್ 1ರಿಂದ ಜಾರಿಗೆ ಬರುವಂತೆ ಟೂರಿಸ್ಟ್ ವೀಸಾ ಹೊಂದಿರುವ ವಿದೇಶಿಗಳಿಗೆ ಪ್ರವೇಶಾನುಮತಿಯನ್ನು ನೀಡಿದೆ. ಸೌದಿ ಸರಕಾರವು ಅನುಮೋದಿಸಿದ ಕೊವಿಡ್ ಲಸಿಕೆಯ ಎರಡೂ ಡೋಸ್ ಗಳನ್ನು ಪಡೆದಿರುವವರು ಮಾತ್ರ ಪ್ರಯಾಣಕ್ಕೆ ಅರ್ಹರಾಗಿರುತ್ತಾರೆ. ಇಂತಹ ಟೂರಿಸ್ಟ್ ಗಳಿಗೆ ಸೌದಿ ಪ್ರವೇಶಿಸಿದ ನಂತರ ಕ್ವಾರೆಂಟೈನ್ ಅಗತ್ಯವಿರುವುದಿಲ್ಲ. ಆದರೆ ಭಾರತ ಸೇರಿದಂತೆ ಕೆಂಪು ಪಟ್ಟಿಯಲ್ಲಿರುವ ದೇಶಗಳ ಟೂರಿಸ್ಟ್ ಗಳು ನೇರವಾಗಿ ಸೌದಿಗೆ ಪ್ರವೇಶಿಸಲು ಅಸಾಧ್ಯವಾಗಿದ್ದು, ಸೌದಿ ಅರೇಬಿಯಾದ ಪ್ರಯಾಣ ನಿಷೇಧವಿಲ್ಲದ ಬೇರೆ ಯಾವುದಾದರೂ ದೇಶಗಳಲ್ಲಿ 14 ದಿನಗಳ ಕ್ವಾರೆಂಟೈನ್ ಪೂರ್ತಿಗೊಳಿಸಿದ ಬಳಿಕ ಸೌದಿಯನ್ನು ಪ್ರವೇಶಿಸಬಹುದಾಗಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.