ಉಡುಪಿ,(ವಿಶ್ವ ಕನ್ನಡಿಗ ನ್ಯೂಸ್ ): ಸುಮುದ್ರ ವಿಹಾರಕ್ಕೆ ಬಂದ ನಾಲ್ವರ ಪೈಕಿ ಯುವತಿ ನೀರು ಪಾಲಾದ ಘಟನೆ ಮಲ್ಪೆಯಲ್ಲಿ ನಡೆದಿದೆ .ಇಬ್ಬರು ಯುವತಿಯರನ್ನು ರಕ್ಷಿಸಲಾಗಿದ್ದೂ ,ಯುವಕನ ಸ್ಥಿತಿ ಗಂಭೀರವಾಗಿದೆ. ನೀರು ಪಾಲಾದ ಯುವತಿಯನ್ನು ಕೊಡಗಿನ ದಶಮಿ (20) ಎಂದು ಗುರುತಿಸಲಾಗಿದೆ .
ಘಟನಾ ಹಿನ್ನಲೆ :ಮೈಸೂರಿನ ಯುವಕ ಹಾಗೂ ಕೊಡಗಿನಿಂದ ಮೂವರು ಯುವತಿಯರು ಬೀಚ್ ಗೆ ಬಂದಿದ್ದರು. ಈ ವೇಳೆ ಸಮುದ್ರದ ಅಲೆಗಳಲ್ಲಿ ಈಜುತ್ತಿದ್ದಾಗ ನೀರು ಪಾಲಾದ ಘಟನೆ ಮಲ್ಪೆ ಸಮುದ್ರ ತೀರದಲ್ಲಿ ನಡೆದಿದೆ.ನಾಲ್ವರ ಪೈಕಿ ಓರ್ವ ಯುವಕ ಹಾಗೂ ಇಬ್ಬರು ಯುವತಿಯರನ್ನು ರಕ್ಷಿಸಲಾಗಿದೆ. ಕೊಡಗಿನ ಯುವತಿ ದಶಮಿ (20) ಸಮುದ್ರದಲ್ಲಿ ಕಣ್ಮರೆಯಾಗಿದ್ದಾಳೆ. ಯುವಕನ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮಲ್ಪೆ ಪೊಲೀಸ್ ರು ಪ್ರಕರಣ ದಾಖಲಿಸಿಕೊಂಡು ನಡೆಸುತ್ತಿದ್ದಾರೆ .
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.