ಉಡುಪಿ (ವಿಶ್ವ ಕನ್ನಡಿಗ ನ್ಯೂಸ್ ):ಜಿಲ್ಲೆಯ ಕುಂದಾಪುರ ದ ಫೈನಾನ್ಸ್ ಮಾಲೀಕ ಅಜೆಂದ್ರ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ಪಾಲುದಾರ ಅನೂಪ್ ಶೆಟ್ಟಿಯನ್ನು ಗೋವಾದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪಾಲುದಾರನೇ ಕೊಲೆಗಾರ ಎಂಬ ಸಂಶಯದಿಂದ ಅನುಪ್ ಶೆಟ್ಟಿಯನ್ನು ಪೊಲೀಸರು ವಶಕ್ಕೆ ಪಡೆಯುವಲ್ಲಿ ಯಶಸ್ವೀ ಯಾಗಿದ್ದಾರೆ.
ಆರೋಪಿ ಅನೂಪ್ ಶೆಟ್ಟಿ
ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಕಾಳಾವರದಲ್ಲಿ ಶುಕ್ರವಾರ ರಾತ್ರಿ, ಡ್ರೀಮ್ ಫೈನಾನ್ಸ್ ನ ಮಾಲಕ ಅಜೆಂದ್ರ ಶೆಟ್ಟಿಯನ್ನು, ಡ್ರಾಗರ್ ನಿಂದ ಇರಿದು ಕೊಲೆಗೈಯಲಾಗಿತ್ತು. ಕೊಲೆಗೈದ ಅನೂಪ್ ಶೆಟ್ಟಿ ಅಜೇಂದ್ರ ಶೆಟ್ಟಿಯ ಕಾರನ್ನು ಬಳಸಿ ಪರಾರಿಯಾಗಲು ಯತ್ನಿಸಿದ್ದ. ಉತ್ತರ ಕನ್ನಡ ಜಿಲ್ಲೆಯ ಮೂಲಕ ಗೋವಾಕ್ಕೆ ತೆರಳಿ ತಲೆಮರೆಸಿಕೊಳ್ಳುವ ಪ್ಲಾನ್ ಮಾಡಿದ್ದ.
ಕೊಲೆಯಾದ ಅಜೆಂದ್ರ ಶೆಟ್ಟಿ
ಡ್ರೀಮ್ ಫೈನಾನ್ಸ್ ವ್ಯವಹಾರದಲ್ಲಿ ಪಾಲುದಾರ ವಿಷಯದಲ್ಲಿ ಇಬ್ಬರ ನಡುವೆ ವ್ಯವಹಾರದಲ್ಲಿ ಭಿನ್ನಮತ ಬಂದು ಕೊಲೆಯಲ್ಲಿ ಅಂತ್ಯ ಕಂಡಿದೆ ಹೇಳಲಾಗುತ್ತಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.