ಮಾಲೂರು (ವಿಶ್ವ ಕನ್ನಡಿಗ ನ್ಯೂಸ್): ಮಾಲೂರಿನ ಸಮಾಜ ಸೇವಕರಾದ ಜಿ.ಇ ರಾಮೇಗೌಡ ರವರ ಸಾರಥ್ಯದಲ್ಲಿ 2021-22 ನೇ ಸಾಲಿನ ತಾಲ್ಲೂಕಿನ ಎಲ್ಲಾ ಪಿ.ಯು.ಸಿ ವಿದ್ಯಾರ್ಥಿಗಳಿಗೆ ಜಿ.ಇ.ರಾಮೇಗೌಡ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಸಹ “ಉಚಿತ ಪಠ್ಯಪುಸ್ತಕ, ನೋಟ್ ಪುಸ್ತಕ, ಬ್ಯಾಗ್” ವಿತರಿಸುವ ಕಾರ್ಯಕ್ರಮಕ್ಕೆ ಜೆ.ಡಿ.ಎಸ್ ಕಚೇರಿಯಲ್ಲಿ ಚಾಲನೆ ನೀಡಲಾಯಿತು.
ಕಾರ್ಯಕ್ರಮದ ಉದ್ಘಾಟನೆ ಮಾಡಿದ ಮಾಲೂರಿನ ಸಮಾಜ ಸೇವಕರು, ಜೆಡಿಎಸ್ ಅಭ್ಯರ್ಥಿ ಜಿ.ಇ.ರಾಮೇಗೌಡ ರವರು ಮಾತನಾಡಿ “ಗ್ರಾಮೀಣ ಭಾಗದ ಎಲ್ಲಾ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ನಮ್ಮ ಟ್ರಸ್ಟ್ ಹಲವಾರು ವರ್ಷಗಳಿಂದ ಪಿಯುಸಿ ಹಾಗೂ ಪದವಿ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ, ನೋಟ್ ಪುಸ್ತಕ, ಬ್ಯಾಗ್ ವಿತರಣೆ, ಕ್ರೀಡಾಪಟುಗಳಿಗೆ ಪ್ರೋತ್ಸಾಹ ಮಾಡುವ ಮೂಲಕ ಅವರ ವಿದ್ಯಾಭ್ಯಾಸದ ಪ್ರಗತಿಗೆ ಸಾಕಷ್ಟು ಪ್ರಮಾಣಿಕ ಸೇವೆ ಮಾಡುತ್ತಾ ಬಂದಿದ್ದೇವೆ ಹಾಗೇ ಮಾಡುತ್ತಲೇ ಇರುತ್ತೇವೆ. ಇವರಿಗೆ ಔದ್ಯೋಗಿಕ ಕ್ಷೇತ್ರದಲ್ಲಿಯೂ ಸಹ ನಮ್ಮ ಸಹಕಾರ ಸದಾ ಇರುತ್ತದೆ. ಶ್ರದ್ದೆ, ಆಸಕ್ತಿಯಿಂದ ಕಲಿಕೆಯನ್ನು ಮಾಡುವ ಮೂಲಕ ಉನ್ನತ ಮಟ್ಟದ ಸಾಧನೆಯನ್ನು ಎಲ್ಲಾ ವಿದ್ಯಾರ್ಥಿಗಳು ಮಾಡಲಿ” ಎಂದರು.
ಪುರಸಭಾ ಸದಸ್ಯರು ಹಾಗೂ ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷರಾದ ಪಿ.ಎನ್ ಪರಮೇಶ್ ಮಾತನಾಡಿ “ನಮ್ಮ ಮಾಲೂರು ತಾಲ್ಲೂಕಿನ ಎಲ್ಲಾ ಪಿಯುಸಿ ಹಾಗೂ ಪದವಿ ವಿದ್ಯಾರ್ಥಿಗಳಿಗೆ ಹಲವಾರು ವರ್ಷಗಳಿಂದ ಸತತವಾದ ಶಿಕ್ಷಣದ ಸೇವೆಯನ್ನು ಮಾಡುತ್ತಿರುವ ಜಿ.ಇ.ರಾಮೇಗೌಡ ರವರ ಉತ್ತಮ ಸೇವೆ ನಿಜಕ್ಕೂ ಅಭಿನಂದನೀಯ, ಈ ಸೇವೆಯನ್ನು ತಾಲ್ಲೂಕಿನ ಎಲ್ಲಾ ವಿದ್ಯಾರ್ಥಿ ಸಮುದಾಯ ಸದುಪಯೋಗ ಪಡೆಯುವ ಮೂಲಕ ನಿಮ್ಮ ಭವಿಷ್ಯದ ಗುರಿಯನ್ನು ತಲುಪಿ” ಎಂದರು.
ಈ ಬಗ್ಗೆ ಮಾತನಾಡಿದ ಮಾಲೂರಿನ ಜೆ.ಡಿ.ಎಸ್ ಮುಖಂಡರು ಹಾಗೂ ಪುರಸಭಾ ಸದಸ್ಯರಾದ ರಾಘವೇಂದ್ರ ರವರು “ತಾಲ್ಲೂಕಿನ ಎಲ್ಲಾ ವಿದ್ಯಾರ್ಥಿಗಳು ಉಚಿತ ಪಠ್ಯಪುಸ್ತಕ ಪಡೆಯಲು ಜಿ.ಇ.ರಾಮೇಗೌಡ ಚಾರಿಟಬಲ್ ಟ್ರಸ್ಟನ ಕಚೇರಿಗೆ, ಆರ್.ಜಿ. ಪೆಟ್ರೋಲ್ ಬಂಕ್, ಕೋರ್ಟ್ ಸಮೀಪ, ಬಂದು ತಮ್ಮ ಕಾಲೇಜಿನ ಗುರುತೀನ ಚೀಟಿ ತೋರಿಸಿ ಪುಸ್ತಕಗಳನ್ನು ಪಡೆಯಬಹುದು.
ಕಾರ್ಯಕ್ರಮದಲ್ಲಿ ಮಾಲೂರು ತಾಲ್ಲೂಕು ಜೆ.ಡಿ.ಎಸ್ ಪ್ರಧಾನ ಕಾರ್ಯದರ್ಶಿಗಳಾದ ದೊಮ್ಮಲೂರು ದೇವರಾಜ್, ಜೆ.ಡಿ.ಎಸ್ ಮುಖಂಡರು, ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಹಾಜರಿದ್ದರು.
ವರದಿ: ಲಕ್ಕೂರು ಎಂ.ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.