ಮಾಲೂರು (ವಿಶ್ವ ಕನ್ನಡಿಗ ನ್ಯೂಸ್): ಮಾಲೂರು ತಾಲ್ಲೂಕಿನ ಹುಳದೇನಹಳ್ಳಿ ಗ್ರಾಮಪಂಚಾಯಿತು, ವೆಂಕಟರಾಜನಹಳ್ಳಿ, ತಿಮ್ಮನಾಯಕನಹಳ್ಳಿ, ಜಿನಗತಿಮ್ಮನಹಳ್ಳಿ, ಆಲಹಳ್ಳಿ, ಕೋಟೆ ಹಳ್ಳಿಗಳಿಗೆ ಡಾಂಬರು ರಸ್ತೆ ಕಾಮಗಾರಿ ಪ್ರಗತಿಯ ಕುರಿತಾಗಿ ಇಂದು ಮಾಲೂರು ತಾಲ್ಲೂಕಿನ ಶಾಸಕರಾದ ಕೆ.ವೈ.ನಂಜೇಗೌಡ ರವರು ರಸ್ತೆ ಡಾಂಬರೀಕರಣದ ಗುಣಮಟ್ಟವನ್ನು ಪರಿಶೀಲನೆ ನಡೆಸಿದರು.
ಈ ಕುರಿತಾಗಿ ರಸ್ತೆ ಕಾಮಗಾರಿಯನ್ನು ವೀಕ್ಷಿಸಿದ ತಾಲ್ಲೂಕಿನ ಶಾಸಕರಾದ ಕೆ.ವೈ.ನಂಜೇಗೌಡ ರವರು ಮಾತನಾಡಿ “ತಾಲ್ಲೂಕಿನಲ್ಲಿ ಮುಲಭೂತ ಸೌಕರ್ಯಗಳಲ್ಲಿ ನಮ್ಮ ಮೊದಲ ಆದ್ಯತೆ ರಸ್ತೆಗಳಿಗಾಗಿ, ಆ ನಿಟ್ಟಿನಲ್ಲಿ ಡಾಂಬರು ರಸ್ತೆ ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮ ಗುಣಮಟ್ಟವನ್ನು ಕಾಪಡುವ ನಿಟ್ಟಿನಲ್ಲಿ ಇಂದು ಸ್ಥಳಕ್ಕೆ ಭೇಟಿ ನೀಡಿ ಗುತ್ತಿಗೆದಾರರಿಗೆ ಮಾಹಿತಿ ಒದಗಿಸಿ, ಪರಿಶೀಲನೆ ಮಾಡುವ ಮೂಲಕ ಜನರ ಕಷ್ಟಕ್ಕೆ ಸ್ಪಂದಿಸುವ ಕಾರ್ಯ ಮಾಡಿದ್ದೀನಿ” ಎಂದರು.
ರಸ್ತೆ ಡಾಂಬರೀಕರಣ ಪರಿಶೀಲನೆ ಸಮಯದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಹೇಮಾ ಮಾಲೀನಿ, ಉಪಾಧ್ಯಕ್ಷರಾದ ಮುರಳಿ, ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರೀಧರ್, ಮೂರ್ತಿ, ಸತೀಶ್, ಪ್ರತಾಪ್, ಮುನಿರಾಜ್, ಚಲಪತಿ, ರಾಮಪ್ಪ, ಯುವರಾಜ್,ಕೇಶವ, ರವಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಹಾಜರಿದ್ದರು.
ವರದಿ: ಲಕ್ಕೂರು ಎಂ.ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.