ಮಂಜೇಶ್ವರ(ವಿಶ್ವಕನ್ನಡಿಗ ನ್ಯೂಸ್): ಮದರ್ ಇಂಡಿಯಾ ಕಡಂಬಾರ್ ಕ್ರೀಡಾಂಗಣದಲ್ಲಿ ಅಲಿಫ್ ಸ್ಟಾರ್ ಮೂಸೋಡಿ ಹಾಗೂ ಎಮ್ಸಿಸಿ ಮೀಂಜ ನಡುವಿನ ಟಿಟ್ವೆಂಟಿ ಪಂದ್ಯದಲ್ಲಿ 61 ಬಾಲ್ ಎದುರಿಸಿ 180 ರನ್ ಸಿಡಿಸಿ ಇತಿಹಾಸ ನಿರ್ಮಿಸಿದರು. ಇದರಲ್ಲಿ 10 ಬೌಂಡರಿ ಹಾಗೂ 22 ಸಿಕ್ಸರ್ ಸೇರಿತ್ತು. ತನ್ನ ಶಾಲಾ ದಿನಗಳಿಂದಲೇ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದ ಮುಸ್ತಫಾ ಇಂದು ಅಂತರಾಷ್ಟ್ರೀಯ ಮಟ್ಟದ ದಾಖಲೆಯನ್ನು ಅಳಿಸಿ ಹಾಕಿ ಇತಿಹಾಸ ನಿರ್ಮಿಸಿದರು. ನಾಡಿನ ಎನ್ಎಫ್ಸಿ ನೀರಹಳ್ಳಿ ತಂಡದ ಸ್ಥಿರ ಆಟಗಾರಾರದ ಇವರು ಕ್ರಿಕೇಟ್ ನಲ್ಲಿ ಇವರ ಈ ಇನ್ನಿಂಗ್ಸ್ ಯುವಕರಿಗೆ ಮಾದರಿಯಾಗಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಗೆ ಇಳಿದ ಎಮ್ಸಿಸಿ ಮೀಂಜ ಮುಸ್ತಫಾ ಹಾಗೂ ಕಮರು ಅವರ ಶತಕದ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 339 ರನ್ ಗಳಿಸಿತು. ಎರಡನೇ ವಿಕೆಟ್ ಗೆ ಜೊತಿಯಾದ ಜೋಡಿ ಬರೋಬ್ಬರಿ 318 ರನ್ ಕಲೆಹಾಕಿದರು. ಇತಿಹಾಸದಲ್ಲೆ ಇಂತಹಾ ದಾಖಲೆಗಳು ಅವಿಸ್ಮರಣೀಯ. 340 ರನ್ ಬೆನ್ನು ಹಟ್ಟಲು ಬಂದ ಅಲಿಫ್ ಸ್ಟಾರ್ ಮೂಸೋಡಿ ಆರಂಭಿಕ ಆಘಾತ ಎದುರಿಸಿತು. ಕೆಲವು ಆಟಗಾರರು ಏಕಾಂಗಿ ಹೋರಾಟ ನಡೆಸಿದರು. ಆದರೆ ಗೆಲುವಿನ ಹಾದಿ ಬೆಟ್ಟ ಹತ್ತುವಷ್ಟು ದೂರವಿತ್ತು. ಅಂತಿಮವಾಗಿ 19.4 ಓವರ್ಗಳಲ್ಲಿ 218 ರನ್ ಗೆ ಅಲೌಟ್ ಆಯಿತು. ಪಂದ್ಯದ ಉದ್ದಕ್ಕೂ ಮೈಲುಗಲ್ಲಿನ ಪ್ರದರ್ಶನ ನೀಡಿದ ಮುಸ್ತಫಾ ಮೀಯಪದವು ಪಂದ್ಯಶ್ರೇಷ್ಟ ಪ್ರಶಸ್ತಿಗೆ ಬಾಜನರಾದರು.
ಮೀಂಜ ಗ್ರಾಮದ ಕಂಚಿಲ ನಾಡಿನ ನೂರುಲ್ ಆಲಂ ಹಾಗೂ ಖದೀಜ ದಂಪತಿಗಳ ನಾಲ್ಕನೇ ಮಗನಾದ ಮುಸ್ತಫಾ ಕ್ರಿಕೇಟ್ ಇತಿಹಾಸದಲ್ಲೆ ಯಾರೂ ಮಾಡದ ದಾಖಲೆ ತನ್ನ ಹೆಸರಿಗೆ ಬರೆಸಿಕೊಂಡರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.