ಮಾಲೂರು (ವಿಶ್ವ ಕನ್ನಡಿಗ ನ್ಯೂಸ್): ರಕ್ತದಾನ, ನೇತ್ರದಾನ, ಹಾಗೂ ಸಮಾಜಸೇವೆಗೆ ಬೆನ್ನೆಲುಬಾಗಿ ನಿಂತಿರುವ ಕೋಲಾರದ DCRE ಇನ್ಸಪೆಕ್ಟರ್ ರಘು ರವರ ಮಾನವೀಯತೆಯ ಕೆಲಸಕ್ಕೆ ವಿಶ್ವಮಾನವ ಕುವೆಂಪು ಫೌಂಡೇಶನ್ (ರಿ.) VKF ರಾಜ್ಯ ಅಧ್ಯಕ್ಷ ಹಾಗೂ ಯುವಕವಿ ಲಕ್ಕೂರು ಎಂ.ನಾಗರಾಜ್ ಹೃದಯಪೂರ್ವಕ ಅಭಿನಂದನೆ ತಿಳಿಸಿದ್ದಾರೆ.
ಉತ್ತಮ ಕಾರ್ಯಗಳಿಗೆ ಸದಾ ಸ್ಪಂದಿಸುವ ಇನ್ಸಪೆಕ್ಟರ್ ರಘು ರವರು ವಿಶ್ವಮಾನವ ಕುವೆಂಪು ಫೌಂಡೇಶನ್ (ರಿ.) VKF ನ ರಕ್ತದಾನ, ನೇತ್ರದಾನ, ಹಸಿದವರಿಗೆ ಊಟ ನೀಡುವ ಕಾರ್ಯ, ವಯಸ್ಸಾದ ವೃದ್ದರಿಗೆ ಸಹಾಯ, ಗುಡಿಸಲು ವಾಸಿಗಳಿಗೆ ಸಹಾಯ, ಬಡ ವಿದ್ಯಾರ್ಥಿಗಳಿಗೆ ಸಹಾಯ ಈ ರೀತಿಯ ಎಲ್ಲಾ ರೀತಿಯ ಸಮಾಜಮುಖಿ ಚಟುವಟಿಕೆಗಳಿಗೆ ಸ್ಪಂದಿಸುವ ಮೂಲಕ ಯುವಕರ ಸ್ಪೂರ್ತಿದಾಯಕ ಜನಮೆಚ್ಚಿದ ದಕ್ಷ ಇನ್ಸಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿರುವ ಹಾಗೂ ರಾಜ್ಯದಲ್ಲಿ ನಮ್ಮ ಎಲ್ಲಾ ಚಟುವಟಿಕೆಗಳಿಗೆ ಬೆಂಬಲಿಸಿರುವುದಕ್ಕೆ ನಾವು ಅಭಾರಿ” ಎಂದರು.
ಈ ಕುರಿತು ಮಾತನಾಡಿರುವ ಕೋಲಾರ DCRE ಇನ್ಸಪೆಕ್ಟರ್ ರಘು ರವರು “ವಿಶ್ವಮಾನವ ಕುವೆಂಪು ಫೌಂಡೇಶನ್ (ರಿ.) VKF ಸದಾ ರಕ್ತದಾನ ಸೇವೆ ಮಾಡುವ ಮೂಲಕ ಅಪತ್ತಿನಲ್ಲಿರುವ ಅನೇಕ ರೋಗಿಗಳ ಪಾಲಿಗೆ ಜೀವ ಸಂಜೀವಿನಿಯಾಗಿ, ಮೂರು ರಾಜ್ಯಗಳಲ್ಲಿ ಉತ್ತಮ ಕಾರ್ಯ ಮಾಡುತ್ತಿರುವುದು ನಮಗೆ ಸಂತೋಷ, ಹಾಗೇ ಬಡಜನರ ಸೇವೆಗಾಗಿ ಸದಾ ಶ್ರಮಿಸುವ ಮೂಲಕ ಅನಾಥರ, ಭಿಕ್ಷುಕರ, ಹಸಿದವರ ಪಾಲಿಗೆ ದೈವ ರೂಪದ ಫೌಂಡೇಶನ್ ಆಗಿ ಕರ್ತವ್ಯ ಮಾಡುತ್ತಿರುವುದಕ್ಕೆ ನನ್ನ ಸಹಕಾರ, ಮಾರ್ಗದರ್ಶನ, ಸದಾ ಇರುತ್ತದೆ” ಎಂದರು.
VKF ನ ಉತ್ತಮ ಸಮಾಜಮುಖಿ ಕಾರ್ಯಗಳಿಗೆ ಸ್ಪಂದಿಸುತ್ತಿರುವ, ರಾಜ್ಯ ಸಲಹೆಗಾರರ ಸೇವೆಗೆ, ಕರ್ನಾಟಕ ರಕ್ಷಣಾ ವೇದಿಕೆ (ಹೆಚ್.ಶಿವರಾಮೇಗೌಡ ಸಾರಥ್ಯದ) ಪದಾಧಿಕರಿಗಳು ಅಭಿನಂದನೆ ತಿಳಿಸಿದ್ದಾರೆ.
ವರದಿ: ಲಕ್ಕೂರು ಎಂ ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.