ದುಬೈ(www.vknews.in):ಯುಎಇ ರೆಸಿಡೆನ್ಸಿ ವೀಸಾ ಹೊಂದಿರುವ ಮತ್ತು ಎರಡೂ ಡೋಸ್ ಲಸಿಕೆ ಹಾಕಿದ ಆರು ದೇಶಗಳ ಪ್ರಯಾಣಿಕರಿಗೆ ಆಗಸ್ಟ್ 5ರಿಂದ ಯುಎಇ ಪ್ರವೇಶವನ್ನು ಅನುಮತಿಸಲಾಗುವುದು ಎಂದು ಅಧಿಕಾರಿಗಳು ಮಂಗಳವಾರ ಘೋಷಿಸಿದರು.
ಭಾರತ, ಪಾಕಿಸ್ತಾನ, ಶ್ರೀಲಂಕಾ, ನೇಪಾಳ, ನೈಜೀರಿಯಾ ಮತ್ತು ಉಗಾಂಡಾದ ಪ್ರಯಾಣಿಕರಿಗೆ ಈ ನಿಯಮ ಅನ್ವಯಿಸುತ್ತದೆ ಎಂದು ರಾಷ್ಟ್ರೀಯ ತುರ್ತುಸ್ಥಿತಿ ಬಿಕ್ಕಟ್ಟು ಮತ್ತು ವಿಪತ್ತು ನಿರ್ವಹಣಾ ಪ್ರಾಧಿಕಾರ (NCEMA) ಹೇಳಿದೆ.
ಪ್ರಯಾಣಿಕರು ಎರಡನೇ ಲಸಿಕೆ ಡೋಸ್ ಪಡೆದ ನಂತರ ಕನಿಷ್ಠ 14 ದಿನಗಳು ಕಳೆದಿರಬೇಕು ಹಾಗೂ ಪ್ರಯಾಣಿಕರು ಲಸಿಕೆ ಪ್ರಮಾಣಪತ್ರವನ್ನು ಹೊಂದಿರಬೇಕು ಎಂದು ಪ್ರಾಧಿಕಾರ ತಿಳಿಸಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.