ಕೈರಂಗಳ (www.vknews.com) : SYS ರಾಜ್ಯ ಸಮಿತಿಯ ಮೋಂಟುಗೋಳಿ ಸೆಂಟರ್ ಅಧೀನದಲ್ಲಿ ಎಸ್ ವೈ ಎಸ್ ಡಿಜಿ ಕಟ್ಟೆ ಎಂಬ ನೂತನ ಶಾಖೆ ರೂಪಿಕರಣ ಗೊಂಡಿತು.
ಈ ಪ್ರಯುಕ್ತ ಶಾಖೆಯ ವತಿಯಿಂದ ಪುಣ್ಯ ರಬೀವುಲ್ ಅವ್ವಲ್ ತಿಂಗಳ ಪ್ರಯುಕ್ತ ಮೌಲಿದ್ ಮಜ್ಲಿಸ್ ಹಾಗೂ ಸಾಂತ್ವನದ ಭಾಗವಾಗಿ ಅರ್ಹ ಕುಟುಂಬಗಳಿಗೆ ಆಹಾರ ಕಿಟ್ ವಿತರಿಸಲಾಯಿತು.
ಮೊದಲಿಗೆ SYS SSF ನೂತನ ತಾಜುಲ್ ಪುಖಹಾಅ್ ಸುನ್ನೀ ಸೆಂಟರ್ ಕಛೇರಿಯನ್ನು SYS ರಾಜ್ಯಾಧಕ್ಷರಾದ ಉಸ್ಮಾನ್ ಸಅದಿ ಪಟ್ಟೋರಿಯವರು ಉದ್ಘಾಟಿಸಿದರು. ನಂತರ ತೋಟಾಲ್ ಜಮಾಅತ್ ಖತೀಬರಾದ ಬಹು ಮುಹಿಯದ್ದೀನ್ ಸಅದಿ ಯವರ ನೇತೃತ್ವದಲ್ಲಿ ಮೌಲಿದ್ ಮಜ್ಲಿಸ್ ನಡೆಯಿತು ಮತ್ತು ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ರಾಜ್ಯಧ್ಯಕ್ಷರಾದ ಉಸ್ಮಾನ್ ಸಅದಿ ಯವರು ಸಂಘಟನೆ ಮಾಡಬೇಕಾದ ದಅವಾ ಹಾಗೂ ಸಮಾಜ ಮುಖಿ ಕಾರ್ಯಗಳ ಬಗ್ಗೆ ವಿವರಿಸಿ ಸಮಿತಿಗೆ ಶುಭ ಹಾರೈಸಿದರು.
SSF ಮುಡಿಪು ಡಿವಿಷನ್ ಅಧ್ಯಕ್ಷರುರಾದ ಮನ್ಸೂರು ಹಿಮಮಿ, SSF ಯುನಿಟ್ ನಿರೀಕ್ಷಕರು ಹಾಗೂ ಸೆಕ್ಟರ್ ಕಾರ್ಯದರ್ಶಿ ಹಾರಿಸ್ ಸಖಾಫಿ, ತೋಟಾಲ್ ಜಮಾಅತ್ ಅದ್ಯಕ್ಷರಾದ ಟಿ ಎಸ್ ಇಸ್ಮಾಯಿಲ್ ನಟ್ಟಿಹಿತ್ಲು, ಎಸ್ ವೈ ಎಸ್ ಮೋಂಟುಗೋಳಿ ಸೆಂಟರ್ ಮಾಜಿ ಅಧ್ಯಕ್ಷರಾದ ಮುಹಮ್ಮದ್ ಮದನಿ ಸಾಮಣಿಗೆ, ಬಾವ ಹಾಜಿ ನಡುಪದವು, ಆಲಿಕುಂಞ ಮೋಂಟುಗೋಳಿ, ಸಿದ್ದೀಖ್ ಸಖಾಫಿ ಮೂಳೂರು, ಸುಲೈಮಾನ್ ಹಾಜಿ ಮೊಂಟೆಪದವು ಬಾವ ಹಾಜಿ ಪಡಿಕ್ಕಲ್, ಬಶೀರ್ ಮಜಲ್, ಹಸನ್ ಮುಸ್ಲಿಯಾರ್ ವಿದ್ಯಾನಗರ, ಅಹ್ಮದ್ ಕುಂಞ ನಟ್ಡಿಹಿತ್ಲು, ಹೈದರ್ ಮಲಿ ಟಿಂಬರ್, ಸೆಕ್ಟರ್ ಅಧ್ಯಕ್ಷರುರಾದ ಅಝರ್ ಮರಿಕ್ಕಳ, ಅಬ್ಧುಲ್ ಹಮೀದ್ ದಮಾಮ್, ಎನ್ ಎಸ್ ಶರೀಫ್ ಇಂಜಿನಿಯರ್, ನಿಯಾಝ್ ಪಡಿಕ್ಕಲ್, ಇಕ್ಬಾಲ್ ಸುಟ್ಟ, ಫಯಾಝ್ ಬಾನೋಟು ಹಾಗೂ ಹಲವಾರು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
SYS ಡಿ.ಜಿ ಕಟ್ಟೆ ಬ್ರಾಂಚ್ ಪ್ರ.ಕಾರ್ಯದರ್ಶಿ ಇಕ್ಬಾಲ್ ಕೈರಂಗಳ ಸ್ವಾಗತಿಸಿದರು.
ಶಾಖೆಯ ವತಿಯಿಂದ ಅರ್ಹ ಕುಟುಂಬಗಳ ಮನೆ ಬಾಗಿಲಿಗೆ ಅಹಾರ ಕಿಟ್ಗಳನ್ನು ತಲುಪಿಸಲಾಯಿತು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.