ಬೆಂಗಳೂರು (www.vknews.com): ರಾಜ್ಯದ ಮುಸ್ಲಿಮರ ಶೈಕ್ಷಣಿಕ ಪ್ರಗತಿ, ಸಾಮಾಜಿಕ ಮುನ್ನಡೆ, ರಾಜಕೀಯ ಪ್ರಾತಿನಿಧ್ಯ ,ಔದ್ಯೋಗಿಕ ಅವಕಾಶ, ಆರ್ಥಿಕ ಅಭಿವೃದ್ಧಿ ಮೊದಲಾದ ಕ್ಷೇತ್ರಗಳಲ್ಲಿ ಸಮುದಾಯದ ಸಮಗ್ರವಾದ ಸಬಲೀಕರಣದ ಲಕ್ಷ್ಯದೊಂದಿಗೆ 2019 ರಲ್ಲಿ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ ಪಿ ಉಸ್ತಾದ್ ನೇತೃತ್ವ ದಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್ ಎಂಬ ಬಹು ನಿರೀಕ್ಷಿತ ಸಂಘಟನೆಗೆ ರೂಪು ನೀಡಲಾಗಿತ್ತು.ಕಳೆದ ಮೂರು ವರ್ಷಗಳಲ್ಲಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಜಿಲ್ಲಾ, ತಾಲೂಕು,ಬ್ಲಾಕ್,ಗ್ರಾಮ ಸಮಿತಿ ಎಂಬ ಘಟಕಗಳು ಅಸ್ತಿತ್ವಕ್ಕೆ ಬಂದಿದೆ.
ಈ ನವೆಂಬರ್ 1 ರಿಂದ 30 ರವರೆಗೆ ಸಂಘಟನೆಗೆ ಪ್ರಾಥಮಿಕ ಸದಸ್ಯರನ್ನು ಸೇರ್ಪಡೆ ಗೊಳಿಸಲಾಗುತ್ತಿದೆ.ಇದರ ಪೂರ್ವ ಭಾಗಿಯಾಗಿ ಸದಸ್ಯತನ ಅಭಿಯಾನವನ್ನು ಕಳೆದ ತಿಂಗಳು ಮರ್ಕಝ್ ನಲ್ಲಿ ಸುಲ್ತಾನುಲ್ ಉಲಮಾ ಎಪಿ ಉಸ್ತಾದ್ ರವರು ಘೋಷಣೆ ಮಾಡಿದ್ದಾರೆ.ಅತೀ ಹೆಚ್ಚಿನಸದಸ್ಯರನ್ನು ಸೇರಿಸುವಂತೆ ಅವರು ನೀಡಿರುವ ಕರೆಗೆ ರಾಜ್ಯಾದ್ಯಂತ ಅಭೂತಪೂರ್ವ ಬೆಂಬಲ ದೊರೆಯುತ್ತಿದೆ.ಖಾಝಿ ಖುರ್ರತ್ತುಸ್ಸಾದಾತ್ ಸಯ್ಯಿದ್ ಫಝಲ್ ಕೋಯಮ್ಮ ತಂಙಲ್ ಕೂರ, ಅಂತರ್ಜಾಲ ಮೂಲಕ ಪ್ರಥಮ ಸದಸ್ಯತನ ಪಡೆದಿದ್ದು ,ಇದು ಸಾರ್ವಜನಿಕರಿಗೆ ಉತ್ಸಾಹವನ್ನು ಉಂಟು ಮಾಡಿದೆ.ಕೇರಳ ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿ ಸಯ್ಯಿದ್ ಬದ್ರುಸ್ಸಾದಾತ್ ಖಲೀಲ್ ಬುಖಾರಿ ತಂಙಲ್ ಕಡಲುಂಡಿ ಕೊಡಗಿನಲ್ಲಿ ಮಾಜಿ ಸಚಿವರು, ಶಾಸಕರಾದ ಯುಟಿ ಖಾದರ್ ಅವರಿಗೆ ಸದಸ್ಯತ್ವ ನೀಡುವ ಮೂಲಕ ಸದಸ್ಯತ್ವ ಅಭಿಯಾನಕ್ಕೆ ಇನ್ನಷ್ಟು ಬಲ ಬಂದಿದೆ.ಇದೀಗ ರಾಜ್ಯದ ವಿವಿಧ ಜಿಲ್ಲಾ ವ್ಯಾಪ್ತಿಯಲ್ಲಿ ಅನೇಕ ನಾಯಕರು ಸದಸ್ಯತನ ಪಡೆಯುವ ಮೂಲಕ ಅಭಿಯಾನ ಬಿರುಸಿನಿಂದ ಸಾಗುತ್ತಿದೆ.
ರಾಜ್ಯ ದ 31 ಜಿಲ್ಲೆಗಳಲ್ಲೂ ಕರ್ನಾಟಕ ಮುಸ್ಲಿಂ ಜಮಾಅತ್ ಅಸ್ತಿತ್ವಕ್ಕೆ ಬರಲಿದ್ದು,ಸದಸ್ಯತನ ಅಭಿಯಾನ ಇಡೀ ರಾಜ್ಯ ದಲ್ಲಿ ಮುಸ್ಲಿಂ ಸಮುದಾಯದಲ್ಲಿ ಹೊಸ ಸಂಚಲನವನ್ನು ಉಂಟುಮಾಡಿದೆ.
ಆದುದರಿಂದ ಇಂಡಿಯನ್ ಗ್ರ್ಯಾಂಡ್ ಮುಫ್ತಿಉಸ್ತಾದರ ಹೇಳಿಕೆಯ ನಿರ್ದೇರ್ಶನವನ್ನು ಪಾಲಿಸುವ18 ವರ್ಷ ಮೇಲ್ಫಟ್ಟ ಸರ್ವರೂ ಮುಸ್ಲಿಂ ಜಮಾಅತ್ ಸದಸ್ಯತನ ಪಡೆಯೋಣ.ಸಮುದಾಯದ ಏಳಿಗಾಗಿ ನಮ್ಮಿಂದಾಗುವ ಎಲ್ಲಾ ಸೇವೆಗಾಗಿ ಮುಸ್ಲಿಂ ಜಮಾಅತ್ ನೊಂದಿಗೆ ಕೈ ಜೋಡಿಸೋಣ ಅಲ್ಲಾಹು ಅನುಗ್ರಹಿಸಲಿ- ಆಮೀನ್
ಪ್ರಕಟಣೆ: ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಆಯ್ಕೆ ಮಂಡಳಿ ಬೆಂಗಳೂರು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.