ಮುಲ್ಕಿ (www.vknews.com) : ಸೆವೆನ್ ಸ್ಟಾರ್ ಸ್ಪೋರ್ಟಿಂಗ್ ಕ್ಲಬ್, ಕಾರ್ನಾಡ್ ಇದರ 2020-21ರ ಸಾಲಿನ ವಾರ್ಷಿಕ ಮಹಾಸಭೆಯು ನಗರ ಪಂಚಾಯತ್ ಸಮೀಪದ ಸಮುದಾಯ ಭವನದಲ್ಲಿ ಮಾಜಿ ವಾಯುಪಡೆಯ ಯೋಧ, ಉಧ್ಯಮಿ, ಸಮಾಜ ಸೇವಕ ಎಂ.ಬಿ. ಖಾನ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಲೆಕ್ಕ ಪತ್ರ ಹಾಗೂ ವಾರ್ಷಿಕ ವರದಿ ಮಂಡಿಸಿದ ನಂತರ ನೂತನ 2021-22ನೇ ಸಾಲಿನ ಪಧಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ನೂತನ ಅಧ್ಯಕ್ಷರಾಗಿ ಉಧ್ಯಮಿ ಎಂ. ರಿಜ್ವಾನ್ ಬಪ್ಪನಾಡ್ ಅವಿರೋಧವಾಗಿ ಆಯ್ಕೆಯಾದರು.
ಸಂಸ್ಥೆಯ ಗೌರವ ಅಧ್ಯಕ್ಷರುಗಳಾಗಿ ಎಂ.ಬಿ. ಖಾನ್ ಹಾಗೂ ಪುತ್ತುಬಾವ, ಉಪಾಧ್ಯಕ್ಷರುಗಳಾಗಿ ರಿಯಾಝ್ ಹೆಚ್. ಕಾರ್ನಾಡ್ ಹಾಗೂ ನಿತಿನ್ ಜಿ. ಮುಲ್ಕಿ, ಪ್ರಧಾನ ಕಾರ್ಯದರ್ಶಿಯಾಗಿ ಸುನೀಲ್ ಪ್ರಸಾದ್, ಜೊತೆ ಕಾರ್ಯದರ್ಶಿಯಾಗಿ ಮುಹಮ್ಮದ್ ಸುಹೈಲ್, ಖಜಾಂಜಿಯಾಗಿ ರಿಜ್ವಾನ್ ಸುಲೈಮಾನ್, ಸಲಹೆಗಾರರಾಗಿ ಕೆ.ಎಂ. ಕಾದರ್ ರವರನ್ನು ಆಯ್ಕೆಯಾದರು.
ಸಮಿತಿಯ ಸದಸ್ಯರುಗಳಾಗಿ ನಾಸೀರ್ ಕಲ್ಪಂಡೆ, ಎ.ಕೆ. ಅಶ್ರಫ್ ಮುಲ್ಕಿ, ಹಕೀಮ್ ಮುಲ್ಕಿ, ರಹಿಮಾನ್, ಶರೀಫ್ ಎಂ.ಎ, ರಿಯಾಝ್ ಕೊಳ್ನಾಡ್, ಅಸ್ಲಾಂ, ಸಮೀರ್ ಕಿಲ್ಪಾಡಿ, ಇಸ್ಮಾಯಿಲ್, ಇರ್ಷಾದ್, ರಹೀಮ್ ಮಿನ್ಹಲ್ ಹಾಗೂ ಸೀರಾಜ್ ನೇಮಕಗೊಂಡರು.
ಸಂಸ್ಥೆಯ ಗಲ್ಫ್ ರಾಷ್ಟ್ರಗಳ ಪ್ರತಿನಿಧಿಗಳಾಗಿ ದುಬೈಯಿಂದ ನಿಖಿಲ್ ಜಿ. ಮುಲ್ಕಿ, ಮಸ್ಕತ್ ನಿಂದ ಮೋಹನ್ ಕುಮಾರ್, ಸೌದಿ ಅರೇಬಿಯಾದಿಂದ ಮನ್ಸೂರ್ ರಿಯಾದ್, ಬಹರೈನ್ ನಿಂದ ಶಮೀಮ್ ಅಕ್ತರ್ ಹಾಗೂ ಸಾಹುಲ್ ಹಮೀದ್ ನೇಮಕಗೊಂಡರು.
ತೌಸೀಫ್ ರವರು 2020-21ರ ಸಾಲಿನ ಲೆಕ್ಕಪತ್ರವನ್ನು ಮಂಡಿಸಿದರು. ರಿಯಾಝ್ ಹೆಚ್. ಕಾರ್ನಾಡ್ ಅವರು ಕಾರ್ಯಕ್ರಮವನ್ನು ಆಯೋಜಿಸಿ, ಸ್ವಾಗತ ಹಾಗೂ ಧನ್ಯವಾದಗೈದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.