ಕೈರಂಗಳ (www.vknews.com) : ಎಸ್ ವೈ ಎಸ್ ಹಾಗೂ ಎಸ್ ಎಸ್ ಎಫ್ ಡಿಜಿ ಕಟ್ಟೆ ಕೈರಂಗಳ ವತಿಯಿಂದ ಅನುಸ್ಮರಣಾ ಸಂಗಮ ಮತ್ತು ತಹ್ಲೀಲ್ ಮಜ್ಲಿಸ್ ದಿನಾಂಕ 02/12/2021 ಗುರುವಾರ ಮಗ್ರಿಬ್ ನಮಾಝ್ ಬಳಿಕ ತಾಜುಲ್ ಪುಖಹಾಅ್ ಸುನ್ನಿ ಸೆಂಟರ್ ನಲ್ಲಿ ನಡೆಯಿತು.
ಬದ್ರಿಯಾ ಜುಮಾ ಮಸ್ಜಿದ್ ಲೆಕ್ಕಸಿರಿ ಅಧ್ಯಕ್ಷರಾದ ಕೆ ಎಚ್ ಹಸನ್ ಮುಸ್ಲಿಯಾರ್ ರವರ ನೇತೃತ್ವದಲ್ಲಿ ತಹ್ಲೀಲ್ ಮಜ್ಲಿಸ್ ನಡೆಯಿತು.ಎಸ್.ವೈ.ಎಸ್ ಡಿಜಿ ಕಟ್ಟೆ ಅಧ್ಯಕ್ಷರಾದ ಎನ್.ಎಸ್ ಅಬ್ಧುಲ್ ರಹ್ಮಾನ್ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕರ್ನಾಟಕ ರಾಜ್ಯ ಎಸ್ ಎಸ್ ಎಫ್ ಕಾರ್ಯದರ್ಶಿಯಾದ ಮುನೀರ್ ಸಖಾಫಿ ಉಳ್ಳಾಲ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಎಸ್ ವೈ ಎಸ್ ದ.ಕ ವೆಸ್ಟ್ ಜಿಲ್ಲಾ ಅಧ್ಯಕ್ಷರಾದ ಮುಹಮ್ಮದ್ ಅಲೀ ಸಖಾಫಿ ಅಶ್ ಅರಿಯ್ಯ ರವರು ಅನುಸ್ಮರಣಾ ಪ್ರಭಾಷಣ ಮಾಡುತ್ತಾ ಜೀಲಾನಿ ತಂಙಳ್, ತಾಜುಲ್ ಉಲಮಾ, ನೂರುಲ್ ಉಲಮಾ ಮಂಜನಾಡಿ ಉಸ್ತಾದ್, ಸುರಿಬೈಲ್ ಉಸ್ತಾದ್, ತಾಜುಶ್ಶರೀಅ, ತಾಜುಲ್ ಪುಖಹಾಅ್, ಶರಪುಲ್ ಉಲಮಾ ಮತ್ತೆ ನಮ್ಮಿಂದಗಲಿದ ಮಹಾತ್ಮರ ಗುಣಗಾನ ಮಾಡುತ್ತಾ ಅವರು ಧಾರ್ಮಿಕ ವಾಗಿ ಶೈಕ್ಷಣಿಕ ವಾಗಿ ಸಮಾಜಿಕವಾಗಿ ಮಾಡಿದಂತ ತ್ಯಾಗ ಮತ್ತು ಪಟ್ಟ ಕಷ್ಟಗಳನ್ನು ನೆರೆದ ಜನೋಸ್ತೋಮದ ಮುಂದೆ ಸವಿಸ್ತಾರವಾಗಿ ವಿವರಿಸಿದರು.
ಎಸ್ ಎಸ್ ಎಫ್ ದ.ಕ ಜಿಲ್ಲಾ ವೆಸ್ಟ್ ನಾಯಕರುರಾದ ಖುಬೈಬ್ ತಂಙಳ್ ಉಳ್ಳಾಲ, ಕರ್ನಾಟಕ ರಾಜ್ಯ ಎಸ್ ಎಸ್ ಎಫ್ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮೊಂಟೆಪದವು, ಎಸ್ ವೈ ಎಸ್ ಜಿಲ್ಲಾ ಉಪಾಧ್ಯಕ್ಷರಾದ ಮಹಮ್ಮದ್ ಮದನಿ ಸಾಮಣಿಗೆ ಮೊಲಾದವರು ಶುಭಾಶಂಶೆಯನ್ನು ಕೋರಿದರು. ಕಾರ್ಯಕ್ರಮದಲ್ಲಿ ಎಸ್ ವೈ ಎಸ್ ಮೋಂಟುಗೋಳಿ ಸೆಂಟರ್ ಕೋಶಾಧಿಕಾರಿ ಬಾವ ಹಾಜಿ ಪಡಿಕ್ಕಲ್, ಹಿರಿಯರಾದ ಉಮರ್ ಹಾಜಿ ಸುಟ್ಟ, ಹೈದರ್ ಕೈರಂಗಳ, ಆಲಿಕುಂಞಿ ಮೋಂಟುಗೋಳಿ, ಅಹ್ಮ ಕುಂಞಿ ವಿಧ್ಯಾನಗರ, ಅಬ್ಧುಲ್ ರಹಿಮಾನ್ ವಿಧ್ಯಾನಗರ, ಎಸ್.ಎಸ್.ಎಫ್ ಡಿಜಿ ಕಟ್ಟೆ ಅಧ್ಯಕ್ಷರಾದ ಇಕ್ಬಾಲ್ ಸುಟ್ಟ. ಸೆಕ್ಟರ್ ಕಾರ್ಯದರ್ಶಿ ನಿಯಾಝ್ ಪಡಿಕ್ಕಲ್ , ರಿಫಾಯಿ ಮಸ್ಜಿದ್ ಗುಂಡುಕಟ್ಟೆ ಅಧ್ಯಕ್ಷ ಹೈದರ್ ಮಲಿ, ಮುಹಿಯ್ಯದ್ದೀನ್ ಜುಮಾ ಮಸೀದಿ ತೋಟಾಲು ಇದರ ಕಾರ್ಯದರ್ಶಿ ಖಲೀಲ್ ಕೈರಂಗಳ, ಎನ್ ಎಸ್ ಶರೀಫ್ ಇಂಜಿನಿಯರ್ ಮೊದಲಾದವರು ಅತಿಥಿಗಳಾಗಿದ್ದರು.
ಈ ಸಂದರ್ಭದಲ್ಲಿ SYS SSF ನ ವತಿಯಿಂದ ದ.ಕ ವೆಸ್ಟ್ ಜಿಲ್ಲಾ ಅಧ್ಯಕ್ಷರುರಾಗಿ ಆಯ್ಕೆಯಾದ ಮುಹಮ್ಮದ್ ಅಲಿ ಸಖಾಫಿ ಸುರಿಬೈಲ್ ಉಸ್ತಾದ್ ಮತ್ತು ಉಪಾಧ್ಯಕ್ಷರು ರಾಗಿ ಆಯ್ಕೆಯಾದ ಮುಹಮ್ಮದ್ ಮದನಿ ಸಾಮನಿಗೆ ಹಾಗೂ SSF ಕರ್ನಾಟಕ ರಾಜ್ಯ ಕಾರ್ಯದರ್ಶಿ ಯಾಗಿ ಆಯ್ಕೆ ಯಾದ ಮುನೀರ್ ಕಾಮಿಲ್ ಸಖಾಫಿ ಅಲ್ ಮದೀನಾ ಇವರಿಗೆ ಶಾಲು ಹೊದಿಸಿ ಅಭಿನಂದಿಸಲಾಯಿತು.
SYS ಬ್ರಾಂಚ್ ಕಾರ್ಯದರ್ಶಿ ಇಕ್ಬಾಲ್ ಕೈರಂಗಳ ಕಾರ್ಯಕ್ರಮವನ್ನು ನಿರೂಪಿಸಿ ಸ್ವಾಗತಿಸಿದರು. SSG ಯುನಿಟ್ ಕಾರ್ಯದರ್ಶಿ ಫಯಾಝ್ ಬಾನೋಟ್ ಧನ್ಯವಾದ ಗೈದರು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.