(www.vknews.com) ; ಮನುಷ್ಯರ ಮೇಲೆ ಅನಗತ್ಯವಾಗಿ ಎಸಗುವ ಅಕ್ರಮ – ಅನ್ಯಾಯಗಳು ದಾಳಿ- ದಬ್ಬಾಳಿಕೆಗಳು ಮೋಸ -ವಂಚನೆಗಳು ಹಲ್ಲೆ- ಹತ್ಯೆಗಳು ಅದು ಮರ್ಧಿತರ ಕಣ್ಣೀರಿಗೆ ಹೇತುವಾಗುವ ಮೂಲಕ ಅವರ ಶಾಪಕ್ಕೆ ಗುರಿಯಾಗಿ ಅಂತಿಮವಾಗಿ ಅದರ ದುಷ್ಪರಿಣಾಮವನ್ನು ಮರ್ಧಕರು ಈ ಜಗತ್ತಿನಲ್ಲೇ ಅನುಭವಿಸ ಬೇಕಾಗುತ್ತದೆ. ದೇವನಿಗೆ ಎಸಗುವ ಎಪ್ಪತ್ತು ಅಪಚಾರಗಳಿಗೆ ಹೋಲಿಕೆ ಮಾಡಿದರೆ ಮಾನವನಿಗೆ ಎಸಗುವ ಕೇವಲ ಒಂದೇ ಒಂದು ಅನ್ಯಾಯವು ಗಂಭೀರ ಸ್ವರೂಪದ್ದಾಗಿದೆ. ಅನ್ಯಾಯಕ್ಕೊಳಗಾದವರ ಪ್ರಾರ್ಥನೆ ಮತ್ತು ದೇವನ ಮಧ್ಯೆ ಯಾವುದೇ ರೀತಿಯ ಮುಚ್ಚುಮರೆ ಇರುವುದಿಲ್ಲ. ಹೃದಯನೊಂದು ಇಡುವ ಮೊರೆಯನ್ನು ಅತೀ ಶೀಘ್ರದಲ್ಲೇ ಆಲಿಸಲಾಗುವುದು. ಆದ್ದರಿಂದ ಮರ್ಧಿತರ ಶಾಪಕ್ಕೀಡಾಗುವವರಿಗೆ ಆಪತ್ತು ಕಟ್ಟಿಟ್ಟ ಬುತ್ತಿ ಎಂದು ಮುಲ್ಕಿ ಜುಮಾ ಮಸೀದಿಯ ಖತೀಬರು ಜುಮಾ ಭಾಷಣದಲ್ಲಿ ಹೇಳಿದ್ದಾರೆ.
ಯಾವುದೇ ಜಾತಿ ಧರ್ಮ ವರ್ಗ ವರ್ಣದ ವ್ಯತ್ಯಾಸ ಇಲ್ಲದೇ ಸರ್ವ ಮರ್ಧಿತರ ಪ್ರಾರ್ಥನೆಗೆ ಅಲ್ಲಾಹನು ಅತೀ ಜರೂರತ್ತಾಗಿ ಉತ್ತರ ನೀಡುತ್ತಾನೆ ಎಂದು ಪ್ರವಾದಿ ಸ ಅ ನುಡಿದಿದ್ದು ಎಷ್ಟೇ ನಮಾಜ್, ರೋಜಾ, ಸತ್ಕರ್ಮಗಳನ್ನು ಮಾಡಿದರೂ ಮಾನವನಿಗೆ ಮಾಡುವ ಅನ್ಯಾಯದಿಂದಾಗಿ ಇದೆಲ್ಲವೂ ನಿಷ್ಪಲವಾಗುತ್ತದೆ. ಇಂತವರು ಇಹ ಲೋಕದಲ್ಲಿ ಶಿಕ್ಷೆ ಅನುಭವಿಸುವುದೇ ಅಲ್ಲದೇ ಪರಲೋಕದ ಕಟಕಟೆಯಲ್ಲೂ ಸರ್ವವೂ ನಷ್ಟ ಹೊಂದಿ ದಿವಾಳಿಯಾಗಿ ಮಾರ್ಪಾಡು ಹೊಂದುವುದಾಗಿ ಧರ್ಮದ ಪಾಠ ನಮಗೆ ಕಲಿಸಿ ಕೊಟ್ಟಿದೆ.
ಆದರೆ ಇದನ್ನು ಜನರು ಗಂಭೀರವಾಗಿ ಪರಿಗಣಿಸದೇ ತಮಗೆ ತೋಚಿದಂತೆ ಮಾನವರ ಮೇಲೆ ಧರ್ಮ – ಜಾತಿ – ಭಾಷೆ,ಗಡಿ,ವರ್ಗ,ವರ್ಣ, ರಾಜಕೀಯ ಕಾರಣಕ್ಕಾಗಿ ಯದ್ವಾ ತದ್ವಾ ದಾಳಿ ದಬ್ಬಾಳಿಕೆಗಳು ಮಾಡಿ ಇಹ ಪರವನ್ನು ನಷ್ಟ ಪಡಿಸುತ್ತಿರುವುದು ದುಖಃದ ಸಂಗತಿ ಎಂದು ಹೇಳಿದ ಖತೀಬರು ಯಾವೊಂದು ಧರ್ಮಗಳು ಜನರ ಮೇಲೆ ಅನುಕಂಪ ತೋರಿಸುವ ಹೆಸರಲ್ಲಿ ಉದಯ ಗೊಂಡಿತೋ ಅಂತಹ ಧರ್ಮಗಳ ಹೆಸರಲ್ಲೇ ಜನರ ರಕ್ತ ಹರಿಸುವ ನೀಚ ಪ್ರವೃತಿಯನ್ನು ಧರ್ಮದ ಅನುಯಾಯಿಗಳೆಂದು ಕೆರೆಸಿ ಕೊಳ್ಳುವವರು ಬೆಳೆಸಿ ಕೊಂಡಿರುವುದು ವಿಧಿ ವಿಪರ್ಯಾಸ ಎಂದು ನುಡಿದರು.
ಇಸ್ಲಾಂ ಧರ್ಮದ ಪ್ರಕಾರ ಯಾವೊಬ್ಬ ವ್ಯಕ್ತಿಗೂ ಆತ ಯಾವುದೇ ಜಾತಿ ಜನಾಂಗದವನೇ ಆಗಿದ್ದರೂ ಅನ್ಯಾಯ ಎಸಗುವುದು ಘೋರ ಅಪರಾಧವಾಗಿದೆ. ಅಂತವರು ಪರಲೋಕದಲ್ಲಿ ರಕ್ಷೆ ಹೊಂದ ಬೇಕೆಂದಾದರೆ ಮರ್ದಿತನಿಂದ ಕ್ಷಮೆ ಕೋರುವುದು ಕಡ್ಡಾಯವಾಗಿದೆ.ಅಲ್ಲಾಹನಿಗೆ ಮಾಡುವ ತಪ್ಪುಗಳನ್ನು ಅವನು ಒಂದು ವೇಳೆ ಮನ್ನಿಸಿದರೂ ಜನರಿಗೆ ಮಾಡುವ ಅನ್ಯಾಯವನ್ನು ಅವನು ಮನ್ನಿಸುವುದಿಲ್ಲ ಎಂಬ ತತ್ವ ಇಸ್ಲಾಮಿನ ಬಾಲಪಾಠದಲ್ಲಿ ಸೇರಿದೆ ಎಂದು ಅವರು ಎಚ್ಚರಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.