(www.vknews.com) ; ಮಾಣಿ ಕೇಂದ್ರೀಕರಿಸಿ ಎಂಟು ಗ್ರಾಮಗಳಲ್ಲಿ ಶೈಕ್ಷಣಿಕ ಅಭಿವೃದ್ದಿಗೆ ಪುತ್ತೂರು ಕಮ್ಯೂನಿಟಿ ಸೆಂಟರ್ ಮಾದರಿಯಲ್ಲಿ ಯೋಜನೆ ರೂಪಿಸಲು ಸೋಶಿಯಲ್ ಇಕ್ವಾ ಫೆಡರೇಶನ್ ಮಾಣಿ ಸಂಸ್ಥೆಯು ಸಿದ್ದತೆ ನಡೆಸಿದ್ದು, ಮುಂದಿನ ಶೈಕ್ಷಣಿಕ ವರ್ಷಕ್ಕೆ ಗ್ರಾಮದ ಪ್ರತೀ ವಿದ್ಯಾರ್ಥಿಯ ಕುರಿತ ಸಮಗ್ರ ಮಾಹಿತಿ ಪಡೆಯಲು ನಿರ್ಧರಿಸಿದೆ. ಕಮ್ಯೂನಿಟಿ ಸೆಂಟರ್ ಯಾವ ರೀತಿ ಕಾರ್ಯಾಚರಿಸುತ್ತಿದೆ, ಅದರ ಫಾರ್ಮೆಟ್ ಮತ್ತು ಪ್ರಾಜೆಕ್ಟ್ ಗಳ ಅಧ್ಯಯನ ನಡೆಸಲು ಸೋಶಿಯಲ್ ಇಕ್ವಾ ಫೆಡರೇಶನ್ ಸಂಸ್ಥೆಯ ಪದಾಧಿಕಾರಿಗಳು ಇತ್ತೀಚೆಗೆ ಸಂಸ್ಥೆಗೆ ಬೇಟಿ ಕೊಟ್ಟು ಸಮಗ್ರ ಮಾಹಿತಿ ಪಡೆದರು.
ಈಗಾಗಲೇ ಹಲವಾರು ಸಾಮಾಜಿಕ ಚಟುವಟಿಕೆಯಲ್ಲಿ ಸಕ್ರೀಯವಾಗಿರುವ ಸೋಶಿಯಲ್ ಇಕ್ವಾ ಫೆಡರೇಶನ್ ಇತ್ತೀಚೆಗೆ ಆರೋಗ್ಯ ವಿಭಾಗದಲ್ಲಿ ಆಂಬುಲೆನ್ಸ್ ಒಂದನ್ನು ಜನಸೇವೆಗಾಗಿ ಕೊಡುಗೆ ನೀಡಿದೆ. ಮಾಣಿ ಕೇಂದ್ರೀಕರಿಸಿ ಸೆಂಟರ್ ನಿರ್ಮಿಸುವ ಪ್ರಯತ್ನದಲ್ಲಿ ತೊಡಗಿರುವ ಸಂಸ್ಥೆಯಲ್ಲಿ ಸಾಮಾಜಿಕ ಧುರೀಣರು ಇದ್ದು, ಯುವ ಉತ್ಸಾಹಿ ಉಧ್ಯಮಿಗಳು, ಚಿಂತಕರು ಇರುವುದು ಯೋಜನೆಯನ್ನು ಪರಿಣಾಮಕಾರಿಯಾಗಿ ರೂಪುಗೊಳಿಸಲು ಸಾಧ್ಯವಾಗಲಿದೆ.
ಶಿಕ್ಷಣ ಕ್ಷೇತ್ರದಲ್ಲಿ ದುಡಿಯಲು ಅಧ್ಯಯನ – ಯೋಜನೆ ಮತ್ತು ವೀಕ್ಷಣೆಗಾಗಿ ಬೇಕಿರುವ ವೈಜ್ಞಾನಿಕ ಪದ್ದತಿಯ ಕುರಿತಂತೆ ತಿಳಿಯಲು ಸಂಸ್ಥೆಯ ಶೈಕ್ಷಣಿಕ ಕಾರ್ಯದರ್ಶಿ ಲತೀಫ್ ಕೊಡಾಜೆ ನೇತೃತ್ವದಲ್ಲಿ ನಿಯೋಗವು ಕಮ್ಯೂನಿಟಿ ಸೆಂಟರ್ ಗೆ ಬೇಟಿ ಕೊಟ್ಟು ಇಲ್ಲಿನ ಕಾರ್ಯಾಚರಣೆ ವೀಕ್ಷಿಸಿದರು. ನಾವು ಸಮಾನ ಗುರಿ, ಸಹಯೋಗದ ಪರಿಶ್ರಮ ಎಂಬ ಉದ್ದೇಶವನ್ನು ಹೊಂದಿದ್ದೇವೆ. ಅತ್ಯುತ್ತಮ ಪದ್ದತಿಯನ್ನು ಪರಸ್ಪರ ಕೊಡುಕೊಳ್ಳುವಿಕೆ ಮೂಲಕ ಸಮುದಾಯದ ಸಬಲೀಕರಣಕ್ಕೆ ದುಡಿಯುವುದು ಇಂದಿನ ಅನಿವಾರ್ಯತೆ. ಆಲೋಚನೆ ಸಂಗ್ರಹಿಸುವುದು, ಅದರ ಮೂಲಕ ಪರಿಣಾಮಕಾರಿ ಪ್ರಯೋಗವನ್ನು ಎಲ್ಲರೂ ಅನುಸರಿಸುವುದು ಇಂದಿನ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಸೋಶಿಯಲ್ ಇಕ್ವಾ ಫೆಡರೇಷನ್ ಪಧಾದಿಕಾರಿಗಳು ನಮಗೆ ಮಾದರಿಯಾಗುತ್ತಾರೆ. 8 ಗ್ರಾಮಗಳಲ್ಲಿ ಶಿಕ್ಷಣ ಮತ್ತು ಆರೋಗ್ಯ ಸಬಲೀಕರಣದ ಗುರಿಯೊಂದಿಗೆ ಕಾರ್ಯಾಚರಿಸುತ್ತಿರುವ ಸಂಘಟನೆಯ ಪ್ರಯತ್ನದಲ್ಲಿ ಪಿ.ಸಿ.ಸಿ ಸಂಪೂರ್ಣ ಸಹಯೋಗ ನೀಡುವುದಾಗಿ ತಿಳಿಸಿದೆವು.
ಇದೇ ಸಂದರ್ಭದಲ್ಲಿ ಕಮ್ಯೂನಿಟಿ ಸೆಂಟರ್ ಮೂಲಕ ನೀಡಿದ ವಿದ್ಯಾರ್ಥಿ ವೇತನವನ್ನು ಸೋಶಿಯಲ್ ಇಖ್ವಾ ಫೆಡರೇಶನ್ ಮಾಣಿ ಅಧ್ಯಕ್ಷರಾದ ಅಬ್ದುಲ್ ರಹ್ಮಾನ್ ಸುಲ್ತಾನ್, ಉಪಾಧ್ಯಕ್ಷರಾದ ರಿಯಾಝ್ ಕಲ್ಲಾಜೆ, ಮತ್ತು ಕೋಶಾಧಿಕಾರಿಯಾದ ರಶೀದ್ ನೀರಪಾದೆ ಫಲಾನುಭವಿ ವಿದ್ಯಾರ್ಥಿಗಳಿಗೆ ಹಸ್ತಾಂತರಿಸಿದರು.
ನಿಯೋಗದಲ್ಲಿ ಸೋಶಿಯಲ್ ಇಖ್ವಾ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಜೈನುಲ್ ಅಕ್ಬರ್ ಕಡೇಶಿವಾಲಯ ಜೊತೆ ಕಾರ್ಯದರ್ಶಿ ಬಾತಿಶ್ ಬುಡೋಳಿ ಉಪಸ್ಥಿತರಿದ್ಧರು.ಸುನ್ನೀಟುಡೇ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.