(www.vknews.com) ; ನಮ್ಮ ನಾಡ ಒಕ್ಕೂಟ(ರಿ) ಕಾರ್ಕಳ ಘಟಕ ಇದರ ವತಿಯಿಂದ ಆಯುಷ್ಮಾನ್ ಕಾರ್ಡ್ ಹಾಗೂ ಎನ್.ಎಸ್.ಪಿ. ವಿಧ್ಯಾರ್ಥಿ ವೇತನ ಶಿಬಿರವನ್ನು “ಜುಮ್ಮಾ ಮಸೀದಿ ಬೈಲೂರು” ಇದರ ಆವರಣದಲ್ಲಿ ಆದಿತ್ಯವಾರ ದಿನಾಂಕ 12.12.2021 ರಂದು ಬೆಳಿಗ್ಗೆ ಘಂಟೆ 9.00 ಕ್ಕೆ ಆಯೋಜಿಸಲಾಗಿತ್ತು.
ಇದಕ್ಕೆ ನಮ್ಮ ನಾಡ ಒಕ್ಕೂಟ ಇದರ ಹೆಬ್ರಿ ಘಟಕ, ಉಡುಪಿ ಜಿಲ್ಲಾ ಹಾಗೂ ಸೆಂಟ್ರಲ್ ಕಮಿಟಿಯ ಸಹಕಾರವಿತ್ತು.
ಕಾರ್ಯಕ್ರಮವು ಉಸ್ತಾದ್ ನಿಝಾಮುದ್ದೀನ್, ಖತೀಬರು ಶಾಫಿ ಜುಮಾ ಮಸೀದಿ, ಬೈಲೂರು ಇವರ ದುವಾಃದೊಂದಿಗೆ ಪ್ರಾರಂಭವಾಯಿತು. ಅಧ್ಯಕ್ಷತೆಯನ್ನು ನಮ್ಮ ನಾಡ ಒಕ್ಕೂಟ, ಕಾರ್ಕಳ ತಾಲೂಕು, ಇದರ ಅಧ್ಯಕ್ಷರಾದ ಶಾಕಿರ್ ಹುಸೈನ್, ಬೈಲೂರು, ವಹಿಸಿದ್ದರು. ಮೌಲಾನಾ ಅಬ್ದುಲ್ ಹಫೀಝ್ ಅಲ್ ಕಾಸಿಮಿಯವರು ನಮ್ಮ ನಾಡ ಒಕ್ಕೂಟದ ಧ್ಯೇಯೋದ್ದೇಶಗಳಾದ ಶಿಕ್ಷಣ, ಸರಕಾರಿ ಉದ್ಯೋಗ ಹಾಗೂ ಮಕ್ಕಳ ನೈತಿಕ ಏಳಿಗೆಯ ಬಗ್ಗೆ ವಿವರಿಸಿದರು. ಡಾ. ರಿಝ್ವಾನ್ ಅಹ್ಮದ್ (ಉಪಾಧ್ಯಕ್ಷರು ಸೆಂಟ್ರಲ್ ಕಮಿಟಿ) ರವರು ಮುಖ್ಯ ವಿಷಯಗಳ ಬಗ್ಗೆ ತಮ್ಮಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಮುಖ್ಯ ಅತಿಥಿಯಾಗಿ ಖತೀಬರಾದ ನಿಝಾಮುದ್ದೀನ್ ಉಸ್ತಾದ್ ರವರು ಶಿಕ್ಷಣದ ಮಹತ್ವದ ಬಗ್ಗೆ ಅತ್ಯಂತ ಪ್ರಾಮುಖ್ಯ ವಿಷಯಗಳನ್ನು ಪ್ರಸ್ತಾಪಿಸಿದರು. ಈ ಬಾರಿಯ ಎಸ್.ಎಸ್.ಎಲ್.ಸಿ. ಯಲ್ಲಿ 92% ಅಂಕಗಳನ್ನು ಗಳಿಸಿದಂತಹ, ಜನಾಬ್ ಶಬ್ಬೀರ್, ಕಂಪನ್, ಬೈಲೂರು ಇವರ ಪುತ್ರಿಯಾದ ಫಾತಿಮಾ ಸುಫಯ್ಯಾ ರವರನ್ನು ವಿಶೇಷವಾಗಿ ಶಾಲನ್ನು ಹೊದಿಸಿ ಸಂಭಾವನೆಯನ್ನು ನೀಡುವ ಮೂಲಕ ಸನ್ಮಾನಿಸಲಾಯಿತು. ಹಾಗೂ ಕಳೆದ ಆದಿತ್ಯವಾರ (5-12-2021) ಕುಕ್ಕುಂದೂರು ಅಶ್ರಫ್ ಜುಮಾ ಮಸೀದಿಯಲ್ಲಿ ಹಮ್ಮಿಕೊಂಡಂತಹ ಕಾರ್ಯಕ್ರಮದಲ್ಲಿ ತಯಾರಾದ ಆಯುಶ್ಮಾನ್ ಕಾರ್ಡ್ಗಳನ್ನು ಮಸೀದಿಯ ಅಧ್ಯಕ್ಷರಾದ ಹನೀಫ್ ರವರಿಗೆ ಹಸ್ತಾಂತರಿಸಲಾಯಿತು.
ಕೊನೆಗೆ ಶಾಕಿರ್ ಹುಸೈನ್ ರವರು ಅಧ್ಯಕ್ಷೀಯ ಭಾಷಣವನ್ನು ಮಾಡಿದರು. ವೇದಿಕೆಯಲ್ಲಿ ಹಬೀಬ್ ಸಾಹೇಬ್ (ಅಧ್ಯಕ್ಷರು ಜುಮಾ ಮಸೀದಿ ಬೈಲೂರು),ಹೈದರ್ ಅಲಿ (ಅಧ್ಯಕ್ಷರು ತ್ವಾಹಾ ಜುಮಾ ಮಸೀದಿ, ಬೈಲೂರು), ಮನ್ಸೂರ್ ಅಹ್ಮದ್ (ಉಪಾಧ್ಯಕ್ಷರು ಕಾರ್ಕಳ ಘಟಕ), ಇಂಜಿನಿಯರ್ ನಾಸಿರ್ ಶೇಖ್ (ಕಾರ್ಯದರ್ಶಿಗಳು ಜುಮಾ ಮಸೀದಿ, ಬೈಲೂರು) ಅಬ್ದುಲ್ ರಶೀದ್ ಬೈಲೂರು,(ಜಿಲ್ಲಾ ಸದಸ್ಯರು) ಮುನವ್ವರ್ ಅಜೆಕಾರು (ಸದಸ್ಯರು ಹೆಬ್ರಿ ಘಟಕ), ನೂರ್ ನವಾಝ್, ಬೈಲೂರು, ಉಪಸ್ಥಿತರಿದ್ದರು. ಶೇಖ್ ಶಬ್ಬೀರ್ ಅಹ್ಮದ್ ಮಿಯಾರು (ಕಾರ್ಯದರ್ಶಿಗಳು ನಮ್ಮ ನಾಡ ಒಕ್ಕೂಟ, ಕಾರ್ಕಳ) ಕಾರ್ಯಕ್ರಮನ್ನು ನಿರೂಪಿಸಿ ಧನ್ಯವಾದವಿತ್ತರು.
ಮೌಲಾನಾ ಅಬ್ದುಲ್ ಹಫೀಝ್, ಅಲ್ ಕಾಸಿಮೀ.ನಮ್ಮ ನಾಡ ಒಕ್ಕೂಟ, ಕಾರ್ಕಳ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.