ಮಡಿಕೇರಿ(www.vknews.in): ವಿಜ್ಞಾನ, ವಿನಯ, ಸೇವೆ ಎಂಬ ವಾಕ್ಯದಡಿ ಮೂರು ದಶಕಗಳ ಹಾದಿ ಕ್ರಮಿಸಿ ಮುಂದೆ ಸಾಗುತ್ತಿರುವ SKSSF ಈಗಾಗಲೇ ಡಿಸೆಂಬರ್ ಒಂದರಿಂದ ಹದಿನೈದರ ತನಕ ರಾಜ್ಯಾದ್ಯಂತ ಸದಸ್ಯತ್ವ ಅಭಿಯಾನ ನಡೆಸುತ್ತಿದೆ. SKSSF ಕೊಡಗು ಜಿಲ್ಲಾ ಸಮಿತಿಯ ವತಿಯಿಂದ ‘ನಾಳೆಗೊಂದು ದೊಡ್ಡ ಹೆಜ್ಜೆ’ ಎಂಬ ಶೀರ್ಷಿಕೆಯಡಿಯಲ್ಲಿ ಇಅ್’ದಾದ್ ನಾಯಕರ ಸಂಗಮ ದಿನಾಂಕ 15/12/2021 ರ ಬುಧವಾರ ಸಮಯ ಬೆಳಿಗ್ಗೆ 09:00 ಗಂಟೆಗೆ ಸರಿಯಾಗಿ ಪೊನ್ನಂಪೇಟೆಯಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಇಬ್ರಾಹಿಂ ಫೈಝಿ ಪೇರಾಲ್ ಹಾಗೂ ಆಸಿಫ್ ವಾಫಿ ಭಾಗವಹಿಸಲಿದ್ದಾರೆ. SKSSF ಜಿಲ್ಲಾ ಹಾಗೂ ವಲಯ ಸಮಿತಿಯ ನಾಯಕರುಗಳು, SYS ಹಾಗೂ ಇತರ ಸಮಸ್ತದ ಪೋಷಕ ಸಂಘಟನೆಯ ನೇತಾರರು, ಕಾರ್ಯಕರ್ತರುಗಳು ಭಾಗವಹಿಸಲಿದ್ದಾರೆ ಎಂದು SKSSF ಕೊಡಗು ಜಿಲ್ಲಾ ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.