ಸುಳ್ಯ(ವಿಶ್ವಕನ್ನಡಿಗ ನ್ಯೂಸ್): ಡಿಸೆಂಬರ್ 14ರಂದು ಪಿ.ಎಫ್. ಐ.ಸಂಘಟನೆಯ ಮೂವರು ನಾಯಕರನ್ನು ಬಂಧಿಸಿದ್ದನ್ನು ವಿರೋಧಿಸಿ ಮತ್ತು ಬಂಧಿತ ನಾಯಕರನ್ನು ಬಿಡುಗಡೆ ಗೊಳಿಸಬೇಕೆಂದು ಆಗ್ರಹಿಸಿ ಸಂಘಟನೆಯ ಸದಸ್ಯರು ಉಪ್ಪಿನಂಗಡಿ ಪೊಲೀಸ್ ಠಾಣೆಯ ಎದುರು ನ್ಯಾಯಯುತವಾಗಿ ಧರಣಿ ನಡೆಸುತ್ತಿದ್ದರು.
ಈ ಸಂದರ್ಭದಲ್ಲಿ ನಿನ್ನೆ ರಾತ್ರಿ ಪೊಲೀಸರು ಅಪ್ರಚೋಧಿತವಾಗಿ ಪ್ರತಿಭಟನಾಕಾರರ ಮೇಲೆ ಅನ್ಯಾಯವಾಗಿ ಲಾಠಿ ಚಾರ್ಜ್ ಮಾಡಿದ್ದು, ಅಮಾಯಕ ಪ್ರತಿಭಟನಾಕಾರರು ಘಂಭೀರ ಗಾಯ ಗೊಂಡಿದ್ದಾರೆ. ಅಲ್ಲದೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಸಯ್ಯದ್ ಆತೂರ್ ಇಬ್ರಾಹಿಂ ತಂಗಲ್ ರವರಿಗೆ ಗಂಭೀರ ಗಾಯವಾಗಿದ್ದು ಪೊಲೀಸರ ಈ ಕೃತ್ಯವನ್ನು ಸುಳ್ಯ ತಾಲೂಕು ಮುಸ್ಲಿಂ ಒಕ್ಕೂಟದ ವತಿಯಿಂದ ತೀವ್ರವಾಗಿ ಖಂಡಿಸಲಾಗುತ್ತದೆ ಎಂದು ಸಂಘಟನೆಯ ಸಂಚಾಲಕ ಇಕ್ಬಾಲ್ ಎಲಿಮಲೆ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.