ಕೋಲಾರ(ವಿಶ್ವಕನ್ನಡಿಗ ನ್ಯೂಸ್):– ಜಿಲ್ಲೆಯ ಕೆಜಿಎಫ್ ಗಡಿ ಭಾಗದ ಬಡವರ ರಕ್ತ ಹೀರುತ್ತಿರುವ ಬಡ್ಡಿ ಮಾಫಿಯಾದಿಂದ ಮಹಿಳೆಯರನ್ನು ರಕ್ಷಿಸುವ ಸಂಕಲ್ಪದೊಂದಿಗೆ ಡಿಸಿಸಿ ಬ್ಯಾಂಕ್ ಬಡ್ಡಿರಹಿತ ಸಾಲ ಸೌಲಭ್ಯ ಒದಗಿಸಿದ್ದು , ಪಡೆದ ಸಾಲವನ್ನು ಸದ್ಬಳಕೆ ಮಾಡಿಕೊಂಡು ಸಕಾಲಕ್ಕೆ ಮರುಪಾವತಿ ಮಾಡಿ ಮತ್ತಷ್ಟು ನೆರವು ಪಡೆಯಿರಿ ಎಂದು ಶಾಸಕಿ ರೂಪಕಲಾ ಶಶಿಧರ್ ಕರೆ ನೀಡಿದರು.
ಜಿಲ್ಲೆಯ ಗಡಿ ಭಾಗದ ಬೆನವಾರ ಗ್ರಾಮದಲ್ಲಿ ಡಿಸಿಸಿ ಬ್ಯಾಂಕ್ ಮೂಲಕ ಮಹಿಳಾ ಸಸಹಾಯ ಸಂಘಗಳಿಗೆ ೨ ಕೋಟಿ ರೂ ಬಡ್ಡಿರಹಿತ ಸಾಲ ವಿತರಿಸಿ ಅವರು ಮಾತನಾಡುತ್ತಿದ್ದರು.
ಹೆಣ್ಣು ಮಕ್ಕಳ ಸ್ವಾವಲಂಬಿ ಬದುಕಿಗೆ ಪಕ್ಷಾತೀತವಾಗಿ ನೆರವಾಗುವ ಅಗತ್ಯವಿದೆ ಎಂದ ಅವರು , ತಾಯಂದಿರಿಗೆ ನೀಡುವ ಸಾಲ ಸೌಲಭ್ಯದಲ್ಲಿ ರಾಜಕೀಯ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿ , ಸಾಲ ನೀಡುವಾಗ ಧರ್ಮ , ಪಕ್ಷಜಾತಿಯನ್ನು ಮೀರಿ ಮಾನವೀಯ ನೆಲಗಟ್ಟಿನ ಮೇಲೆ ಡಿಸಿಸಿ ಬ್ಯಾಂಕ್ ನೆರವಾಗುತ್ತಿದೆ ಎಂದು ತಿಳಿಸಿದರು.
ಪ್ರತಿ ಕುಟುಂಬದ ಜೀವಾಳವಾಗಿರುವ ಹೆಣ್ಣು ಮಕ್ಕಳಿಗೆ ಆರ್ಥಿಕ ಶಕ್ತಿ ತುಂಬಿದ್ದೇ ಆದಲ್ಲಿ ಅದು ಇಡೀ ಕುಟುಂಬಕ್ಕೆ ಆಸರೆಯಾಗುತ್ತದೆ ಎಂಬುದನ್ನು ಅರಿತೇ ಈ ಸಾಲ ಸೌಲಭ್ಯ ಒದಗಿಸುತ್ತಿದ್ದು , ಮಹಿಳೆಯರು ಪಡೆದ ಸಾಲವನ್ನು ಸಮರ್ಪಕವಾಗಿ ಮರುಪಾವತಿ ಮಾಡಿ ಎಂದು ಕಿವಿಮಾತು ಹೇಳಿದರು.
ಡಿಸಿಸಿ ಬ್ಯಾಂಕ್ ಎಂದರೆ ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳ ಬ್ಯಾಂಕ್ ಎಂಬ ಖ್ಯಾತಿಗೆ ಒಳಗಾಗಿದೆ , ಇದಕ್ಕೆ ಕಾರಣವೂ ಇದೆ . ಅವಿಭಜಿತ ಜಿಲ್ಲೆಯಲ್ಲಿ ೭ ಲಕ್ಷ ತಾಯಂದಿರಿಗೆ ಬ್ಯಾಂಕ್ ನೆರವಾಗಿದೆ , ಆ ತಾಯಂದಿರೂ ಸಹಾ ಅಷ್ಟೇ ಮುತುವರ್ಜಿಯಿಂದ ಸಾಲ ಮರುಪಾವತಿಸಿ ತಮ್ಮ ಉಳಿತಾಯದ ಹಣ ಬ್ಯಾಂಕಿನಲ್ಲಿಟ್ಟು ಬ್ಯಾಂಕನ್ನು ಪೋಷಿಸುತ್ತಿದ್ದಾರೆ ಎಂದರು.
ಎಟಿಎಂ ಕಾರ್ಡ್ ಕ್ರಾಂತಿಕಾರಿ ಹೆಜ್ಜೆ
ಕೋಲಾರ , ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮಾತನಾಡಿ , ಬಡವರು , ಮಹಿಳೆಯರು , ರೈತರ ಪಾಲಿಗೆ ಡಿಸಿಸಿ ಬ್ಯಾಂಕ್ ದೇವಾಲ ಕಾಲಯವಿದ್ದಂತೆ , ಇದನ್ನು ಕಾಪಾಡಿಕೊಂಡು ಹೋಗುವ ಹೊಣೆಯೂ ನಿಮ್ಮದೇ ಆಗಿದೆ ಎಂದು ಮಹಿಳೆಯರಿಗೆ ಕರೆ – ನೀಡಿದರು.
ಡಿಸಿಸಿ ಬ್ಯಾಂಕ್ನಲ್ಲಿ ಸಾಲ ಪಡೆಯುವ ಮಹಿಳೆಯರು , ರೈತರು ವಂಚನೆಗೆ ಒಳಗಾಗಬಾರದು , ಭ್ರಷ್ಟಾಚಾರದ ಆರೋಪ ಕೇಳಿಬರಬಾರದು ಎಂಬ ಸದುದ್ದೇಶದಿಂದ ಪ್ರತಿ ಮಹಿಳೆಯರಿಗೂ ಎಟಿಎಂ ಕಾರ್ಡ್ ನೀಡಲಾಗುತ್ತಿದ್ದು , ಅವರ ಸಾಲದ ಹಣವೂ ಎಟಿಎಂ ಮೂಲಕವೇ ಡಾಗೆ ಅವಕಾಶ ಕಲ್ಪಿಸಲಾಗಿದೆ , ಇದೊಂದು ಕಾಂತಿಕಾರಿ ಹೆಜ್ಜೆ ಎಂದು ತಿಳಿಸಿದರು.
ಮಹಿಳೆಯರು ಸಾಲ ಪಡೆದು ಸದೃಢರಾಗಿ , ವಾರದ ಸಭೆ ನಡೆಸಿ , ಉಳಿತಾಯದ ಹಣ ಸಂಗ್ರಹಿಸಿ ಡಿಸಿಸಿ ಬ್ಯಾಂಕಿನಲ್ಲೇ ಠೇವಣಿ ಇಟ್ಟು ಬಡ್ಡಿ ಪಡೆಯುವ ಜತೆಗೆ ಮತ್ತಷ್ಟು ತಾಯಂದಿರು , ಬಡವರಿಗೆ ನೆರವು ನೀಡುವ ಶಕ್ತಿಯನ್ನು ಬ್ಯಾಂಕಿಗೆ ತುಂಬಿ ಎಂದು ತಿಳಿಸಿ , ಈಗ ನೀಡುತ್ತಿರುವ ೫೦ ಸಾವಿರ ಸಾಲವನ್ನು ಲಕ್ಷಕ್ಕೇರಿಸುವ ಆಶಯ ನಮ್ಮದಾಗಿದೆ ಎಂದರು.
ಎಪಿಎಂಸಿ ಅಧ್ಯಕ್ಷ ವಿಜಯರಾಘವರೆಡ್ಡಿ ಮಾತನಾಡಿ , ಅವಿಭಜಿತ ಜಿಲ್ಲೆಯಲ್ಲಿ ಬಡ ಮಹಿಳೆಯರಿಗೆ ಡಿಸಿಸಿ ಬ್ಯಾಂಕ್ ಆಸರೆಯಾಗಿದೆ. ಖಾಸಗಿ ಬಡ್ಡಿ ಮಾಫಿಯಾದವರಿಂದ ಮಹಿಳೆಯರನ್ನು ರಕ್ಷಿಸುವ ಬ್ಯಾಂಕಿನ ಪಯತ , ಶ್ಲಾಘನೀಯ ಎಂದರು.
ಜಿಪಂ ಮಾಜಿ ಉಪಾಧ್ಯಕ್ಷ ಅಪ್ಪಿವೆಂಕಟರಾಮರೆಡ್ಡಿ ಕಳೆದ ೧೦ ವರ್ಷಗಳ ಹಿಂದೆ ಡಿಸಿಸಿ ಬ್ಯಾಂಕ್ ದಿವಾಳಿಯಾಗಿ ಜನರ ಮನಸ್ಸಿನಿಂದ ದೂರವಾಗಿತ್ತು. ಆದರೆ ಈಗ ಗೋವಿಂದಗೌಡರು ಅಧ್ಯಕ್ಷರಾದ ನಂತರ ಬ್ಯಾಂಕ್ ರಾಜ್ಯದನಂಗೆ ಆಗಿ ಮಹಿಳೆಯರು ರೈತರ ಜೀವನಾಡಿಯಾಗಿದೆ ಎ೦ದರು.
ಕಾರ್ಯಕ್ರಮದಲ್ಲಿ ಮುಖಂಡರಾದ ಬಾಲಕೃಷ್ಣ , ರಾಧಾಕೃಷ್ಣಾರೆಡ್ಡಿ , ಎಪಿಎಂಸಿ ಮಾಜಿ ಅಧ್ಯಕ್ಷೆ ಭಾಗ್ಯಮ ಸೇರಿದಂತೆ ಜಕ್ಕರಸನಕುಪ್ಪ ಹಾಗೂ ಶ್ರೀನಿವಾಸಸಂದ್ರ ಗ್ರಾಮ ಪಂಚಾಯತಿಯ ಸದಸ್ಯರು ಹಾಜರಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.