ಕೋಲಾರ (ವಿಶ್ವಕನ್ನಡಿಗ ನ್ಯೂಸ್):- ನಗರದ ಅರಳೇಪೇಟೆಯ ದಂತ ವೈದ್ಯ ರಕ್ಷಣ್ ಎಂಡಿಎಸ್ ಸೇರಲು ಹಣಕಾಸು ತೊಂದರೆ ಅನುಭವಿಸುತ್ತಿದ್ದು , ಕೋಲಾರ ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ೨ ಲಕ್ಷ ರೂಪಾಯಿ ಆರ್ಥಿಕ ನೆರವು ಒದಗಿಸಿ ಮಾನವೀಯತೆ ಮೆರೆದರು.
ನಗರದ ಡಾ.ರಕ್ಷಣ್ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದು , ಬಡತನದಲ್ಲಿಯೇ ದಂತ ವೈದ್ಯರಾಗಿ ಹೊರಹೊಮ್ಮಿದ್ದರು. ಇತ್ತೀಚಿಗೆ ಎಂಡಿಎಸ್ ಸೀಟ್ಗಾಗಿ ನೀಟ್ ಪರೀಕ್ಷೆ ಬರೆದಿದ್ದರು.
ನೀಟ್ ಫಲಿತಾಂಶದಲ್ಲಿ ರಾಜ್ಯ ಬ್ಯಾಂಕ್ ೧೮೪ ಮತ್ತು ರಾಷ್ಟ್ರೀಯ ಬ್ಯಾಂಕ್ ೩೬೪೬ ಪಡೆದುಕೊಂಡಿದ್ದರು. ಬೆಂಗಳೂರಿನ ಆರ್ವಿ ವೈದ್ಯಕೀಯ ಕಾಲೇಜಿನಲ್ಲಿ ಸೀಟ್ ಪಡೆದುಕೊಂಡಿದ್ದರು. ಆದರೆ , ಎಂ.ಡಿ.ಎಸ್ ಸೇರಲು ತುರ್ತಾಗಿ ೬.೫೦ ಲಕ್ಷ ರೂಪಾಯಿಗಳ ಫೀ ಪಾವತಿಸಬೇಕಾಗಿತ್ತು.
ಹಣ ಪಾವತಿಸಲು ಸಾಧ್ಯವಾಗದ ಕಾರಣ ಮೊದಲ ಲಿಸ್ಟ್ನಲ್ಲಿ ದಾಖಲಾತಿ ಮಾಡಿಕೊಳ್ಳಲಾಗದೆ ಎರಡನೇ ಲಿಸ್ಟ್ ಅವಕಾಶಕ್ಕೆ ಕಾಯುತ್ತಿದ್ದರು. ಎರಡನೇ ಅವಕಾಶದಲ್ಲಿಯೂ ನಿಗದಿತ ಅವಧಿಗೆ ಫೀ ಪಾವತಿಸಿ ದಾಖಲಾತಿ ಆಗದಿದ್ದರೆ ಡಾ.ರಕ್ಷಣ್ ಎಂಡಿಎಸ್ ಸೀಟ್ ಅವಕಾಶವನ್ನು ಕಳೆದುಕೊಳ್ಳಬೇಕಾಗಿತ್ತು.
ಫೀ ಪಾವತಿಗೆ ಆರ್ಥಿಕ ತೊಂದರೆ ಎದುರಿಸುತ್ತಿದ್ದ ಡಾ.ರಕ್ಷಣ್ರ ವಿಷಯ ಪರಿಚಯಸ್ಥರ ಮೂಲಕ ಬ್ಯಾಲಹಳ್ಳಿ ಗೋವಿಂದಗೌಡರ ಗಮನ ಸೆಳೆದಿತ್ತು. ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ನೆರವಾಗುತ್ತಲೇ ಇರುವ ಡಿಸಿಸಿ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಶನಿವಾರ ಡಾ.ರಕ್ಷಣ್ರನ್ನು ಡಿಸಿಸಿ ಬ್ಯಾಂಕಿಗೆ ಆಹ್ವಾನಿಸಿ ಫೀ ಮೊತ್ತದ ಪೈಕಿ ೨ ಲಕ್ಷ ರೂಪಾಯಿಗಳನ್ನು ನೆರವಾಗಿ ನೀಡಿ ಉತ್ತಮವಾಗಿ ವ್ಯಾಸಂಗ ಮಾಡುವಂತೆ ಹಾರೈಸಿದರು.
ಸಮಾಜದಲ್ಲಿ ಡಾ.ರಕ್ಷಣ್ರಂತಹ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳು ಆರ್ಥಿಕ ಸಮಸ್ಯೆಯಿಂದ ಶೈಕ್ಷಣಿಕ ಗುರಿ ತಲುಪಲು ಸಾಧ್ಯವಾಗುತ್ತಿಲ್ಲ . ಡಾ.ರಕ್ಷಣ್ರಿಗೆ ಇನ್ನೂ ೪.೫೦ ಲಕ್ಷ ರೂಪಾಯಿಗಳ ನೆರವು ಅಗತ್ಯವಿದೆ . ಇಂತ ವಿದ್ಯಾರ್ಥಿಗಳಿಗೆ ಜನಪ್ರತಿನಿಧಿಗಳು , ದಾನಿಗಳು , ಸಮಾಜ ಸೇವಕರು ಈ ಆರ್ಥಿಕ ನೆರವು ನೀಡಲು ಉದಾರವಾಗಿ ಮುಂದಾಗಬೇಕು .
ಇದರಿಂದ ಬಡ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಗುರಿ ತಲುಪಲು ಸಾಧ್ಯವಾಗುತ್ತದೆಯೆಂದು ಮನವಿ ಮಾಡಿದರು . ಇದೇ ಸಂದರ್ಭದಲ್ಲಿ ಡಾ.ರಕಣ್ ಪೋಷಕರೊಂದಿಗೆ ಆಗಮಿಸಿ ಎಂಡಿಎಸ್ ಫೀ ಪಾವತಿಗೆ ನೆರವಾದ ಬ್ಯಾಲಹಳ್ಳಿ ಗೋವಿಂದಗೌಡರಿಗೆ ಧನ್ಯವಾದಗಳನ್ನು ಅರ್ಪಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.