ಕೋಲಾರ : (ವಿಶ್ವಕನ್ನಡಿಗ ನ್ಯೂಸ್) ಕೋಲಾರ ನಗರದ ಅಭಿವೃದ್ಧಿಗೆ ರಾಜ್ಯ ಸರ್ಕಾರದ ಮುಂದಿನ ಬಜೆಟ್ ನಲ್ಲಿ ಸುಮಾರು 120 ಕೋಟಿಯಷ್ಟು ಅನುದಾನ ತಂದು ನಗರವನ್ನು ಅಭಿವೃದ್ಧಿ ಮಾಡಲಾಗುವುದು ಎಂದು ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಆರ್ . ವೆಂಕಟಾಚಲಪತಿ ಅವರು ತಿಳಿಸಿದರು.
ತಮ್ಮ ಕಛೇರಿಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಕೋಲಾರ ನಗರದ ವಿವಿಧ ಪಾರ್ಕ್ಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ 120 ಬೆಂಚ್ ಕಲ್ಲುಗಳನ್ನು ಹಾಕಿ ಸಾರ್ವಜನಿಕರು ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ.
ದೇವರಾಜ ಅರಸು ಬಡಾವಣೆಗೆ ಉತ್ತಮ ರಸ್ತೆ ನಿರ್ಮಾಣ ಮಾಡಲಾಗಿದೆ ಈ ರಸ್ತೆಗೆ ಪುನಿತ್ ರಾಜ್ಕುಮಾರ್ ಹೆಸರನ್ನು ಇಡಲಾಗುವುದು ಎಂದರು.
ಕೋಲಾರದ ಎಸ್.ಪಿ ಆಫೀಸ್ ಪಕ್ಕದ 2 ಎಕರೆ ಜಾಗದಲ್ಲಿ ಉತ್ತಮ ಗುಣಮಟ್ಟದ ಸ್ವಿಮ್ಮಿಂಗ್ ಪೂಲ್ ನಿರ್ಮಾಣ ಮಾಡಿ ಈಜು ಕ್ರೀಡೆಗೆ ಪ್ರೋತ್ಸಾಹ ನೀಡಲಾಗುವುದು.
ದೇವರಾಜ ಅರಸು ಮೆಡಿಕಲ್ ಕಾಲೇಜು ಮುಂಭಾಗ ಇರುವ 2.5 ಎಕರೆ ಪ್ರದೇಶದಲ್ಲಿ ವಾಕಿಂಗ್ ಪಾತ್ ನಿರ್ಮಾಣ ಮತ್ತು ಪಾರ್ಕ್ ನಿರ್ಮಾಣ ಮಾಡಲಾಗುವುದು .
ಕೋಲಾರದ 09 ಕಡೆ ಬಸ್ ತಂಗುದಾಣಗಳನ್ನು ನಿರ್ಮಾಣ ಮಾಡಲು ಯೋಜನೆ ನಿರ್ಮಿಸಲಾಗಿದ್ದು , ಶೀಘ್ರದಲ್ಲಿ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.
ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ 30 ಮೂಲೆ ನಿವೇಶನಗಳನ್ನು ಇ – ಹರಾಜಿನ ಮೂಲಕ ಸಾರ್ವಜನಿಕರಿಗೆ ಹರಾಜು ಮಾಡಲಾಗುವುದು . ಹರಾಜು ಪ್ರಕ್ರಿಯೆಗೆ ನೊಂದಾಯಿಸಲು ಡಿಸೆಂಬರ್ 20ರಿಂದ ಜನವರಿ 20 ರವರೆಗೆ ಅವಕಾಶ ಕಲ್ಪಿಸಲಾಗಿದೆ .
ಆಸಕ್ತ ಸಾರ್ವಜನಿಕರು ಮೂಲೆ ನಿವೇಶನಗಳ ಹರಾಜಿನಲ್ಲಿ ಭಾಗವಹಿಸಿ ನಿವೇಶನಗಳನ್ನು ಖರೀದಿಸಬಹುದಾಗಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಕೋಲಾರ ನಗರಾಭಿವೃದ್ಧಿ ಸದಸ್ಯರಾದ ಅಪ್ಪಿ ನಾರಾಯಣಸ್ವಾಮಿ , ಮುರುಗೇಶ್ , ಸತ್ಯನಾರಾಣರಾವ್ , ಗೋಪಾಲ್ , ನಗರ ಯೋಜನಾ ಸದಸ್ಯರಾದ ಕೃಷ್ಣನಾಯಕ್ ಅವರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.