ಮಂಜೇಶ್ವರ (www. vknews.com) : ರಾಷ್ಟ್ರ ನಿರ್ಮಾಣ ಕಾರ್ಯಗಳಿಗೆ ಬದಲಾಗಿ ಪರಸ್ಪರ ದ್ವೇಷ ಸಾಧಿಸಿ ಗಲಭೆಗಳನ್ನುಂಟು ಮಾಡುವ ಉಗ್ರಗಾಮಿ ಸಂಘಟನೆಗಳು ರಾಷ್ಟ್ರಕ್ಕೆ ಅವಮಾನವಾಗಿದೆಯೆಂದೂ ಅಂತಹ ವಿಧ್ವಂಸಕ ಕೃತ್ಯಗಳಿಗೆ ವಿರುದ್ಧವಾಗಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕಾಸರಗೋಡ್ ಜಿಲ್ಲಾ ಕ್ಯಾಂಪಸ್ ಅಸಂಬ್ಲಿ ಭಿನ್ನವಿಸಿತು. ಪರಸ್ಪರ ಸಂವಾದಗಳನ್ನು ನಡೆಸಿ ವಿಚಾರ ಹೋರಾಟ ನಡೆಸುವ ಬದಲು ಆಯುಧಗಳನ್ನೆತ್ತಿ ಜನರನ್ನು ಕೊಳ್ಳುವ ರಾಜಕೀಯವು ಮೃಗೀಯತೆಯಾಗಿದೆ ಹಾಗೂ ಜಾತ್ಯಾತೀತತೆಯ ಸೌಂದರ್ಯವನ್ನು ಕಾಪಾಡಲು ಇವರು ಸನ್ನದ್ಧರಾಗಬೇಕೆಂದೂ ಎಸ್ ಎಸ್ ಎಫ್ ಕೇಳಿಕೊಂಡಿತು.
ಲೆಟ್ಸ್ ಸ್ಮೈಲ್ ಇಟ್ಸ್ ಚಾರಿಟಿ ಎಂಬ ಶೀರ್ಷಿಕೆಯಲ್ಲಿ ಮಂಜೇಶ್ವರ ಮಳ್ಹರಿನಲ್ಲಿ ನಡೆದ ಕ್ಯಾಂಪಸ್ ಅಸಂಬ್ಲಿ ಜಿಲ್ಲಾಧ್ಯಕ್ಷರಾದ ಅಬ್ದುಲ್ ರಹ್ಮಾನ್ ಸಖಾಫಿ ಪೂತಪ್ಪಲಮ್ ಅಧ್ಯಕ್ಷತೆ ವಹಿಸಿದರು. ಸಯ್ಯಿದ್ ಅಥಾವುಲ್ಲಾ ತಂಙಳ್ ಉದ್ಘಾಟಿಸಿದರು.
ಸಯ್ಯಿದ್ ಶಹೀರ್ ಅಲ್ ಬುಖಾರಿ, ಕಾಟಿಪ್ಪಾರ ಅಬ್ದುಲ್ ಖಾದಿರ್ ಸಖಾಫಿ, ರಹೀಮ್ ಸಖಾಫಿ ಚಿಪ್ಪಾರ್, ಸ್ವಾದಿಕ್ ಆವಳಂ, ಹಸನ್ ಕುಂಞಿ ಮಳ್ಹರ್, ಫಾರೂಕ್ ಪೊಸೋಟ್, ಹಾರಿಸ್ ಹಾಜಿ ಸೈಗಂ ಉಪಸ್ಥಿತರಿದ್ದರು.
ಕಣ್ಣೂರ್ ಯುನಿವರ್ಸಿಟಿ ಎಲ್ ಎಲ್ ಎಂ ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್ ವಿಜೇತ ಅಡ್ವ. ರಿಫಾಯಿ ಹಿಮಮಿಯವರನ್ನು ಸಯ್ಯಿದ್ ಜಲಾಲುದ್ದೀನ್ ಬುಖಾರಿ ಆದರಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.