ಮಂಜೇಶ್ವರ (www. vknews.com) : ಲೆಟ್ಸ್ಮೈಲ್;ಇಟ್ಸ್ ಚಾರಿಟಿ ಎಂಬ ಪ್ರಮೇಯದಲ್ಲಿ ಎಸ್ ಎಸ್ ಎಫ್ ಕಾಸರಗೋಡ್ ಜಿಲ್ಲಾ ಸಮಿತಿ ಆಯೋಜಿಸುವ ಕ್ಯಾಂಪಸ್ ಅಸೆಂಬ್ಲಿ ಮಳ್ಹರಿನಲ್ಲಿ ಪ್ರಾರಂಭಗೊಂಡಿತು.ಪ್ರೋಗ್ರಾಮ್ ಸಮಿತಿ ಚೆಯರ್ಮ್ಯಾನ್ ಸಯ್ಯಿದ್ ಅಬ್ದು ರಹ್ಮಾನ್ ಶಹೀರ್ ಅಲ್ ಬುಖಾರಿ ಧ್ವಜಾರೋಹಣ ನಡೆಸಿದರು.
ಪೊಸೋಟ್ ತಂಙಳ್ ಮಖಾಂ ಝಿಯಾರತ್ಗೆ ಸಯ್ಯಿದ್ ಜಲಾಲುದ್ದೀನ್ ಅಲ್ ಬುಖಾರಿ ನೇತೃತ್ವ ನೀಡಿದರು.
ಬಿ ಎಸ್ ಅಬ್ದುಲ್ಲಾ ಕುಂಞಿ ಫೈಝಿ, ಪಲ್ಲಂಗೋಡ್ ಅಬ್ದುಲ್ ಖಾದಿರ್ ಮದನಿ, ಅಬ್ದುಲ್ ರಹ್ಮಾನ್ ಅಹ್ಸನಿ ಮುಹಿಮ್ಮಾತ್, ಎಂ ಎಸ್ ತಂಙಳ್ ಉದ್ಯಾವರಂ, ಸಯ್ಯಿದ್ ಮುಸ್ತಫ ತಂಙಳ್ ಮಂಬುರಂ, ಹಸನ್ ಸಅದಿ ಮಳ್ಹರ್, ಉಮರುಲ್ ಫಾರೂಕ್ ಮದನಿ, ಅಬ್ದುಲ್ ರಹ್ಮಾನ್ ಸಖಾಫಿ ಪೂತಪ್ಪಲಂ, ಉಮರುಲ್ ಫಾರೂಕ್ ಪೊಸೋಟ್, ರಶೀದ್ ಸಅದಿ, ಶಂಸೀರ್ ಝೈನಿ, ಪಳ್ಳಿ ಕುಂಞಿ ಹಾಜಿ, ಹಾರಿಸ್ ಹಜಿ ಪೊಸೋಟ್ ಉಪಸ್ಥಿತರಿದ್ದರು.
ಬೆಳಿಗ್ಗೆ 7 ಗಂಟೆಗೆ ಮಹ್ಳರತುಲ್ ಬದ್ರಿಯ್ಯ ಆಧ್ಯಾತ್ಮಿಕ ಸಂಗಮ ನಡೆಯಲಿದೆ.
9 ಗಂಟೆಗೆ ಪ್ರಾರಂಭವಾಗುವ ಅಸಂಬ್ಲಿಯಲ್ಲಿ ಜಿಲ್ಲೆಯ ವಿವಿಧ ಪ್ರೊಫೆಷನಲ್, ಆರ್ಟ್ಸ್&ಸೈನ್ಸ್ ಕಾಲೇಜುಗಳ ಸಾವಿರದಷ್ಟು ವಿದ್ಯಾರ್ಥಿಗಳು ಪಾಲ್ಗೊಳ್ಳುವರು.
ಎಸ್ ಎಸ್ ಎಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ ಎನ್ ಜಾಫರ್ ಉದ್ಘಾಟಿಸುವರು.
ಸ್ಟೇಟ್ ಯುನಿವರ್ಸಿಟಿ ಆಫ್ ನ್ಯೂಯಾರ್ಕ್ ನಲ್ಲಿ ಪ್ರವೇಶಾತಿ ಲಭಿಸಿದ ಎಸ್ ಎಸ್ ಎಫ್ ಜಿಲ್ಲಾ ಎಕ್ಸಿಕ್ಯೂಟಿವ್ ಸದಸ್ಯ ಮುಹಮ್ಮದ್ ಮುದಸ್ಸಿರ್ ಮಂಜೇಶ್ವರಂಗೆ ಸಯ್ಯಿದ್ ಝೈನುಲ್ ಆಬಿದೀನ್ ಮುತ್ತುಕೋಯ ತಂಙಳ್ ಅಲ್ ಅಹದಲ್ ವಿಶೇಷವಾಗಿ ಆದರಿಸುವರು.
ಡಾ.ಅಬೂಬಕ್ಕರ್,ಡಾ.ನೂರುದ್ದೀನ್,ದೇವರ್ಶೋಲ ಅಬ್ದುಸ್ಸಲಾಂ ಮುಸ್ಲಿಯಾರ್,ಎಂ ಮುಹಮ್ಮದ್ ನಿಯಾಝ್ ಕೋಝಿಕ್ಕೋಡ್,ಇಬ್ರಾಹಿಂ ಬಾಖವಿ ಮೇಲ್ಮುರಿ,ಅನಸ್ ಅಮಾನಿ ಕಣ್ಣೂರ್,ಫಾಸಿಲ್ ನೂರಾನಿ, ಶಮೀಲ್ ನುಸ್ರಿ, ಶಿಹಾಬ್ ಕ್ಲಾಯಿಕ್ಕೊಡ್, ಅಹ್ಮದ್ ಫಸಾರಿಯ ಜಾಮಿಆ ಮಿಲ್ಲಿಯ್ಯ ವಿವಿಧ ಸೆಷನ್ ಗಳಿಗೆ ನೇತೃತ್ವ ನೀಡುವರು.
ಸಂಜೆ 4 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಸಯ್ಯಿದ್ ಹಸನುಲ್ ಅಹದಲ್ ಪ್ರಾರ್ಥನೆ ನಡೆಸುವರು.ತೃಕರಿಪ್ಪೂರ್ ಮುಹಮ್ಮದಲಿ ಸಖಾಫಿ ಉದ್ಘಾಟಿಸುವರು.ಸಿ ಕೆ ರಾಶಿದ್ ಬುಖಾರಿ ಮುಖ್ಯಭಾಷಣ ನಡೆಸುವರು.ಹಲವು ಪ್ರಮುಖ ಉಲಮಾ ಉಮರಾ ನಾಯಕರು ಉಪಸ್ಥಿತರಿರುವರು.ವಿದ್ಯಾರ್ಥಿ ರಾಲಿಯೊಂದಿಗೆ ಕ್ಯಾಂಪಸ್ ಅಸಂಬ್ಲಿ ಸಮಾಪ್ತಿಗೊಳ್ಳುವುದು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.