ಜೆದ್ದಾ(www.vknews.in):ಸೌದಿ ಅರೇಬಿಯಾದ ಜಿಝಾನ್ ಸಮೀಪದ ಸಾಮ್ಟಾ ನಗರದ ಮೇಲೆ ಹೌತಿಗಳ ಪ್ರೊಜೆಕ್ಟೈಲ್ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಸಾವನ್ನಪ್ಪಿದವರಲ್ಲಿ ಓರ್ವ ಸೌದಿ ಪ್ರಜೆ ಹಾಗೂ ಯೆಮೆನ್ ಪ್ರಜೆ ಸೇರಿದ್ದಾರೆ.
ಘಟನೆಯಲ್ಲಿ ಆರು ಸೌದಿ ಪ್ರಜೆಗಳು ಮತ್ತು ಓರ್ವ ಬಾಂಗ್ಲಾದೇಶಿ ಪ್ರಜೆ ತೀವೃವಾಗಿ ಗಾಯಗೊಂಡಿದ್ದಾರೆ.
ಸಾಮ್ಟಾ ಮುಖ್ಯರಸ್ತೆಯಲ್ಲಿನ ವಾಣಿಜ್ಯ ಸಂಸ್ಥೆಯೊಂದರ ಮೇಲೆ ಈ ಪ್ರೊಜೆಕ್ಟೈಲ್ ಬಿದ್ದಿದ್ದು, ಅದರ ತೀವೃತೆಗೆ ಸ್ಥಳದಲ್ಲಿ ದೊಡ್ಡ ಪ್ರಮಾಣದ ಹೊಂಡವಾಗಿದೆ. ದಾಳಿಯಲ್ಲಿ ಎರಡು ಅಂಗಡಿಗಳು ಮತ್ತು 12 ವಾಹನಗಳಿಗೆ ಹಾನಿಯಾಗಿದೆ.
ನಾಗರೀಕರನ್ನು ಗುರಿಯಾಗಿಸಿದ ಹೌತಿಗಳ ಈ ದಾಳಿಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.