ಎಕ್ಸ್ಪೋ ಸಂಪೂರ್ಣ ವಿವರಣೆ
ದುಬೈ (www.vknews.com) ; ಅಚ್ಚರಿಗಳ ಮಹಾನಗರ ದುಬೈಯಲ್ಲಿ ಬಹುನಿರೀಕ್ಷಿತ ಎಕ್ಸ್ಪೋ-2020 ಅದ್ಧೂರಿಯಾಗಿ ಪ್ರಾರಂಭವಾಗಿ ಈಗಾಗಲೇ 2ತಿಂಗಳುಗಳು ಕಳೆದುಹೋಗಿದೆ. ನಭೂತೋನ ಭವಿಷ್ಯತಿ ಎನ್ನುವ ಹಾಗೆ ಹಿಂದೆಂದೂ ಕಾಣದ ಕೇಳದ ಮುಂದೆಂದೂ ಬಹುಷಃ ಇಂತಹ ಅದ್ದೂರಿಯಾದ ಎಕ್ಸ್ಪೋ ನಡೆಯುವುದಿಲ್ಲವೇನೋ ಅನ್ನುವ ಹಾಗಿದೆ ಈ ದುಬೈ ಎಕ್ಸ್ಪೋ-2020.ನಮ್ಮ ಹೆಮ್ಮೆಯ ದುಬೈನಲ್ಲಿ ನಡೆಯುತ್ತಿರುವ ಈ ಮಹಾಮೇಳ ಅಕ್ಟೋಬರ್ 1ನೇ ತಾರೀಕು 2021ರಿಂದ ಪ್ರಾರಂಭವಾಗಿದ್ದು 30ನೇ ಮಾರ್ಚ್ 2021ರವರೆಗೂ ನಡೆಯಲಿದೆ.
ಮೊದಲು ಈ ಎಕ್ಸ್ಪೋ ಅಂದ್ರೆ ಏನು ಅಂತ ತಿಳಿದುಕೊಳ್ಳೋಣ. ಎಕ್ಸ್ಪೋ ಅಂದ್ರೆ ಎಲ್ಲರಿಗು ತಿಳಿದಿರೋ ಹಾಗೆ ಎಕ್ಸಿಬಿಷನ್, ಪ್ರದರ್ಶನ, ಮೇಳ ಅಂತ ಹೇಳಬಹುದು. ಆದರೆ ಈ ಎಕ್ಸ್ಪೋ- 2020 ಅಂತಿಂಥ ಮೇಳಅಲ್ಲ. 190ಕ್ಕೂ ಹೆಚ್ಚಿನ ದೇಶಗಳು ಶಾಂತಿಯಿಂದ, ಪ್ರೀತಿಯಿಂದ ಹಾಗು ಸ್ನೇಹದಿಂದ ಪಾಲ್ಗೊಂಡಿರುವ “ಲೈಫ್ಟೈಮ್ ಇವೆಂಟ್” ಅಂತಹೇಳಬಹುದು.ಈ ಎಕ್ಸ್ಪೋ ಇತಿಹಾಸ ಗಮನಿಸಿದರೆ ಟೆಲಿಫೋನ್, ಟಿವಿ, ಎಲ್ಈಡಿ, ಸಿಡಿ ಇವೆಲ್ಲವೂ ಪ್ರಪ್ರಥಮವಾಗಿ ಪ್ರದರ್ಶನಗೊಂಡಿದ್ದು ಈ ಮುಂಚಿನ ಎಕ್ಸ್ಪೋಗಳಲ್ಲಿ, ಈಗಲೇ ದುಬೈ ಎಕ್ಸ್ಪೋದಲ್ಲಿ ಫ್ಲೈಯಿಂಗ್ ಮ್ಯಾನ್ ಎಂಬ ಜನರ ಮಧ್ಯದಲ್ಲೇ ಹಾರಾಡುವ ಮಾನವ ಯಂತ್ರವನ್ನು ಪರಿಚಯಿಸಲಾಗಿದೆ, ಪ್ರತೀ 5 ವರ್ಷಗಳಿಗೊಮ್ಮೆ ನಡೆಯುವ ಈಎಕ್ಸ್ಪೋ ಕೊನೆಯದಾಗಿ ನಡೆದಿದ್ದು 2015ರಲ್ಲಿ ಇಟಲಿಯ ಮಿಲಾನ್ ನಗರದಲ್ಲಿ. ಹೆಸರೇ ಸೂಚಿಸುವಂತೆ ಎಕ್ಸ್ಪೋ-2020 ನಮ್ಮ ದುಬೈ ನಗರದಲ್ಲಿ 2020ರಲ್ಲೇ ನಡೆಯಬೇಕಿತ್ತು. ಆದರೆ ಕರೋನ ಮಹಾಮಾರಿಯ ಅಟ್ಟಹಾಸದಿಂದಾಗಿ ತಾತ್ಕಾಲಿಕವಾಗಿ ಅಕ್ಟೋಬರ್1, 2021ಕ್ಕೆ ಮುಂದೂಡಲ್ಪಟ್ಟಿತು.ಈ ಎಕ್ಸ್ಪೋಗಾಗಿ ದುಬೈ ನಗರದ 1050ಎಕರೆ ಭೂಮಿಯಲ್ಲಿ ಒಂದು ಎಕ್ಸ್ಪೋ ನಗರಿಯನ್ನೇ ಸೃಷ್ಟಿಸಲಾಗಿದೆ. ಬಹಳಷ್ಟು ಮೆಟ್ರೋ ಸ್ಟೇಷನ್ಗಳಿಂದ ಉಚಿತ ಬಸ್ ಸೇವಾ ಸೌಲಭ್ಯಗಳನ್ನು ಆಯೋಜಿಸಲಾಗಿದೆ.
ಈ ಎಕ್ಸ್ಪೋದಲ್ಲಿ 190ಕ್ಕೂ ಹೆಚ್ಚಿನ ವಿವಿಧ ದೇಶಗಳ ಪೆವಿಲಿಯನ್ಗಳಿದ್ದು, ಆಯಾ ದೇಶಗಳ ಸಂಸ್ಕೃತಿ, ಕಲೆ, ತಂತ್ರಜ್ಞಾನ, ವ್ಯವಹಾರ, ಅರ್ಥಶಾಸ್ತ್ರ, ವಾಯುಶಾಸ್ತ್ರ , ವಿಜ್ಞಾನ, ಹಾಗು ಪ್ರಪಂಚಕ್ಕೆ ಬೇಕಾಗಿರುವ ಎಲ್ಲ ಅತ್ಯಾಧುನಿಕ ವಸ್ತುಗಳ ಪ್ರದರ್ಶನ ಮಾಡಲಾಗುತ್ತಿದೆ.
ಯುಏಇ ಹಾಗು ಭಾರತ ದೇಶದ ಪವೇಲಿಯನ್ ಅತ್ಯದ್ಭುತವಾಗಿದ್ದು, ಪ್ರತಿಯೊಬ್ಬರೂ ಒಮ್ಮೆಯಾದರು ಭೇಟಿ ನೀಡಲೇಬೇಕಾದ ನಯನ ಮನೋಹರ ಹಾಗು ಉತ್ತಮ ಮಾಹಿತಿಗಳುಳ್ಳ ಪೆವಿಲಿಯನ್ಗಳಾಗಿವೆ.
ಸುಂದರವಾದ ಭಾರತದ ಪೆವಿಲಿಯನ್ನಲ್ಲಿ ಎಲ್ಲ ತರದ ಕಲೆ, ಸಾಹಿತ್ಯ, ವಿಜ್ಞಾನ, ಸಂಸ್ಕೃತಿ, ಸಂಗೀತ, ನಾಟಕ,ರಸ ಮಂಜರಿ ಮುಂತಾದ ಕಾರ್ಯಕ್ರಮಗಳು ನಡೆಯುತ್ತಿವೆ. ನಮ್ಮ ಭವಿಷ್ಯದ ಭವ್ಯ ಪ್ರಪಂಚ ಹೇಗಿರಬಹುದು ಎನ್ನುವುದನ್ನು ಎತ್ತಿತೋರಿಸುವ ಈ ಎಕ್ಸ್ಪೋ2020 ನಮ್ಮ ದುಬೈನಲ್ಲಿ ನಡೆಯುತ್ತಿರುವದು ನಮಗೆಲ್ಲರಿಗೂ ಹೆಮ್ಮೆಯ ಸಂಗತಿ.
ಇಂತಹ ಅದ್ಭುತ ಮಹಾಮೇಳಕ್ಕೆ ಸಾಕ್ಷಿಭೂತರಾದ ನಾವೇಧನ್ಯರು.
ಇದಕ್ಕಾಗಿ ಈ ನಮ್ಮ ದೇಶದ ಪ್ರಭುಗಳಿಗೆ ಎಷ್ಟು ಧನ್ಯವಾದಗಳನ್ನು ಅರ್ಪಿಸಿದರು ಸಾಲದು ಎನ್ನಬಹುದು . ಪ್ರತಿಯೊಬ್ಬರೂ ಈ ಮಹಾಮೇಳ ಎಕ್ಸ್ಪೋ2020 ಪೆವಿಲಿಯನ್ಗಳಿಗೆ ಭೇಟಿ ನೀಡಿ ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ನಾವು ದುಬೈ ಹೆಮ್ಮೆಯ ಯುಏಇ ಕನ್ನಡಿಗರು ತಂಡ ಆಶಿಸುತ್ತೇವೆ.
ವರದಿ : ಶ್ರೀಮತಿ ಮಮತಾ ಮೈಸೂರು ದುಬೈ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.