(www.vknews.com) : ಇಂಡೋನೇಶ್ಯಾ ಬಿಟ್ಟರೆ ಜಗತ್ತಿನಲ್ಲಿ ಅತೀ ಹೆಚ್ಚು ಮುಸ್ಲಿಮರಿರುವ ದೇಶ ನಮ್ಮ ಭಾರತ. ವೈವಿಧ್ಯಮಯ,ಬಗೆಬಗೆಯ ಸಾವಿರಾರು ಸಂಸ್ಕೃತಿಗಳ ತವರೂರು ನಮ್ಮದು. ಈ ದೇಶವನ್ನು ಪೂರ್ವಕಾಲದಲ್ಲಿ ಬೇರೆ ಬೇರೆ ರಾಜ ಮಹಾರಾಜರು ಆಳಿದ್ದಾರೆ. ಅವರ್ಯಾರಿಗೂ ದೇಶದ ಬಹುಮುಖಿ ಸಂಸ್ಕೃತಿಯನ್ನು ನಾಶಪಡಿಸಲು ಸಾಧ್ಯವಾಗಿಲ್ಲ. ಆದರೆ ವೈದಿಕರು ಇಲ್ಲಿನ ಹಲವು ನಾಗರಿಕತೆಯನ್ನು ನಾಶ ಪಡಿಸಿದ್ದಾಗಿ ಇತಿಹಾಸ ತಜ್ಞರು ಹೇಳುತ್ತಾರೆ.
ಬೌದ್ದ ಮತವನ್ನು ಇಲ್ಲಿಂದ ಓಡಿಸಿದ್ದು ಮುಸಲ್ಮಾನರಂತೂ ಅಲ್ಲ. ಈಗ ನಮ್ಮ ದೇಶದ ಇಪ್ಪತ್ತು ಕೋಟಿಯಷ್ಟಿರುವ ಮುಸ್ಲಿಮರನ್ನು ಎದುರು ಹಾಕಿ ಕೊಂಡು ಅವರನ್ನು ಹಿಂದುಗಳ ಶತ್ರುಗಳೆಂದು ಬಿಂಬಿಸಿ ಭಾಷಣ ಲೇಖನಗಳ ಮೂಲಕ ಮುಗ್ದ ಹಿಂದುಗಳ ತಲೆಕೆಡಿಸುವ ಕೆಲಸ ಸಂಘಪರಿವಾರದ ಸಂಘಟನೆಗಳು ಎಗ್ಗಿಲ್ಲದೇ ನಡೆಸುತ್ತಿದೆ. ಕಳೆದ ಕೆಲವು ವರ್ಷಗಳಿಂದ ಇದಕ್ಕಾಗಿ ಕೆಲವು ಮಹಿಳೆಯರನ್ನೂ ಬೆಳೆಸಿದ್ದಾರೆ. ಇವರ ಭಾಷಣ ಕೇಳಿ ಪ್ರಚೋಧನೆಗೆ ಒಳಗಾದ ಶೂದ್ರ ಹಿಂದುಳಿದ ಯುವಕರು ಮುಸ್ಲಿಮರ ವಿರುದ್ದ ಕತ್ತಿಮಸೆಯುತ್ತಾರೆ. ಇವರು ರಾಜಾರೋಶವಾಗಿ ವಿತರಿಸಿದ ತ್ರಿಶೂಲವನ್ನು ಬಳಸಿ ಹಲ್ಲೆ ಕೊಲೆಗೆ ಯತ್ನಿಸುತ್ತಾರೆ. ಇವರನ್ನು ಬಂಧಿಸಿದರೆ ಪೋಲೀಸಿನ ಮೇಲೆ ಒತ್ತಡ ಹೇರಿ ಶಾಸಕರು ಮಂತ್ರಿಗಳು ಬಿಡುಗಡೆ ಗೊಳಿಸುತ್ತಾರೆ.
ಇನ್ನು ಹೇಳೋದಾದರೆ, ಗುಜರಾತ್ ನಂತರ ನಮ್ಮ ಕರ್ನಾಟಕ ಇವರ ಅಕ್ರಮಮಣಕಾರಿ ಹಿಂದುತ್ವದ ಪ್ರಯೋಗ ಶಾಲೆಯಾಗುತ್ತಿರುವುದು ನಮ್ಮನ್ನು ಚಿಂತಿಸುವಂತೆ ಮಾಡಿದೆ. ವಿದೇಶಕ್ಕೆ ಗೋಮಾಂಸ ಇವರೇ ಗರಿಷ್ಟವಾಗಿ ರಪ್ತು ಮಾಡುತ್ತಿದ್ದರೂ ಅದೇ ಗೋವಿನ ಹೆಸರಲ್ಲಿ ಇಲ್ಲಿ ಅದಷ್ಟೋ ಕೊಲೆಗಳು ನಡೆದಿದೆ. ಮತಾಂತರ ಲವ್ ಜಿಹಾದ್,ಮಸೀದಿಯ ಮೈಕಾ ಮೊದಲಾದ ಭಾವನಾತ್ಮಕ ವಿಷಯಗಳೇ ಇವರಿಗೆ ಅಸ್ತ್ರ. ದತ್ತಪೀಠದ ನಂತರ ಈಗ ಮಂಡ್ಯಾದ ಮಸೀದಿಯೊಂದರ ಮೇಲೆ ಹಕ್ಕು ಸ್ಥಾಪಿಸಲು ಹೊರಟಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳನ್ನು ನೋಡಿ ಹೈರಾಣಾದ ಮುಸ್ಲಿಮರ ಕೆಲವು ಯುವಕರು ಮಾಡು ಇಲ್ಲವೇ ಮಡಿ ಎಂಬ ತತ್ವಕ್ಕೆ ಅಂಟಿ ಕೊಂಡು ಸಂಘಟನೆ ಕಟ್ಟಿ ಏಟಿಗೆ ಪ್ರತಿಏಟು ನೀಡುತ್ತಿರುವುದು ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದೆ.
ಇದು ಹೀಗೇ ಮುಂದುವರೆದರೆ ಇಡೀ ದೇಶವು ಧರ್ಮದ ಹೆಸರಲ್ಲಿ ಯುದ್ದ ಭೂಮಿಯಾಗಿ ಪರಿವರ್ತನೆ ಗೊಳ್ಳುವುದು ಖಚಿತ.ಆದ್ದರಿಂದ ದೇಶದ ಬಗ್ಗೆ ಕಾಳಜಿ ಇರುವ ಗಣ್ಯರು,ಬುದ್ದಿಜೀವಿಗಳು,ಕಲಾಗಾರರು,ಸ್ವಾಮೀಜಿಗಳು, ಮೌಲಾನಗಳು,ಫಾದರ್ ಗಳು ಒಟ್ಟಾಗಿ ಈ ವಿಫತ್ತಿನ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಿದೆ. ಇಲ್ಲ ಅಂದ್ರೆ ದೇಶವು ಸ್ಮಾಶಾನ ಭೂಮಿಯಾಗಿಯೂ ಮನೆಗಳು ಅನಾಥಾಲಯವಾಗಿಯೂ ಮಾರ್ಪಾಡಾಗುವ ದುಸ್ಥಿತಿ ಬರಬಹದು. ಎಚ್ಚೆತ್ತು ಕೊಂಡರೆ ನಮಗೂ ಮುಂದಿನ ಪೀಳಿಗೆಗೂ ಒಳಿತು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.