ಬೆಂಗಳೂರು (ವಿಶ್ವ ಕನ್ನಡಿಗ ನ್ಯೂಸ್) : ಶಿವಮೊಗ್ಗದಲ್ಲಿ 144 ಸೆಕ್ಷನ್ ಜಾರಿ ಇದ್ದರೂ ಮೃತದೇಹವನ್ನು ಹೊತ್ತು ಮೆರವಣಿಗೆ ಸಾಗಲು ಹೇಗೆ ಅವಕಾಶ ನೀಡಲಾಯಿತು, ಸಚಿವರ ಎದುರೇ ಕಲ್ಲುತೂರಾಟ, ಬೆಂಕಿ ಹಚ್ಚಿಸುವುದು ಆಗಿದೆ, ಸರ್ಕಾರದಿಂದಲೇ 144 ಸೆಕ್ಷನ್ ಉಲ್ಲಂಘನೆಯಾಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಶಿವಮೊಗ್ಗದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಇದರ ಹೊಣೆಯನ್ನು ಗೃಹ ಸಚಿವರೇ ಹೊರಬೇಕು. ಶಿವಮೊಗ್ಗದಲ್ಲಿ ಪ್ರಕ್ಷುಬ್ಧ ಪರಿಸ್ಥಿತಿಗೆ ಬಿಜೆಪಿ, RSSನವರು ಬಜರಂಗದಳದವರು ಇವರೆಲ್ಲ ರಸ್ತೆಗಿಳಿದು ಹೋರಾಟ ಮಾಡಿದ್ದಾರೆ. ಇದು ನಾಗರಿಕ ಸಮಾಜದ ಲಕ್ಷಣವಾ? ಇದನ್ನು ಗೂಂಡಾಗಳ ಸರ್ಕಾರ ಎಂದು ಕರೆಯಬೇಕು. ಸಚಿವರಿಂದಲೇ ಉಲ್ಲಂಘನೆ ಆಗಿದೆ ಅಂದ್ರೆ ಸರ್ಕಾರವೆಲ್ಲಿದೆ. ಇದೆಲ್ಲದಕ್ಕೂ ಸಚಿವ ಕೆ.ಎಸ್.ಈಶ್ವರಪ್ಪ ಕಾರಣ. ಸಂಸದ ಬಿ.ವೈ.ರಾಘವೇಂದ್ರ ಇದರ ಹೊಣೆ ಹೊರಬೇಕು ಎಂದು ಗಂಭೀರ ಆರೋಪ ಮಾಡಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.