ಮಕ್ಕಾ(www.vknews.in): ಪವಿತ್ರ ಮಸೀದಿ ಅಲ್ ಹರಮ್ ನಲ್ಲಿ 27ರ ರಾತ್ರಿ 20 ಲಕ್ಷ ಭಕ್ತರು ಜಮಾಯಿಸಿದ್ದಾರೆ ಎಂದು ವರದಿಯಾಗಿದೆ. ಲೈಲತುಲ್ ಕದ್ರ್ ನಿರೀಕ್ಷಿತ ರಾತ್ರಿ ಆಗಿರುವುದರಿಂದ, ಪ್ರತಿಯೊಬ್ಬ ವಿಶ್ವಾಸಿಯು ತರಾವೀಹ್, ತಹಜ್ಜುದ್, ಉಮ್ರಾ ಮತ್ತು ಇತಿಕಾಫ್ನೊಂದಿಗೆ ರಂಝಾನ್ ನ ಈ ರಾತ್ರಿಯನ್ನು ಕಳೆಯುವ ಪರಿಪಾಠವಿದೆ. ಮತ್ವಾಫ್, ಮಸೀದಿ ಅಲ್-ಹರಾಮ್ನ ಪ್ರಾಂಗಣ, ಮಸೀದಿ ಮತ್ತು ಇತರ ಪ್ರದೇಶಗಳು ಭಕ್ತರಿಂದ ತುಂಬಿ ತುಳುಕುತ್ತಿದ್ದವು. ಮಕ್ಕಾ ಪಟ್ಟಣದ ಮೂಲೆ ಮೂಲೆಗಳಲ್ಲೂ ಕಿಕ್ಕಿರಿದ ಜನಸ್ತೋಮ ಕಾಣಲು ಸಿಗುತ್ತಿತ್ತು. ರಂಝಾನ್ ಕೊನೆಯ ಇನ್ನುಳಿದ ರಾತ್ರಿಗಳಲ್ಲೂ ದಾಖಲೆಯ ಜನಸ್ತೋಮ ಸೇರುವ ನಿರೀಕ್ಷೆಯಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.