ದಾಳಿಯ ನಂತರ ಗಲಭೆಗಳನ್ನು ಗುರಿಯಾಗಿಸಿಕೊಂಡಿದ್ದ ಸಂಘ ಪರಿವಾರದ ಕಾರ್ಯಕರ್ತರು
ಲಖನೌ (ವಿಶ್ವ ಕನ್ನಡಿಗ ನ್ಯೂಸ್) : ಅಯೋಧ್ಯೆಯ ಮೂರು ಮಸೀದಿಗಳ ಮೇಲೆ ಹಂದಿಮಾಂಸವನ್ನು ಎಸೆದ ಆರೋಪದ ಮೇಲೆ ಏಳು ಹಿಂದುತ್ವ ಭಯೋತ್ಪಾದಕರನ್ನು ಬಂಧಿಸಲಾಗಿದೆ. ಕುರಾನ್ ನ ಪುಟಗಳನ್ನು ಹರಿದು ಅದರಲ್ಲಿ ಹಂದಿಮಾಂಸವನ್ನು ಶೇಖರಿಸಿಟ್ಟು ಮಸೀದಿಗೆ ಎಸೆದ ಹಿಂದೂ ಸಂಘಟನೆಯ ಸದಸ್ಯರನ್ನು ಬಂಧಿಸಲಾಗಿದೆ.
ಬಂಧಿತರನ್ನು ಅಯೋಧ್ಯೆ ನಿವಾಸಿಗಳಾದ ಮಹೇಶ್ ಕುಮಾರ್ ಮಿಶ್ರಾ, ಪ್ರತ್ಯುಷ್ ಶ್ರೀವಾಸ್ತವ, ನಿತಿನ್ ಕುಮಾರ್, ಗುಂಜನ್ ಅಲಿಯಾಸ್ ದೀಪಕ್ ಕುಮಾರ್ ಗೌರ್, ಬ್ರಿಜೇಶ್ ಪಾಂಡೆ, ಶತ್ರುಘ್ನ ಪ್ರಜಾಪತಿ ಮತ್ತು ವಿಮಲ್ ಪಾಂಡೆ ಎಂದು ಗುರುತಿಸಲಾಗಿದೆ.
ಅಯೋಧ್ಯೆಯ ಕಾಶ್ಮೀರಿ ಮೊಹಲ್ಲಾದ ತತ್ಷಾ ಜುಮಾ ಮಸೀದಿ, ಘೋಸಿಯಾನ ಮಸೀದಿಯಲ್ಲಿ ಹಂದಿಮಾಂಸವನ್ನು ಎಸೆಯಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಎಫ್ ಐ ಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈಗ ಏಳು ಜನರನ್ನು ಬಂಧಿಸಲಾಗಿದೆ. ಇನ್ನೂ ನಾಲ್ವರನ್ನು ಬಂಧಿಸಬೇಕಾಗಿದೆ ಎಂದು ಅಯೋಧ್ಯೆಯ ಹಿರಿಯ ಪೊಲೀಸ್ ಅಧೀಕ್ಷಕ ಶೈಲೇಶ್ ಕುಮಾರ್ ಪಾಂಡೆ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.