ಅಗತ್ಯವಿದ್ದರೆ ಮರು ಮರಣೋತ್ತರ ಪರೀಕ್ಷೆ ನಡೆಸಲು ಒಪ್ಪಿದ ರಿಫಾ ತಂದೆ
ಕೋಝಿಕ್ಕೋಡ್ (ವಿಶ್ವ ಕನ್ನಡಿಗ ನ್ಯೂಸ್) ; ವ್ಲಾಗರ್ ರಿಫಾ ಮೆಹ್ನು ಅವರ ಕುಟುಂಬವು ಸಚಿವ ಎ.ಕೆ.ಶಶೀಂದ್ರನ್ ಅವರನ್ನು ಭೇಟಿಯಾಗಿ ರಿಫಾ ಸಾವಿನ ಹಿಂದಿನ ರಹಸ್ಯವನ್ನು ತಿಳಿಯಲು ತನಿಖೆಯನ್ನು ತೀವ್ರಗೊಳಿಸಬೇಕು ಎಂದು ಒತ್ತಾಯಿಸಿದರು. ರಿಫಾಳ ಸಾವಿನಲ್ಲಿ ರಿಫಾಳ ಗಂಡ ಮತ್ತು ಅವನ ಸ್ನೇಹಿತನ ಪಾತ್ರವಿರಬಹುದು ಎಂದು ಕುಟುಂಬವು ಸಚಿವರ ಮುಂದೆ ಹೇಳಿದೆ.
ತನಿಖೆಯ ಭಾಗವಾಗಿ ತನ್ನ ಮಗಳ ದೇಹವನ್ನು ಹೊರತೆಗೆಯಲು ಮತ್ತು ಮತ್ತೊಂದು ಮರಣೋತ್ತರ ಪರೀಕ್ಷೆಯನ್ನು ನಡೆಸಲು ಅವರ ಕುಟುಂಬಕ್ಕೆ ಯಾವುದೇ ಅಭ್ಯಂತರವಿಲ್ಲ ಎಂದು ರಿಫಾ ತಂದೆ ಹೇಳಿದ್ದಾರೆ. ರಿಫಾ ತನ್ನ ಪತಿಯಿಂದ ಕಿರುಕುಳಕ್ಕೊಳಗಾದ ಎಲ್ಲಾ ದೃಶ್ಯಗಳನ್ನು ನಾನು ನೋಡಿದ್ದೇನೆ. ಶವವನ್ನು ಮರಣೋತ್ತರ ಪರೀಕ್ಷೆಯೂ ನಡೆಸದೆ ಮನೆಗೆ ತರಲಾಯಿತು. ರಿಫಾಳದ್ದು ಕೊಲೆ, ಇದನ್ನು ಬಳಿಕ ಆತ್ಮಹತ್ಯೆಯಾಗಿ ಬಿಂಬಿಸಿರಬಹುದು ಎಂದು ರಿಫಾ ತಂದೆ ಸಚಿವರಿಗೆ ವಿವರಿಸಿದರು
ನಿನ್ನೆ, ತಮರಸ್ಸೆರಿ ಡಿವೈಎಸ್ಪಿ ರಿಫಾ ಅವರ ಮನೆಗೆ ಬಂದು ಕುಟುಂಬದ ಹೇಳಿಕೆಯನ್ನು ದಾಖಲಿಸಿದರು. ಮಾರ್ಚ್ 1 ರಂದು ರಿಫಾ ದುಬೈನ ಜಫಿಲಿಯಾದಲ್ಲಿರುವ ತನ್ನ ಫ್ಲ್ಯಾಟ್ನಲ್ಲಿ ಶವವಾಗಿ ಪತ್ತೆಯಾಗಿದ್ದಳು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.