ಒಂದು ನ್ಯೂಸ್ ವೆಬ್ ಸೈಟ್ ನಡೆಸುವುದು ಸಣ್ಣಪುಟ್ಟ ಕೆಲಸವಲ್ಲ. ಸಾಕಷ್ಟು ಒತ್ತಡಗಳು, ಸಾವಿರಾರು ದೂರುಗಳು ಒಂದೊಂದು ನ್ಯೂಸ್ಗಳಿಗೆ ಒಂದೊಂದು ಬಗೆಯ ಅನಿಸಿಕೆಗಳು, ಅದೆಷ್ಟೋ ವೆಬ್ ಸೈಟ್ ಮುಂದುವರಿಸಲು ಸಾಧ್ಯವಾಗದೆ ಅರ್ಧದಲ್ಲಿ ನಿಲ್ಲಿಸಿದವರು ಇದ್ದಾರೆ. ಆದರೆ ಎಲ್ಲವನ್ನು ತಾಳ್ಮೆಯಿಂದ ಕೇಳಿ ಓದುಗರ ಅಭಿಪ್ರಾಯದಂತೆ ಬಹಳ ಪರಿಶ್ರಮದಿಂದ ಪ್ರಧಾನ ಸಂಪಾದಕರು ಹಾಗು ಸಂಪಾದಕೀಯ ಬಳಗ ಮುಂದುವರಿಸುತ್ತ ಬಂದಿರುವುದು ನಿಜಕ್ಕೂ ಶ್ಲಾಘನೀಯ.
ಇಂದಿನ ಕಾಲದಲ್ಲಿ ನ್ಯೂಸ್ ಅಂತ ಹೇಳಿದ ತಕ್ಷಣ ಜನರು ನಗಾಡುವ ತನಕ ಬಂದು ಮುಟ್ಟಿದೆ. ಮಾಧ್ಯಮ ವರದಿಗಳ ಜೊತೆ ಇದ್ದ ನಂಬಿಕೆಗಳೆಲ್ಲ ಜನರಿಂದ ಬಹುದೂರ ಸಾಗಿವೆ. ಹೌದು ಕೆಲವೊಂದು ಕೋಮುವಾದಿಗಳು ಪ್ರಕಟಿಸುವ ವರದಿಗಳಿಂದ ಅಥವಾ ನಕಲಿ ವರದಿಗಳಿಂದ, ಒಂದೇ ವರ್ಗಕ್ಕೆ ಸೀಮಿತವಾದ ವರದಿಗಳಿಂದ, ರಾಜಕೀಯದವರ ಕಾಲಿನಡಿಯಲ್ಲಿ ನಿಂತುಕೊಂಡು ವರದಿ ಮಾಡುತ್ತಿರುವ ನಕಲಿ ಮಾಧ್ಯಮಗಳಿಂದಾಗಿ ಜನರು ವಾರ್ತೆ ಓದುವುದನ್ನೆ ಬಿಟ್ಟು ದೂರ ನಿಂತಿದ್ದಾರೆ. ಯಾರು ಏನು ಹೇಳಿದರು ನಂಬದ ಜನರು ಕೇವಲ ಒಬ್ಬ ಪತ್ರಕರ್ತ ಏನೇ ಹೇಳಿದರು ಜನ ಬೇಗ ನಂಬಿ ಬಿಡುತ್ತಾರೆ. ನಂಬಲೇ ಬೇಕು. ಏಕೆಂದರೆ ಅವರು ಕಷ್ಟಪಟ್ಟು ಸಂಪೂರ್ಣ ಮಾಹಿತಿ ಪಡೆದು ಜನರಿಗೆ ತಲುಪಿಸುತ್ತಾರೆ.
ಇತ್ತೀಚೆಗೆ ಮಾತ್ರ ಕೆಲವೊಂದು ಪತ್ರಕರ್ತರ ನೀಚ ನಡವಳಿಕೆಯಿಂದ ಜನರು ನಂಬುವುದನ್ನು ಬಿಡುತ್ತಿದ್ದಾರೆ. ಇಂತಹ ಸಂದರ್ಭಗಳಲ್ಲಿ ಜನರಿಗೆ ಸತ್ಯಾಂಶವನ್ನು ನೇರವಾಗಿ ನೀಡುತ್ತ ಬಂದ, ಎಲ್ಲಾ ಜಾತಿ ಧರ್ಮ ಪಕ್ಷಗಳ ಮಾಹಿತಿಗಳನ್ನು ಸಮಗ್ರವಾಗಿ ನೀಡುತ್ತಿವೆ. ಅಷ್ಟೇ ಅಲ್ಲದೆ ಲೇಖನ, ಕವನ ಬರಹಗಳನ್ನು ಓದುಗರಿಗೆ ನೀಡುತ್ತ ವಿಶ್ವದಾದ್ಯಂತ ಲಕ್ಷಾಂತರ ಜನರಿಗೆ ಏಕಕಾಲದಲ್ಲಿ ಮಾಹಿತಿ ನೀಡುತ್ತಿರುವ “ವಿಶ್ವ ಕನ್ನಡಿಗರ ನ್ಯೂಸ್” ಇವತ್ತು ಹನ್ನೆರಡು ವರ್ಷವನ್ನು ಪೂರೈಸುತ್ತಿರುವುದು ಬಹಳ ಸಂತೋಷವಾಗುತ್ತಿವೆ.
ವಿದೇಶದಲ್ಲಿ ಕುಳಿತು ಕನ್ನಡವನ್ನು ಗೌರವ ಪೂರ್ವಕವಾಗಿ ಜನರಿಗೆ ತಲುಪಿಸುತ್ತಿರುವುದು ತುಂಬಾ ವಿಶೇಷ. ಕೇವಲ ನ್ಯೂಸ್ಗಳಿಗೆ ಮಾತ್ರ ಸೀಮಿತವಾಗಿಲ್ಲ ಜನರ ಸಂಕಷ್ಟಗಳಿಗೂ ನೆರವಾಗುತ್ತಿರುವುದು ತುಂಬಾ ವಿಶೇಷ. ಇನ್ನಷ್ಟು ಮುಂದುವರಿದು ವಿಶ್ವದ ಮೂಲೆ ಮೂಲೆಗಳಿಗೂ ತಲುಪಿ, ಜನರಿಗೆ ನೈಜ ಸುದ್ದಿ ಸಿಗುವಂತಾಗಲಿ ಎಂಬ ಹಾರೈಕೆಯೊಂದಿಗೆ.. ಈ ವೆಬ್ ಸೈಟ್ ನ್ಯೂಸ್ನಲ್ಲಿ ನಾನು ಕೂಡ ಒಬ್ಬ ಪ್ರತಿನಿಧಿಯಾಗಿರುವುದಕ್ಕೆ ಸಾಕಷ್ಟು ಸಂತೋಷವಿದೆ ಧನ್ಯವಾದಗಳನ್ನು ಸಮರ್ಪಿಸುತ್ತ, ಸಂಪಾದಕ ಮಂಡಳಿ ಮತ್ತು ಬಳಗದವರಿಗೂ ಕೃತಜ್ಞತೆ ಸಲ್ಲಿಸುತ್ತಿದ್ದೇನೆ.
– ಡಿ.ಎಸ್.ಐ.ಬಿ ಪಾಣೆಮಂಗಳೂರು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.