ವಿ.ಕೆ.ನ್ಯೂಸ್ (ಕೋಲಾರ): ಕೋಲಾರ ಜಿಲ್ಲೆಯ ಬೆಂಗಳೂರು ಉತ್ತರ ವಿಶ್ವವಿದ್ಯಾಲಯವು ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದಿಂದ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕೀರ್ಣ ಕಾರ್ಯಕ್ರಮಕ್ಕೆ ಅದ್ದೂರಿ ಚಾಲನೆಯನ್ನು ನೀಡಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ನೇರೆವೇರಿಸಿದ ಹಿರಿಯ ಪ್ರಾಧ್ಯಾಪಕರು ಹಾಗೂ ತಮಿಳುನಾಡು ಕೇಂದ್ರಿಯ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿಗಳಾದ ಪ್ರೊ.ಬಿ.ಸಿ.ಸಂಜಯ್ ರವರು ಮಾತನಾಡುತ್ತಾ “ಪತ್ರಿಕೋದ್ಯಮ ಪ್ರಾರಂಭದ ದಿನಗಳಲ್ಲಿ ಪ್ರಸರಣದ ಸಂಖ್ಯೆ ಕಡಿಮೆ ಇದ್ದರೂ ಪ್ರಭಾವ ಮಾತ್ರ ಹೆಚ್ಚಾಗಿತ್ತು. ಆದರೆ ಕ್ರಮೇಣ ಕಾರ್ಪೊರೇಟ್ ಸಂಸ್ಥೆಗಳ ಪ್ರಭಾವದಿಂದಾಗಿ ಪತ್ರಿಕೋದ್ಯಮದ ಘನತೆ ಗೌರವಗಳು ಕಡಿಮೆ ಆದಂತೆ ಮಾಡಿದ್ದಾರೆ ಎಂದು ಕಳವಳ” ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮಾಧ್ಯಮ ಆಕಾಡೆಮಿ ಹಾಗೂ ಬೆಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷರಾದ ಕೆ.ಸದಾಶಿವ ಶೆಣೈ ರವರು ಮಾತನಾಡುತ್ತಾ “ಮುದ್ರಣ ಮಾಧ್ಯಮ ಹಾಗೂ ಎಲೆಕ್ಟ್ರಾನಿಕ್ ಮೀಡಿಯಾ ಒಟ್ಟೊಟ್ಟಿಗೆ ಹೋಗುತ್ತೀವೆ. ತಾಂತ್ರಿಕತೆಯನ್ನು ಹೇಗೆ ಬಳಸುಕೊಳ್ಳುತೇವೆ ಹಾಗೇ ನಮ್ಮ ವ್ಯಕ್ತಿತ್ವ ಎಂಬುದು ನಿರೂಪಣೆ ಆಗುತ್ತದೆ. ಆತ್ಮತೃಪ್ತಿ ಇಲ್ಲದ ಕಾರ್ಯಕ್ಕೆ ಸಂತಸ ಇರುವುದಿಲ್ಲ. ಮುಂಬರುವ ದಿನಗಳಲ್ಲಿ ಮಾಧ್ಯಮ ಕ್ಷೇತ್ರ ಬಹು ಚೆಂದ ಇರುತ್ತದೆ ಹಾಗೇ ಅನೇಕ ಸವಾಲುಗಳು ಸಹ ಇರುತ್ತೆ. ಮಾಧ್ಯಮ ಕಾರ್ಯವೈಖರಿಯನ್ನು ಗಟ್ಟಿಗೊಳ್ಳಿಸುವ ಕೆಲಸ ಮಾಡಬೇಕಾಗಿದೆ. ಚಾಲೆಂಚ್ ಹಾಗೂ ಟ್ರೆಂಡ್ ಎಂಬುದು ಸದಾ ಉತ್ಸಹದಲ್ಲಿಯೇ ಇರಲಿ ಎಂಬುದು ನಮ್ಮ ಆಶಯ” ಎಂದರು.
ಬೆಂಗಳೂರು ಉತ್ತರ ವಿವಿ ಉಪಕುಲಪತಿಗಳಾದ ಪ್ರೊ.ನಿರಂಜನ ವಾನಳ್ಳಿ ರವರು ಮಾತನಾಡಿ “ರಾಷ್ಟ್ರೀಯ ವಿಚಾರ ಸಂಕೀರ್ಣಗಳನ್ನು ಮಾಡಲು ಉತ್ತರ ವಿವಿ ಸದಾ ಸಿದ್ದ ಇದೆ. ಚರ್ಚೆಗೆ ಒಳಗಾಗುವ ವಸ್ತುಗಳು ವಿದ್ಯಾರ್ಥಿಗಳಿಗೆ ಹಾಗೂ ಆಸಕ್ತರಿಗೆ ಇದು ಉತ್ತಮವಾದ ವಿಚಾರ ಸಂಕೀರ್ಣ. ಇಂದು ಪತ್ರಿಕೆಗಳ ಪ್ರಸಾರ ಹೆಚ್ಚು ಇದೆ. ಆದರೆ ಪ್ರಭಾವ ಇಲ್ಲವೆಲ್ಲ ಎಂಬುದು ನಾವು ಆತ್ಮವಲೋಕನವನ್ನು ಮಾಡಿಕೊಳ್ಳಬೇಕಾದ ವಿಷಯ. ಜನರ ವಿಶ್ವಾಸಹರ್ತೆಯನ್ನು ಉಳಿಸಿಕೊಳ್ಳುವ ಪತ್ರಕರ್ತರು ಆಗಬೇಕು. ಸುದ್ದಿ ಎಂಬುದು ಸತ್ಯವಾಗಬೇಕು ಆದರೆ ಸುಳ್ಳು ಎಂಬುದು ಆಗಬಾರದು. ಆದರೆ ನಮ್ಮಲ್ಲಿ ಸುಳ್ಳುಗಳ ಮುಖವಾಡ ಧರಿಸಿ ಸುಳ್ಳು ಸುದ್ದಿ ಮಾಡುವುದು ಆತಂಕ. ವ್ಯಯೋಕ್ತಿಕ ಲಾಭವನ್ನು ಬಿಟ್ಟು ಸಾಮಾಜಿಕ ಮೈಲಿಗಲ್ಲು ಆಗುವ ಸಂಶೋಧನೆಗಳು ಪ್ರಾಧ್ಯಾಪಕರಿಂದ ಆಗಬೇಕು ಎಂಬ ಆಶಯ ನಮ್ಮದು. ತಂತ್ರಜ್ಞಾನ ಬಳಸಿಕೊಂಡು ಬೆಳೆಯಬೇಕು ಹಾಗೇ ಬದುಕಬೇಕು” ಎಂದರು.
ಕಾರ್ಯಕ್ರಮದಲ್ಲಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಸ್ನಾತಕೋತ್ತರ ಕೇಂದ್ರದ ನಿರ್ದೇಶಕರಾದ ಪ್ರೊ.ಡಿ.ಕುಮುದಾ, ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದ ಸಂಯೋಜಕರಾದ ಡಾ.ಆರ್.ಮಂಜುನಾಥ್, ಶ್ರೀಮತಿ ಎ.ವಿ.ಸಂಪ್ರತಿ, ಮೋಹನ್ ಕುಮಾರ್, ವಿವಿಧ ವಿಭಾಗಗಳ ಎಲ್ಲಾ ಸಂಯೋಜಕರು, ಪ್ರಾಧ್ಯಾಪಕರು, ಹಾಗೂ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದ ಎಲ್ಲಾ ವಿದ್ಯಾರ್ಥಿಗಳು ಹಾಜರಿದ್ದರು.
ವರದಿ: ಲಕ್ಕೂರು ಎಂ.ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.