“ಪತ್ರಕರ್ತನು ಗರ್ಜನೆ ಮಾಡುತ್ತಾನೆ, ಖಂಡನೆ ಮಾಡುತ್ತಾನೆ, ಬುದ್ಧಿವಾದ ಹೇಳುತ್ತಾನೆ. ಸಾವಿರ ಯುದ್ಧ ಸೈನಿಕರನ್ನು ಎದುರಿಸುವುದಕ್ಕಿಂತ ವಿರೋಧ ಮಾಡುವ ನಾಲ್ಕು ಪತ್ರಿಕೆಗಳನ್ನು ಎದುರಿಸಬೇಕಾಗುತ್ತದೆ. “ಹೀಗೆಂದು ಫ್ರಾನ್ಸ್ ನ ಚಕ್ರವರ್ತಿಯು ನೆಪೋಲಿಯನ್ ಪತ್ರಿಕೆಗಳ ಬಗ್ಗೆ ಹೇಳಿದ್ದರು.
ಇಂದಿನ ವಿದ್ಯಾಮಾನಗಳ ಸತ್ಯಾಸತ್ಯತೆಯನ್ನು ಜನಗಳಿಗೆ ತಲುಪಿಸುವ ನಿಟ್ಟಿನಲ್ಲಿ ವಿಕೆ ನ್ಯೂಸ್ ನ ಪ್ರಾಮಾಣಿಕ ಪ್ರಯತ್ನಗಳ ಬಗ್ಗೆ ಜನರು ಅರಿತುಕೊಂಡಿರುವರು. ಜನಗಳ ವಿಶ್ವಾಸಕ್ಕೆ ಪಾತ್ರವಾಗಿರುವ ವಿಕೆ ನ್ಯೂಸ್ ನ ಅಮೋಘ ಕೊಡುಗೆಯನ್ನು ಹನ್ನೆರಡನೇ ವರ್ಷದ ವಿಕೆ ಪತ್ರಿಕಾ ವಾರ್ಷಿಕೋತ್ಸವದ ಅಂಗವಾಗಿ ಇಲ್ಲೀಗ ಬಿತ್ತರಿಸುವೆನು.
ಇದು ರಾಷ್ಟ್ರೀಯ, ಅಂತಾರಾಷ್ಟ್ರೀಯ ಹಾಗೂ ದೇಶೀಯ ಸುದ್ದಿಗಳನ್ನು ಜನ, ಮನ, ಮನೆಗಳಿಗೆ ಮುಟ್ಟಿಸುವಲ್ಲಿ ಸಫಲತೆ ಕಂಡಿದೆ. ವಿಕೆ ನ್ಯೂಸ್ ಜನರ ಹಕ್ಕುಗಳನ್ನು ಕಾಪಾಡುವ ಭರವಸೆಯ ನಿಲುವನ್ನು ಹೊಂದಿದೆ. ಪತ್ರಿಕೆಗಳು ಜನರ ಮನಸಿನ ಹಾಗೂ ಭಾವನೆಗಳ ಮೇಲೆ ಪ್ರಭಾವ ಬೀರುತ್ತದೆ, ಅದಕ್ಕೆ ಇರಬೇಕು ವಿಕೆ ನ್ಯೂಸ್ ಗಂಭೀರವಾದ ಜವಾಬ್ದಾರಿಗಳನ್ನು ಹೊತ್ತು ಕೊಂಡಿದೆ. ಆದುದರಿಂದಲೇ ವಿಕೆ ನ್ಯೂಸ್ ಪ್ರಸರಿಸುವ ಸುದ್ದಿಗಳನ್ನು ಕಾದು ಓದುವ ಆಸಕ್ತಿ ನಮ್ಮೊಳಗೆ ಬೆಳೆದಿರುವುದು ಕೂಡ.
LKG ಗೆ ಕಾಲಿಡುವ ಕಂದನನ್ನು ಬರಮಾಡಿಕೊಂಡು ಪ್ರೀತಿಯಿಂದ ಕಲಿಸುವ ಅಧ್ಯಾಪಕರು, ಆ ಕಲಿಕೆಯೇ ಆ ಮಗುವಿನ ಮುಂದಿನ ಉಜ್ವಲ ಭವಿಷ್ಯಕ್ಕೆ ಕಾರಣವಾಗಿರುವಂತೆಯೇ ಬರೆಯುವ ಆಸಕ್ತಿದಾರರಿಗೆ, ಅವರ ಲೇಖನಗಳಿಗೆ ಈ ಮಾಧ್ಯಮವು ಅವಕಾಶಗಳನ್ನು ನೀಡಿ ಪ್ರೋತ್ಸಾಹಿಸುವ ವೈಶಿಷ್ಟ್ಯಗಳನ್ನೊಳಗೊಂಡಿದೆ. ಇನ್ನು ಮುಂದೆಯೂ ಈ ಪತ್ರಿಕೆಯು ಇದೇ ರೀತಿ ಸತ್ಯದೊಂದಿಗೆ ನಿಂತು ಯಶಸ್ಸಿನ ತುತ್ತ ತುದಿಯೇರಲೆಂದು ಹಾರೈಸುವೆನು.
~ ಸಾರಾಅಲಿ ಪರ್ಲಡ್ಕ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.