ಅತ್ಯಂತ ಚಾಣಾಕ್ಷ ಮತ್ತು ಅಷ್ಟೇ ಅಪಾಯಕಾರಿ ನಡೆ..
(www.vknews.in) : ತಮಗೆ ಬೇಕಾದುದೆಲ್ಲವನ್ನು ವ್ಯವಸ್ಥಿತವಾಗಿ ಮಾಡಿ , ಅದನ್ನು ಹಾಗೆಯೆ ಉಳಿಸಿಕೊಂಡು ಸಮಿತಿಯನ್ನು ವಿಸರ್ಜಿಸಿರುವುದು, ಕೇವಲ ಕಣ್ಣೊರೆಸುವ ತಂತ್ರ. ಟಿಪ್ಪಣಿಯಲ್ಲಿ ಎಲ್ಲಿಯೂ ಆಗಿರುವ ತಪ್ಪನ್ನು ಒಪ್ಪಿಕೊಳ್ಳುವುದಾಗಲಿ ಅಥವಾ ಸಂವಿಧಾನಕ್ಕೆ ವಿರುದ್ಧವಾಗಿ ವೈದೀಕರಣ ನೆಲೆಯಲ್ಲಿ ಸೇರಿಸಿರುವ ತಿರುಚಿರುವ ಪಾಠಗಳನ್ನು ಕೈಬಿಡುವ ಬಗ್ಗೆಯಾಗಲಿ ಪ್ರಸ್ತಾಪವಾಗಿಲ್ಲ .
ಯಾವುದೇ ಪ್ರಜಾಸತ್ತಾತ್ಮಕ ವಿಧಾನವಾಗಲಿ ಅಥವಾ ಪಠ್ಯ ಪುಸ್ತಕ ರಚನೆಗೆ/ ಪರಿಷ್ಕರಣೆಗೆ ಅಗತ್ಯವಾದ ಒಂದು ಶಿಕ್ಷಣ ಶಾಸ್ತ್ರೀಯ ಕ್ರಮವನ್ನಾಗಲಿ ಅನುಸರಿಸಿದ ಪ್ರಕ್ರಿಯೆ ಮೂಲಕ ಪರಿಷ್ಕರಿಸಿದ ಪುಸ್ತಕಗಳನ್ನು ಆಧರಿಸಿ ಮಕ್ಕಳಿಗೆ ಕಲಿಸುವುದು ಪ್ರಜಾಪ್ರಭುತ್ವಕ್ಕೆ ಹಾಗು ಸಂವಿಧಾನಕ್ಕೆ ಅಪಚಾರ .
ಈ ಕಾರಣದಿಂದ ಸಂವಿಧಾನ ಪರವಾದ ಈ ಹೋರಾಟ ಮುಂದುವರಿಯಬೇಕು .ನಮ್ಮ ಹಕ್ಕೊತ್ತಾಯ ಈ ಕೆಳಗಿನಂತಿರಬೇಕು :
೧. ಪರಿಷ್ಕರಣೆ ನಿಯಮ ಬಾಹಿರ ಹಾಗು ಸಂವಿಧಾನ ವಿರೋಧಿಯಾದ ಕಾರಣ, ಪರಿಷ್ಕರಣೆಯ ಹೆಸರಲ್ಲಿ ಸೇರಿಸಿರುವ ಎಲ್ಲ ಕೋಮುವಾದಿ ಪಾಠಗಳು ಹಾಗು ದುರುದ್ದೇಶದಿಂದ ಬದಲಿಸಿರುವ ಶೀರ್ಷಿಕೆ , ಪದಪುಂಜ , ವಾಕ್ಯ , ಪ್ಯಾರಾ, ಇತ್ಯಾದಿಗಳು, ಸಂವಿಧಾನದ ಮೂಲ ಆಶಯಕ್ಕೆ ಧಕ್ಕೆ ತರುವಂತಿರುವುದರಿಂದ , ಸಂಪೂರ್ಣ ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು.
೨ .ಪರಿಷ್ಕೃತ ಪುಸ್ತಕಗಳ ವಿತರಣೆ ಸ್ಥಗಿತಗೊಳಿಸಿ ಎಲ್ಲವನ್ನು ಹಿಂಪಡೆಯಬೇಕು
೩. ಈ ಹಿಂದೆ ಇದ್ದ ಪುಸ್ತಕಗಳನ್ನು ಯಥಾವತ್ತಾಗಿ ಮುಂದುವರಿಸಬೇಕು.
೪. ಪಠ್ಯಪುಸ್ತಕ ಪರಿಷ್ಕರಣೆ ಹೆಸರಿನ ಈ ಪ್ರಹಸನದಲ್ಲಿ ಆಗಿರುವ ಲೋಪಗಳನ್ನು ಅಧ್ಯಯನ ಮಾಡಿ ವರದಿ ಸಲ್ಲಿಸಲು ಒಂದು ಸ್ವತಂತ್ರ ಶಿಕ್ಷಣ ಹಾಗು ವಿಷಯ ತಜ್ಞರ ಸಮಿತಿ ರಚಿಸಬೇಕು.
– ಡಾ.ನಿರಂಜನಾರಾಧ್ಯ ವಿ.ಪಿ. ಶಿಕ್ಷಣ ತಜ್ಞರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.