(www.vknews.in) ದಾವಣಗೆರೆ: ಇಂದು ಮಲೆಬೆನ್ನೂರು ತಾಲೂಕಿನ ಹಾಲಿವಾಣ ಕಾರ್ಯಕ್ಷೇತ್ರ ಬೀರಲಿಂಗೇಶ್ವರ ಸಮುದಾಯ ಭವನದಲ್ಲಿ ಶ್ರಿ ಕ್ಷೇತ್ರ ದರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಗ್ರಾಮ ಪಂಚಾಯತ್ ಹಾಗೂ ಸ್ವ ಸಹಾಯ ಗುಂಪುಗಳು ಹಾಗೂ ಹಾಲಿವಾಣ ಗ್ರಾಮಸ್ಥರ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಬಹಳ ವಿಜೃಂಭಣೆಯಿಂದ ಅಚರಿಸಲಾಯಿತು
ಈ ಕಾರ್ಯಕ್ರಮದಲ್ಲಿ ತಾಲೂಕಿನ ಗೌರವನ್ವಿತ ಯೋಜನಾಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರಂಗನಾಥ ,ಮಾಜಿ ಅಧ್ಯಕ್ಷರು ಪರಮೇಶ್ವರಪ್ಪ, ಪಿಡಿಒ ರಮೇಶ್, ವಲಯದ ಮೇಲ್ವಿಚಾರಕರು ತಾಲೂಕಿನ ಕೃಷಿ ಅಧಿಕಾರಿ ಗಂಗಾಧರ, ಗ್ರೀನ್ವೇ ಅಧಿಕಾರಿ ಶಂಕರ, ಒಕ್ಕೂಟದ ಅಧ್ಯಕ್ಷರು ಹಾಗೂ ಎಸ್ಡಿಎಂಸಿ ಸಮನ್ವಯ ವೇದಿಕೆ ಜಿಲ್ಲಾಧ್ಯಕ್ಷ ರಾದ ಶಿವಕ್ಕಳ ಆಂಜನೇಯ , ಒಕ್ಕೂಟದ ಪದಾಧಿಕಾರಿಗಳು,, ಸೇವಾ ಪ್ರತಿನಿಧಿಗಳು ಮತ್ತು ಹೆಚ್ಚಿನ ಗ್ರಾಮಸ್ಥರು ಉಪಸ್ಥಿತಿಯಲ್ಲಿ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು
ಕಾರ್ಯಕ್ರಮದಲ್ಲಿ ಯೋಜನಾಧಿಕಾರಿಗಳು ಪರಿಸರ ದಿನಾಚರಣೆ ಮತ್ತು ಸಂರಕ್ಷಣೆ ಬಗ್ಗೆ ಮಾಹಿತಿ ನೀಡಿದರು,
ಅದೇ ರೀತಿ ಅತಿಥಿ ಗಳೆಲ್ಲರು ಪರಿಸರ ದಿನಾಚರಣೆಯ ಅಗತ್ಯತೆಯ ಬಗ್ಗೆ ನಾವುಗಳು ಕೈ ಗೊಳ್ಳಬೇಕಾದ ಕ್ರಮಗಳ ಬಗ್ಗೆ ತಿಳಿ ಹೇಳಿದರು. ಹಾಗೂ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದ ಕೊನೆಯಲ್ಲಿ ಎಲ್ಲರಿಗೂ ಸಸಿಯಾನ್ನು ವಿತರಣೆ ಮಾಡಲಾಯಿತು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.