(www.vknews.in) : ವಿಶ್ವ ಪರಿಸರ ದಿನದ ಪ್ರಯುಕ್ತವಾಗಿ ಅಲೈಯನ್ಸ್ ವಿಶ್ವವಿದ್ಯಾಲಯ HR ಡಿಪಾರ್ಟ್ಮೆಂಟ್ ಕಡೆಯಿಂದ ಪರಿಸರ ಕಾಳಜಿ ಮಹತ್ವ ಸಾರುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪರಿಸರ ಕಾಳಜಿ ವಹಿಸುವ ಈ ಚಟುವಟಿಕೆಯಲ್ಲಿ ಅಲೈಯನ್ಸ್ ವಿಶ್ವವಿದ್ಯಾಲಯ ಸಿಬ್ಬಂದಿ, ರೋಟರ್ಯಾಕ್ಟ್ ಕ್ಲಬ್, ಹಾಗೂ ಎನ್ ಎಸ್ ಎಸ್ ಘಟಕದ ಸದಸ್ಯರೂ ಕೈ ಜೋಡಿಸಿದ್ರು..
ಪರಿಸರ ಉಳಿಸುವ ನಿಟ್ಟಿನಲ್ಲಿ ವಿಶ್ವಸಂಸ್ಥೆಯಿಂದ ಈ ವರ್ಷ ತೆಗೆದುಕೊಳ್ಳಲಾದ ಒಂದೇ ಒಂದು ಭೂಮಿ ಅನ್ನೋ ಧ್ಯೇಯದ ಹಿನ್ನೆಲೆ, ನಮ್ಮ ಕಾಲೇಜಿನ ಸಿಬ್ಬಂದಿಯಿಂದ ಕ್ಯಾಂಪಸ್ ನ ಸುತ್ತಾಮುತ್ತಾ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾಲೇಜಿನ ಮುಂಭಾಗ ಸೇರಿದಂತೆ ಬಸ್ ನಿಲ್ದಾಣ ಹಾಗೂ ಚಿಕ್ಕ ಹಾಗಡೆ ಗ್ರಾಮಕ್ಕೆ ಹೋಗುವ ಹಲವು ಕಡೆ ಸ್ವಚ್ಛತಾ ಕಾರ್ಯ ಮಾಡಲಾಯಿತು. ಅಷ್ಟೇ ಅಲ್ಲ ಮಳೆಗಾಲದಲ್ಲಿ ನೀರನ್ನು ಸಂರಕ್ಷಣೆ ಮಾಡಿ ಅದನ್ನು ಹೇಗೆ ಮರು ಬಳಕೆ ಮಾಡಬಹುದು ಎನ್ನುವ ವಿಚಾರವನ್ನು ಸಾರ್ವಜನಿಕ ಗಮನಕ್ಕೆ ತರಲಾಯಿತು.
ನಿಸರ್ಗಕ್ಕೆ ಹಾನಿ ಮಾಡುವಂತಹ ಪ್ಲಾಸ್ಟಿಕ್ ಪದಾರ್ಥಗಳ ಬಳಕೆ ಕಡಿಮೆ ಮಾಡುವ ನಿಟ್ಟಿನಲ್ಲಿ 75 ಕ್ಕೂ ಹೆಚ್ಚಿನ ಸಿಬ್ಬಂದಿ ಜಾಗೃತಿ ಮೂಡಿಸಿದ್ರು ಅಲ್ಲದೇ ಇದನ್ನು ನೆನಪಿನಲ್ಲಿ ಇಟ್ಟುಕೊಳ್ಳುವ ಉದ್ದೇಶದಿಂದ ಭಾವಚಿತ್ರಗಳನ್ನೂ ತೆಗೆಯಲಾಯಿತು. ಇಷ್ಟೆಲ್ಲಾ ಸಾಧ್ಯವಾಗಿದ್ದು, ಅಲೈಯನ್ಸ್ ವಿಶ್ವವಿದ್ಯಾಲಯ ಸಿಬ್ಬಂದಿ ಹಾಗೂ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳ ಪರಿಸರ ಕಾಳಜಿ ಪ್ರಜ್ಞೆ ಸಂಕೇತವಾಗಿದೆ. ಬಸ್ ನಿಲ್ದಾಣ ಹಾಗೂ ಕ್ಯಾಂಪಸ್ ಸುತ್ತಾಮುತ್ತಾ ಪ್ಲಾಸ್ಟಿಕ್ ಬಳಸದಂತೆ ಹಾಗೆಯೇ ಇದರಿಂದಾಗುವ ಕೆಟ್ಟ ಪರಿಣಾಮಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಲಾಯಿತು..
ಪರಿಸರ ಕಾಳಜಿ ತೋರುವ ನಿಟ್ಟಿನಲ್ಲಿ ಅಲೈಯನ್ಸ್ ವಿಶ್ವವಿದ್ಯಾಲಯ ಯಾವತ್ತೂ ಮೊದಲ ಸಾಲಿನಲ್ಲಿ ನಿಲ್ಲುತ್ತದೆ. ವಿದ್ಯಾಲಯದ ಆವರಣದಲ್ಲಿ ಅಚ್ಚ ಹಸಿರು ತುಂಬಿರುವುದೇ ಇದಕ್ಕೆ ಸ್ಪಷ್ಟ ಉದಾಹರಣೆ. ಹಾಗಾಗಿಯೇ ಪರಿಸರ ಉಳಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮ ಹಮ್ಮಿಕೊಂಡು ಪರಿಸರ ದಿನದ ಮಹತ್ವ ಸಾರುವುದು ಇದರ ಮೂಲ ಉದ್ದೇಶವಾಗಿದೆ..
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.