ಅಲ್ಪಾವಧಿಯಲ್ಲಿ ಜನ ಮನ ಗೆದ್ದು ಕನ್ನಡ ನಾಡಿನ ಅಭಿಮಾನದ ವಾರ್ತಾ ಮಾಧ್ಯಮ ವಿಶ್ವ ಕನ್ನಡಿಗ ನ್ಯೂಸ್, ಕನ್ನಡ ಭಾಷೆಯ ಅಭಿಮಾನವಾಗಿ ಜಗತ್ತಿನೆಲ್ಲೆಡೆ ವಸ್ತುನಿಷ್ಠ ಗುಣಮಟ್ಟದ ಸುದ್ದಿಗಳ ಮೂಲಕ ಮನೆ ಮಾತಾಗಿದೆ. ವಿಕೆ ನ್ಯೂಸ್ ಸಾಗಿ ಬಂದ ಹಾದಿ ಅದ್ಭುತ ವಾದದ್ದು. ಆರ್ಥಿಕ ಲಾಭವಿಲ್ಲದಿದ್ದರೂ ಜನರ ನಡುವೆ ಸಂಪರ್ಕ ಸೇತುವಿನಂತೆ ಪ್ರಾಮಾಣಿಕ ಮತ್ತು ಸತ್ಯನಿಷ್ಠೆ ಯ ಪ್ರತೀಕವಾಗಿ ಎಲ್ಲಾ ವರ್ಗದ ಜನರನ್ನು ತಲುಪಿ ಅವರಲ್ಲೊಬ್ಬರೆಂಬಂತೆ ಜನಹಿತವಿರುವ ವರದಿ, ಬರಹಗಳನ್ನು ಸರಳ ಮತ್ತು ಯಾರಿಗೂ ಸುಲಭದಲ್ಲಿ ಅರ್ಥವಾಗುವ ಶೈಲಿಯಲ್ಲಿ ಪ್ರಕಟಿಸಿ, ಇಡೀ ಮಾಧ್ಯಮ ಕ್ಷೇತ್ರ ಅಸಂಬದ್ಧತೆಯ ತಾಣವಾಗಿರುವ ವರ್ತಮಾನ ಸನ್ನಿವೇಶದಲ್ಲಿ ಕೂಡ ತನ್ನತನವನ್ನು ಕೈ ಬಿಡದೆ ಇಡೀ ಜನರ ಧ್ವನಿಯಾಗಿ ಮೂಡಿಬಂದಿದೆ.
ವರದಿಗಾರಿಕೆಯ ಹನ್ನೆರಡು ವರ್ಷಗಳತ್ತ ದಾಪುಗಾಲಿಟ್ಟಿರುವ ವಿಕೆ ನ್ಯೂಸ್ ಉತ್ತರೋತ್ತರ ಯಶಸ್ಸಿನ ಮೆಟ್ಟಿಲುಗಳನ್ನು ಹತ್ತಿ ಜನರ ಧ್ವನಿಯಾಗಿ ಎಲ್ಲೆಡೆ ಪ್ರಜ್ವಲಿಸಲಿ ಎಂದು ಮನದುಂಬಿ ಹಾರೈಸುತ್ತಿದ್ದೇನೆ.
– ಹೆಚ್.ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ ಅಧ್ಯಕ್ಷರು, ಕರ್ನಾಟಕ ರಾಜ್ಯ ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ, ದಕ್ಷಿಣ ಕನ್ನಡ ಜಿಲ್ಲೆ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.