(www.vknews.in) : ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆಯುತ್ತಿದ್ದ ರೈತ ಸಂಘದ ಸಮಾಲೋಚನಾ ಸಭೆಗೆ ನುಗ್ಗಿದ ಬಿಜೆಪಿ ಕಾರ್ಯಕರ್ತರು ಮೋದಿ ಮೋದಿ ಎಂದು ಘೋಷಣೆ ಕೂಗುತ್ತಾ, ರೈತ ಹೋರಾಟಗಾರರಾದ ರಾಕೇಶ್ ಟಿಕಾಯತ್ ರವರ ಮೇಲೆ ಹಲ್ಲೆ ನಡೆಸಿ, ಮಸಿ ಬಳಿದಿರುವ ಘಟನೆಗೆ ಸರ್ಕಾರದ ಕುಮ್ಮಕ್ಕೆ ಕಾರಣ ಎಂದು ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ ರಾಜ್ಯಾಧ್ಯಕ್ಷರಾದ ರಹೀಮ್ ಪಟೇಲ್ ಆರೋಪಿಸಿದ್ದಾರೆ.
ಕ್ರಿಯೆಗೆ ಪ್ರತಿಕ್ರಿಯೆ ಎಂದು ಸ್ವತಃ ಮುಖ್ಯ ಮಂತ್ರಿ ಬೊಮ್ಮಾಯಿ ಹೇಳಿರುವುದರಿಂದ ಈ ಎಲ್ಲಾ ಅನಾಹುತಗಳು ಆಗುತ್ತಿವೆ. ಶಾಂತಿಯ ತೋಟ ಎಂದು ಹೆಸರುವಾಸಿಯಾಗಿರುವ ಕರ್ನಾಟಕ ರಾಜ್ಯಕ್ಕೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಸಿ ಬಳಿಯುವ ಕೃತ್ಯಕ್ಕೆ ಬಿಜೆಪಿ ಕೈಹಾಕಿದೆ. ಮೋದಿಗೆ ಜೈಕಾರ ಹಾಕುತ್ತ ಏಕಾಏಕಿ ನುಗ್ಗಿದ ಹಿಂದುತ್ವ ಗೂಂಡಾಗಳು ಸಿಕ್ಕ ಸಿಕ್ಕವರ ಮೇಲೆ ಮಸಿ ಎರಚಿದರು. ವೇದಿಕೆಯ ಮೇಲಿದ್ದ ಮುಖಂಡರಿಗೆ ಹಲ್ಲೆ ನಡೆಸಿದರು. ಕುರ್ಚಿ ಎಸೆದು ದಾಂಧಲೆ ನಡೆಸಿರುವುದು ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಗಮನಿಸಿದ್ದೇವೆ. ಈ ರೀತಿಯಾಗಿ ಧಾಂದಲೇ ಮಾಡಿರುವ ಕಿಡಿಗೇಡಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಆಗಲೇ ಬೇಕು ಎಂದು ರಹೀಮ್ ಪಟೇಲ್ ಆಗ್ರಹಿಸಿದ್ದಾರೆ.
ಫ್ಯಾಸಿಸ್ಟ್ ಗೂಂಡಾಗಳಿಂದ ಜನಪರ ಚಳವಳಿಯನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಹೇಳಿರುವ ರಹೀಮ್ ಪಟೇಲ್, ಮೋದಿ ಸರ್ಕಾರದ ದುರಾಡಳಿತದ ವಿರುದ್ಧ ಇನ್ನು ಹೆಚ್ಚು, ಫಲಿತಾಂಶ ಭರಿತ ಹೋರಾಟಗಳು ಹಮ್ಮಿಕೊಳ್ಳಲಿದೆ ಎಂದು ಸರ್ಕಾರಕ್ಕೆ ಎಚ್ಚರಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.