ಕೋಲಾರ ( ವಿಶ್ವಕನ್ನಡಿಗ ನ್ಯೂಸ್ ) : ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ 2022-23ನೇ ಸಾಲಿನಲ್ಲಿ ಅನುಷ್ಠಾನಗೊಳಿಸುತ್ತಿರುವ ಟ್ಯಾಕ್ಸಿ / ಗೂಡ್ಸ್ / ಪ್ಯಾಸೆಂಜರ್ ಆಟೋರಿಕ್ಷಾ ವಾಹನ ಖರೀದಿ ಯೋಜನೆ , ಶ್ರಮಶಕ್ತಿ ಸಾಲದ ಯೋಜನೆ , ಸ್ವಯಂ ಉದ್ಯೋಗ ಯೋಜನೆಗಳಲ್ಲಿ ಸಾಲ ಸೌಲಭ್ಯ ಪಡೆಯಲು ಮತೀಯ ಅಲ್ಪಸಂಖ್ಯಾತರಾದ ಮುಸ್ಲಿಂ , ಕ್ರಿಶ್ಚಿಯನ್ , ಜೈನರು , ಬೌದ್ಧರು , ಸಿಖ್ಯರು ಹಾಗೂ ಪಾರ್ಸಿಗಳು ಜನಾಂಗದವರಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ .
ಅರ್ಜಿದಾರರು ಮತೀಯ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿರಬೇಕು . ಅರ್ಜಿದಾರರು ಕರ್ನಾಟಕ ರಾಜ್ಯದಲ್ಲಿ ಕನಿಷ್ಠ 15 ವರ್ಷದಿಂದ ಖಾಯಂ ನಿವಾಸಿಯಾಗಿರಬೇಕು . ಯೋಜನೆಗೆ ಸಂಬಂಧಿಸಿದಂತೆ ನಗರ ಪ್ರದೇಶದಲ್ಲಿ ವಾಸ ಮಾಡುವ ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ವಾಸ ಮಾಡುವ ಕುಟುಂಬದ ಶ್ರಮಶಕ್ತಿ ಯೋಜನೆಯ ವಾರ್ಷಿಕ ಆದಾಯ 3.50 ಲಕ್ಷಗಳು , ಸ್ವಯಂ ಉದ್ಯೋಗ ಯೋಜನೆಯ ನಗರ ಪ್ರದೇಶ 1.03 ಲಕ್ಷಗಳು , ಗ್ರಾಮಾಂತರ ರೂ . 81,000 / – , ಟ್ಯಾಕ್ಸಿ / ಗೂಡ್ಡ / ಪ್ಯಾಸೆಂಜರ್ ಆಟೋರಿಕ್ಷಾ ವಾಹನ ಖರೀದಿ ಯೋಜನೆಗೆ 4.50 ಲಕ್ಷಗಳು ವಾರ್ಷಿಕ ಆದಾಯವಾಗಿರಬೇಕು .
ವಯೋಮಿತಿ 18 ರಿಂದ 55 ವರ್ಷದೊಳಗಿರಬೇಕು . ಶೇ . 33 ರಷ್ಟು ಮಹಿಳೆಯರಿಗೆ ಮೀಸಲಾತಿ ಇರುತ್ತದೆ . ಶೇ . 3 ರಷ್ಟು ಅಂಗವಿಕಲರಿಗೆ ಮತ್ತು ಶೇ . 2 ರಷ್ಟು ಮಾಜಿ ಸೈನಿಕರಿಗೆ ಮೀಸಲಾತಿ ಇರುತ್ತದೆ . ಅರ್ಜಿದಾರರು ತಮ್ಮ ಅರ್ಜಿಯೊಂದಿಗೆ ಜಾತಿ ಮತ್ತು ಆದಾಯ ಪತ್ರ , ರೇಷನ್ ಕಾರ್ಡ್ , ಆಧಾರ್ ಕಾರ್ಡ್ , ಗುರುತಿನ ಚೀಟಿ , ಬ್ಯಾಂಕ್ ಖಾತೆ ಪುಸ್ತಕ ಪ್ರತಿ , ಯೋಜನಾ ವರದಿ ಹಾಗೂ ಅರ್ಜಿದಾರರ ಹಾಗೂ ಜಾಮೀನುದಾರರ 2 ಭಾವಚಿತ್ರಗಳು .
ಈ ಹಿಂದೆ ನಿಗಮದ ಸೌಲಭ್ಯವನ್ನು ಪಡೆದವರು ಮತ್ತೆ ಸೌಲಭ್ಯವನ್ನು ಪಡೆಯಲು ಅರ್ಹರಿರುವುದಿಲ್ಲ . ಅರ್ಜಿದಾರರು ಕಡ್ಡಾಯವಾಗಿ ಐ.ಎಫ್.ಎಸ್.ಸಿ ಕೋಡ್ ಇರುವ ಬ್ಯಾಂಕ್ ಖಾತೆ ಪಾಸ್ ಬುಕ್ ಪ್ರತಿಯನ್ನು ಸಲ್ಲಿಸಬೇಕು . ಅರ್ಜಿಯನ್ನು ಆನ್ಲೈನ್ನಲ್ಲಿ https://kmdconline.karnataka.gov.in ನಲ್ಲಿ ಜುಲೈ 15 ರೊಳಗೆ ಸಲ್ಲಿಸಬೇಕು .
ಅರ್ಜಿಯ ಪ್ರತಿ ಹಾಗೂ ಅಗತ್ಯ ದಾಖಲಾತಿಗಳೊಂದಿಗೆ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ( ನಿ ) , ಮೊದಲನೇ ಮಹಡಿ , ಮೌಲಾನಾ ಅಜಾದ್ ಭವನ , ಶ್ರೀ ದೇವರಾಜ್ ಅರಸು ಬಡಾವಣೆ , 2 ನೇ ಬ್ಲಾಕ್ , ವಾರ್ಡ್ ನಂ -01 , ಟಮಕ -563103 ಇಲ್ಲಿ ಸಲ್ಲಿಸಬಹುದು . ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08152-200786 ಅಥವಾ ಸಹಾಯವಾಣಿ ಸಂಖ್ಯೆ 8277799990 ಗೆ ಸಂಪರ್ಕಿಸಬಹುದು ಎಂದು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ .
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.