(www.vknews.in) : ಸಮಸ್ತ ಕೇರಳ ಜಂ ಇಯ್ಯತುಲ್ ಮುಅಲಿಮೀನ್ ಮಿತ್ತಬೈಲ್ ರೇಂಜ್ ಇದರ ವಾರ್ಷಿಕ ಮಹಾಸಭೆಯು ದಿನಾಂಕ 06/06/2022 ರಂದು ಬೆಳಿಗ್ಗೆ 9-30ಕ್ಕೆ ಮಿತ್ತಬೈಲ್ ದಾರುಲ್ ಮಅರಿಫ್ ಮದ್ರಸ ಸಭಾಂಗಣದಲ್ಲಿ SKIMV ಬೋರ್ಡು ಮುಫತ್ತಿಸ್ ಎಂ. ಎಚ್. ಕಾಸಿಂ ಮುಸ್ಲಿಯಾರ್ರವರ ಅಧ್ಯಕ್ಷತೆಯಲ್ಲಿ ಜರಗಿತು.
ಕಾಸಿಂ ಮುಸ್ಲಿಯಾರ್ ರವರ ದುವಾದೊಂದಿಗೆ ಆರಭವಾದ ಸಭೆಯನ್ನು ಸ್ಥಳೀಯ ಇಮಾಂ ಫಕ್ರುದ್ದೀನ್ ಫೈಝಿ ಉದ್ಘಾಟನೆ ಮಾಡಿದರು. ಪ್ರಧಾನ ಕಾರ್ಯದರ್ಶಿ ಮುಸ್ತಫಾ ಪೈಝಿ ಮಂಡಿಸಿದ ವಾರ್ಷಿಕ ವರದಿ ಮತ್ತು ಲೆಕ್ಕ ಪತ್ರವನ್ನು ಸರ್ವಾನುಮತದಿಂದ ಅಂಗಿಕರಿಸಲಾಯ್ತು. ನಂತರ 2022-23 ನೇ ವರ್ಷದ ಮಿತ್ತಬೈಲ್ ಮತ್ತು ಫರಂಗಿಪೇಟೆ ರೇಂಜ್ ಪದಾಧಿಕಾರಿಗಳನ್ನು ಆರಿಸಲಾಯಿತು.
ಮಿತ್ತಬೈಲ್ ರೆಂಜ್ ಅದ್ಯಕ್ಷರಾಗಿ ಅಲ್ ಹಾಜಿ ಮುಹಮ್ಮದ್ ಹನೀಫ್ ಮುಸ್ಲಿಯಾರ್ ಪುನರಾಯ್ಕೆಯಾದರು. ಪ್ರದಾನ ಕಾರ್ಯದರ್ಶಿಯಾಗಿ ಮುಸ್ತಪ ಪೈಝಿ, ಪರೀಕ್ಷಾ ಬೋರ್ಡು ಚೇರ್ಮೆನ್ ಆಗಿ ಅಲ್ ಹಾಜಿ ಅಬ್ದುಲ್ ಮಜೀದ್ ಮದನಿ, ಕೋಶಾಧಿಕಾರಿಯಾಗಿ ಯೂಸುಫ್ ಬದ್ರಿಯಾ, ಉಪಾಧ್ಯಕ್ಷರಾಗಿ ಇಬ್ರಾಹಿಂ ದಾರಿಮಿ ಮತ್ತು ಬಶೀರ್ ಅಝ್ಹರಿ, ಕಾರ್ಯದರ್ಶಿಗಳಾಗಿ ಫಕ್ರುದ್ದೀನ್ ದಾರಿಮಿ ಮತ್ತು ಅನ್ವರ್ ಅಝ್ಹರಿ, I T ಕೊಡಿನೇಟರ್ ಆಗಿ ರಫೀಕ್ ಅಸ್ಲಮಿ, SKSBV ಕನ್ವಿನರ್ ಆಗಿ ರಶೀದ್ ಯಮಾನಿ ಆಯ್ಕೆಯಾದರು.
ಆರಂಭದಲ್ಲಿ ಸ್ವಾಗತ ಮಾಡಿದ ಪ್ರಧಾನ ಕಾರ್ಯದರ್ಶಿ ಮುಸ್ತಪ ಪೈಜಿ ಕೊನೆಯಲ್ಲಿ ವಂದಿಸಿದರು. SKJMCC ಮುದರ್ರಿಬ್ ಅಲ್ ಹಾಜಿ ರಿಯಾಝ್ ರಹ್ಮಾನಿ, ಮಿತ್ತಬೈಲ್ ಮುಹ್ಯುದ್ದೀನ್ ಮಸ್ಜಿದ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಸಲಾಂ, ಮಿತ್ತಬೈಲ್ ದಾರುಲ್ ಮಅರಿಫ್ ಮದ್ರಸ ಅಧ್ಯಕ್ಷರಾದ ಅಬ್ದುಲ್ ಕಾದರ್ ಹಾಜಿ, ಮಿತ್ತಬೈಲ್ ರೆಂಜ್ ಮೇನೇಜ್ಮೆಂಟ್ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ನಂದರಬೆಟ್ಟು ಹಾಗೂ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.
ವರದಿ : ಇಬ್ನ್ ಝೈತೂನ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.