ಕತ್ತರ್(ವಿಶ್ವಕನ್ನಡಿಗ ನ್ಯೂಸ್): ಮಾಧ್ಯಮ ಚರ್ಚೆಯೊಂದರಲ್ಲಿ ಇತ್ತೀಚಿಗೆ ಪ್ರವಾದಿ(ಸ) ಯವರ ಬಗ್ಗೆ ಮಾಡಿದ ವ್ಯಕ್ತಿಹತ್ಯೆ ಹೇಳಿಕೆಗಳು ಒಂದು ಜನಾಂಗದ ಮೇಲಿನ ದ್ವೇಷದ ಪ್ರಕಟಣೆಯಾಗಿದ್ದು, ಮುಸ್ಲಿಮರ ಮೇಲಿನ ಜನಾಂಗೀಯ ದ್ವೇಷದ ಪ್ರತಿಬಿಂಬವಾಗಿದೆ. ಮುಂದಕ್ಕೆ ಇದು ಧರ್ಮನಿಂದನೆಯ ಮತ್ತು ಆರಾಧನಾಲಯಗಳ ಮೇಲಿನ ಅತಿಕ್ರಮಣವಾಗಿ ಮಾರ್ಪಟ್ಟು ಸಮಾಜದ ನಡುವೆ ಗಲಭೆ ದೊಂಬಿಗಳಿಗೆ ಪ್ರಚೋದನೆಯಾಗುತ್ತದೆ.
ಮುಸ್ಲಿಂ ಸಮುದಾಯಕ್ಕೆ ಪ್ರಿಯಕರವಾದ ಮತ್ತು ಗೌರವಾನ್ವಿತವಾದವುಗಳನ್ನು ಅವಮಾನಿಸುವ ಮೂಲಕ ವಿಶ್ವಾಸಿಗಳನ್ನು ಭಾವನಾತ್ಮಕ ಪ್ರತಿಕ್ರಿಯೆಗಳಿಗೆ ಸೆಳೆಯಲು ಸಂಘಪರಿವಾರವು ಸತತವಾಗಿ ಪ್ರಯತ್ನಿಸುತ್ತಿದ್ದು, ಇತ್ತೀಚೆಗೆ ಈ ಚಾಳಿಯು ಇನ್ನಷ್ಟು ತೀವ್ರ ಸ್ವರೂಪದಲ್ಲಿ ನಡೆಯುವುದಕ್ಕೆ ಅಧಿಕಾರದಲ್ಲಿರುವ ರಾಜಕೀಯ ಪಕ್ಷಗಳ ಮೌನ ಮತ್ತು ಪರೋಕ್ಷ ಬೆಂಬಲಗಳೇ ಪ್ರಮುಖ ಕಾರಣವಾಗಿರುತ್ತದೆ.
ಕೋಮು ವಿಭಜನೆ ಸೃಷ್ಟಿಸಿ ರಾಜಕೀಯ ಲಾಭ ಪಡೆಯುವ ರಾಜಕೀಯ ಪಕ್ಷಗಳ ಇಂತಹ ತಂತ್ರಗಳಿಗೆ ವಿಶ್ವಾಸಿಗಳು ಬಲಿಯಾಗದಂತೆ ಎಚ್ಚರ ವಹಿಸಬೇಕಿದ್ದು, ಬಹುತ್ವದ ಎಲ್ಲಾ ಸಾಧ್ಯತೆಗಳನ್ನು ದುರ್ಬಲಗೊಳಿಸುವ ಮತ್ತು ಕೋಮು ಸೌಹಾರ್ದತೆಗೆ ಧಕ್ಕೆ ತರುವ ಇಂತಹ ಉಲ್ಲೇಖಗಳ ವಿರುದ್ಧ ಪ್ರಜಾಸತ್ತಾತ್ಮಕ ಸಮಾಜವು ಬಲವಾಗಿ ಪ್ರತಿಕ್ರಿಯಿಸಬೇಕಿದೆ. ಇತರ ರಾಷ್ಟ್ರಗಳ ಮುಂದೆ ಅಪಮಾನಗೊಳ್ಳುವಂತಹ ಇಂತಹ ಪ್ರಸಂಗಗಳು ರಾಷ್ಟ್ರಕ್ಕೆ ಮತ್ತು ಪ್ರಜೆಗಳಿಗೆ ಶುಭಕರವಾದುದಲ್ಲ.
ಅಪಕ್ವ ಮತ್ತು ಮೊಂಡುವಾದಗಳು ಮುರಿದು ಬಿದ್ದು ಮಾಧ್ಯಮದ ಮುಂದೆ ಅನುಭವಿಸುವ ಸೋಲಿನ ಭಯವಾಗಿರುತ್ತದೆ ಇವರನ್ನು ಇತರರ ಮೇಲೆ ರೇಗುತ್ತಾ, ವ್ಯಕ್ತಿಹತ್ಯೆ ಮತ್ತು ನೀಚವಾಕ್ಯಗಳ ಹಾದಿಯನ್ನು ಅನುಸರಿಸುವಂತೆ ಮಾಡುವುದು. ಈ ಮುಂದೆಯೂ ಪ್ರಪಂಚದ ಹಲವು ಕಡೆಗಳಲ್ಲಿ ಇಂತಹ ಹಲವು ವಿಫಲ ಪ್ರಯತ್ನಗಳು ನಡೆದಿದ್ದು, ಯಾವುದೇ ಅವಿವೇಕಿ ಹೇಳಿಕೆಗಳಿಂದ ಪ್ರವಾದಿಯವರನ್ನು ಮತ್ತು ಅವರ ಮಾದರೀ ವ್ಯಕ್ತಿತ್ವವನ್ನು ಕಳಂಕಗೊಳಿಸಲು ಸಾಧ್ಯವಿಲ್ಲ. ಲೋಕಜನತೆಯು ಅತಿಯಾಗಿ ಗೌರವಿಸುವ ಪ್ರವಾದಿಯವ ಬಗ್ಗೆ ನಿಂದನಾತ್ಮಕ ಹೇಳಿಕೆಯಿಂದ ಅವರ ಅನುಯಾಯಿಗಳ ಮನನೋಯಿಸಿದ ವ್ಯಕ್ತಿಗಳು, ಮತ್ತು ಅವರನ್ನು ಪೋಷಿಸುವ ರಾಜಕೀಯ ಪಕ್ಷಗಳು ಸಮಾಜದೊಂದಿಗೆ ಮತ್ತು ಮುಸ್ಲಿಂ ಸಮುದಾಯದೊಂದಿಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕಾಗಿದೆ ಎಂದು ಕೆಸಿಎಫ್ ಕತ್ತರ್ ನಾಯಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.