(www.vknews.in) : ಕೇರಳದ ಮಲಪ್ಪುರಂ ಜಿಲ್ಲೆಯ ಸೀಯಾಬ್ ಚೊಟ್ಟುರು ರವರು ಕಾಲ್ನಡಿಗೆಯ ಮೂಲಕ ಹಜ್ ಯಾತ್ರೆಗೆ ಹೊರಟಿದ್ದು, ಅವರ ಹಜ್ ಆಕಾಂಕ್ಷೆಯನ್ನು ಪರಮಶಕ್ತನಾದ ಅಲ್ಲಹನು ಇನ್ ಶಾ ಅಲ್ಲಾಹ್ ಪೂರ್ಣ ಗೊಳಿಸಲಿ ಎಂದು ದುವಾ ಮಾಡುತ್ತೇವೆ. ಇದರೊಂದಿಗೆ, ಹಜ್ಜಾಜ್ ಸೀಯಾಬ್ ಚೊಟ್ಟುರು ರವರು ತಮ್ಮ 8600 ಕ್ಕೂ ಹೆಚ್ಚಿನ ಕಿಲೋ ಮೀಟರ್ ಕ್ರಮಿಸುವ ಮತ್ತು 09 ತಿಂಗಳ ಅವಧಿಯ ಕಾಲ್ನಡಿಗೆ ಯಾತ್ರೆ ಯನ್ನು ಮಲಪ್ಪುರಂನಿಂದ ಶುಭಾರಂಭಗೂಳಿಸಿ ಸಿಯಾಬ್ಬ್ ಚೊಟ್ಟುರು ರವರು ಕರ್ನಾಟಕ ರಾಜ್ಯ ಪ್ರವೇಶಿಸುವ ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ತಲಪಾಡಿ ಗಡಿಯಲ್ಲಿ ಅವರನ್ನು ಪ್ರವೇಶ ಸ್ವಾಗತ ಗೊಳಿಸಲಾಗುವುದು.
ಇಂದು 09 ಜೂನ್ ರಂದು ಮದ್ಯಾಹ್ನ ಸುಮಾರು 12 ಗಂಟೆಗೆ ತಲಪಾಡಿ ಯಲ್ಲಿ ಕರ್ನಾಟಕ ಪ್ರವೇಶಿಸಿ ಕೆ.ಸಿ.ರೋಡು ಮಸೀದಿಯಲ್ಲಿ ಮಧ್ಯಾಹ್ನದ ಊಟದ ನಂತರ ಅಲ್ಪ ವಿಶ್ರಾಂತಿ ನಂತರ ಕಾಲ್ನಡಿಗೆ ಯಾತ್ರೆಯನ್ನು ಮಂಗಳೂರು ಮುಂದುವರಿಸಲಿದ್ದಾರೆ. ರಾತ್ರಿ 07.00 ಗಂಟೆ ಸುಮಾರಿಗೆ ಮಂಗಳೂರು ಪಂಪ್ವೆಲ್ ಮಸ್ಜಿದ್ ತಾಖ್ವಾ ದಲ್ಲಿ ರಾತ್ರಿ ವಿಶ್ರಾಂತಿ ಪಡೆದು ನಾಳೆ ಉಡುಪಿ ಕಡೆ ಮುದಂದುವರಿದು, ಮದ್ಯಾಹ್ನ ಸುರತ್ಕಲ್ ಅಥವಾ ಮುಕ್ಕ ಮಸೀದಿ ತಲುಪುವ ನೀರೀಕ್ಷೆ ಇದೆ. ಸೀಯಾಬ್ ಚೊಟ್ಟುರು ರವರ ಕಾಲ್ನಡಿಗೆ ಯಾತ್ರೆ ಪೂರ್ಣ ಗೊಳ್ಳಲು ಸರ್ವರೂ ದುವಾ ಮಾಡಬೇಕಾಗಿ ವಿನಂತಿ.
ಕೆ.ಅಶ್ರಫ್. ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.