(www.vknews.in) : ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಕೆಮ್ಮಾರ ಇಲ್ಲಿಯ ನೂತನ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯನ್ನು ರಚಿಸಲಾಯಿತು. ಸಭಾಧ್ಯಕ್ಷತೆಯನ್ನು ಶಾಲಾ S.D.M.C. ನಿಕಟಪೂರ್ವ ಅಧ್ಯಕ್ಷರಾದ ಶ್ರೀಯುತ ಹಂಝ ಅವರು ವಹಿಸಿದ್ದರು. ನೂತನ ಅಧ್ಯಕ್ಷರಾಗಿ ಶ್ರೀಯುತ ಅಝೀಝ್.ಬಿ.ಕೆ ಹಾಗೂ ಉಪಾಧ್ಯಕ್ಷರಾಗಿ ಶ್ರೀಮತಿ ಸುಮಯ್ಯ ಆಯ್ಕೆಯಾದರು.
ಸದಸ್ಯರಾಗಿ ಶ್ರೀ ವಾಮನ ಕೆಮ್ಮಾರ, ಹಂಝ.ಬಿ, ಅಬ್ದುಲ್ ಅಜೀಜ್.ಜಿ, ಪದ್ಮನಾಭ ಶೆಟ್ಟಿ, ಹಂಝ.ಪಿ, ಸೆಲಿಕತ್, ಶ್ರೀಮತಿ ವನಿತಾ, ತೇಜಾವತಿ, ಮಹಮ್ಮದ್ ಶರೀಫ್, ಆಯಿಷಾ, ರಶೀದಾ, ಅಬ್ದುಲ್ ಖಾದರ್, ಅಸ್ಮಾ, ಅಬ್ಬಾಸ್, ಯೋಗಿತಾ, ಜಮೀಲ ಬಡ್ಡಮೆ ಆಯ್ಕೆಯಾದರು.
ಅಂಗನವಾಡಿ ಶಿಕ್ಷಕಿ ಶ್ರೀಮತಿ ಸುಂದರಿ ಹಾಗೂ ಪೋಷಕರು ಉಪಸ್ಥಿತರಿದ್ದರು. ಮುಖ್ಯಗುರುಗಳಾದ ಶ್ರೀಮತಿ ಜಯಶ್ರೀ.ಎಂ ಎಲ್ಲರನ್ನು ಸ್ವಾಗತಿಸಿ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು. ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಮೋಹನಾಂಗಿ.ಎ ವಂದಿಸಿದರು. ಗೌರವ ಶಿಕ್ಷಕ ಜುನೈದ್ ಸಹಕರಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.