ಪ್ರವಾದಿ ಸ.ಅ ಅವಹೇಳನ ಮಾಡಿದ ವ್ಯಕ್ತಿಗಳನ್ನು ವಿವಿಧ ಸೆಕ್ಷನ್ ಪ್ರಕಾರ ಬಂಧಿಸಬೇಕು – ದಾವೂದ್ ಇಸ್ಮಾಯಿಲ್ ಪೈಝಿ
ಪುತ್ತೂರು (ವಿಶ್ವ ಕನ್ನಡಿಗ ನ್ಯೂಸ್) : ಮುಹ್ಯಿದ್ದೀನ್ ಜುಮಾ ಮಸೀದಿ ಬೀಟಿಗೆ ಇದರ ವತಿಯಿಂದ ಜಗತ್ತಿನ ಕೋಟ್ಯಾಂತರ ಜನರಿಂದ ಗೌರವಿಸಲ್ಪಡುವ ಪ್ರವಾದಿಯವರನ್ನು ಅವಹೇಳನ ಮಾಡಿದ ಫ್ಯಾಸಿಸ್ಟ್ ಶಕ್ತಿಗಳ ವಿರುದ್ಧ ಪ್ರತಿಭಟನೆ ಸಭೆ ಬೀಟಿಗೆ ಜುಮಾ ಮಸೀದಿಯ ವಠಾರದಲ್ಲಿ ಬೀಟಿಗೆ ಜಮಾಅತ್ ಕಮಿಟಿಯ ಅಧ್ಯಕ್ಷರಾದ ಸುಲೈಮಾನ್ ಬೀಟಿಗೆ ಇವರ ಅಧ್ಯಕ್ಷತೆಯಲ್ಲಿ ಜುಮಾ ನಮಾಝ್ ನಂತರ ನಡೆಯಿತು.
ಬೀಟಿಗೆ ಜುಮಾ ಮಸೀದಿಯ ಖತೀಬರಾದ ದಾವೂದ್ ಇಸ್ಮಾಯಿಲ್ ಪೈಝಿಯವರು ಮಾತನಾಡಿ ಇಸ್ಲಾಂ ಯಾವತ್ತೂ ಪ್ರವಾದಿ ಯವರ ಅವಹೇಳನ ಮಾಡುವುದನ್ನು ಸಹಿಸುವುದಿಲ್ಲ . ನಮ್ಮ ತಾಳ್ಮೆಯನ್ನು ಯಾರು ಪರೀಕ್ಷಿಸಬೇಡಿ ಕೋಟ್ಯಾಂತರ ಮುಸಲ್ಮಾನರ ಹ್ರದಯದಲ್ಲಿ ಪ್ರೀತಿ ಸುವ ಒಂದು ವ್ಯಕ್ತಿಇದ್ದರೆ ಅದು ಪ್ರವಾದಿ . ಪ್ರವಾದಿ ಸ.ಅ ಅವಹೇಳನ ಮಾಡಿದ ವ್ಯಕ್ತಿಗಳನ್ನು ವಿವಿಧ ಸೆಕ್ಷನ್ ಪ್ರಕಾರ ಬಂಧಿಸಬೇಕು . ಈ ಒಂದು ಪ್ರತಿಭಟನೆ ಸಭೆಯಲ್ಲಿ ಬೀಟಿಗೆ ಖತೀಬ್ ಉಸ್ತಾದ್ ರಾದ ದಾವೂದ್ ಇಸ್ಮಾಯಿಲ್ ಫೈಝಿ ಒತ್ತಾಯಿಸಿದರು.
ವಿಶ್ವಕ್ಕೆ ಶಾಂತಿ ಸೌಹಾರ್ದತೆ ಮಾನವಿತೆಯನ್ನು ಕಲ್ಪಿಸಿದ ಪ್ರವಾದಿ ಮುಹಮ್ಮದ್ ಸ.ಅ ಅವಹೇಳನ ಮಾಡಿದ ವ್ಯಕ್ತಿಗಳಿಗೆ ಆಡಳಿತ ನಡೆಸುವ ನೈತಿಕತೆ ಮಾನ ಮಾರ್ಯದೆ ಇಲ್ಲ ಅವರಿಗೆ ದೇಶದಲ್ಲಿ ಉಳಿಗಾಲವಿಲ್ಲ ಪ್ರವಾದಿ ಅವಹೇಳನಕಾರಿ ಮಾಡಿದವರಿಗೆ ನಮ್ಮ ಮುಂದೆ ಅಲ್ಲಾಹು ತಕ್ಕದಾದ ಶಿಕ್ಷೆ ನೀಡಲಿ ಎಂದು ಬೀಟಿಗೆ ಇಬ್ರಾಹಿಂ ಮದನಿ ಉಸ್ತಾದ ರು ಪ್ರಾರ್ಥಿಸಿ ಖಂಡಿಸಿದರು
ನಮ್ಮ ಕುಟುಂಬಕ್ಕಿಂಥ ಸಂಪತ್ತಿ ಗಿಂಥ ಮಕ್ಕಳಿಗಿಂಥ ಎಲ್ಲಾ ಸಮಯದಲ್ಲೂ ನಮ್ಮ ಹ್ರದಯದಲ್ಲಿ ಅತೀ ಹೆಚ್ಚು ಪ್ರೀತಿಸುವ ವ್ಯಕ್ತಿ ಇದ್ದರೆ ಪ್ರವಾದಿ . ಪ್ರವಾದಿ ಮುಹಮ್ಮದ್ ಸ.ಅ. ರವರನ್ನು ಅವಹೇಳನ ಮಾಡಿ ಮುಸ್ಲಿಮರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದು ಸುಂದರವಾದ ಭಾರತ ದೇಶದ ಮಾನವನ್ನು ಹರಾಜು ಮಾಡಿದ ಕೋಮುವಾದಿ ಗಳನ್ನು ಕೂಡಲೇ ಬಂಧಿಸಬೇಕು ಎಂದು. ಸ್ವಾಗತ ಭಾಷಣ ಮಾಡಿದ ಕುತುಬಿಯತ್ ಕಮಿಟಿ ಕಾರ್ಯದರ್ಶಿ ಸಿದ್ದೀಕ್ ಬೀಟಿಗೆ ಒತ್ತಾಯಿಸಿದರು
ಕಾರ್ಯಕ್ರಮದಲ್ಲಿ ಉಮ್ಮರ್ ಮುಸ್ಲಿಯಾರ್ ಜಮಾಅತ್ ಕಮಿಟಿಯ ಪದಾಧಿಕಾರಿಗಳು ಕುತುಬಿಯತ್ ಕಮಿಟಿಯ ಪದಾಧಿಕಾರಿಗಳು ಎಲ್ಲಾ ಸಂಘಟನೆ ನಾಯಕರು ಜಮಾಅತ್ ಬಾಂಧವಾರು ಉಪಸ್ಥಿತರಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.