(ವಿಶ್ವ ಕನ್ನಡಿಗ ನ್ಯೂಸ್) : ವಾಟ್ಸಾಪ್ ತನ್ನ ಬಳಕೆದಾರರಿಗೆ ಹೊಸ ಫೀಚರ್ ಬಿಡುಗಡೆಗೊಳಿಸಿದ್ದು, ಇನ್ನು ಮುಂದೆ ಗ್ರೂಪಿನಲ್ಲಿ 512 ಮಂದಿ ಸೇರಿಸುವ ಸೌಲಭ್ಯವನ್ನು ಒದಗಿಸಿದೆ. ಶೀಘ್ರದಲ್ಲೇ ಹೊಸ ಇನ್ನಷ್ಟು ಫೀಚರ್ ಗಳು ಹೊರ ಬರಲಿದೆ.
ಇದಕ್ಕೂ ಮೊದಲು ವಾಟ್ಸಾಪ್ ಗ್ರೂಪ್ ಗಳಲ್ಲಿ 256 ಸದಸ್ಯರನ್ನು ಹೊಂದಲು ಅವಕಾಶವಿತ್ತು. ಅದು ಈಗ ಇದು ದ್ವಿಗುಣಗೊಂಡಿದೆ. ಗ್ರೂಪಿನಲ್ಲಿ 512 ಸದಸ್ಯರನ್ನು ಸೇರಿಸುವ ಈ ಹೊಸ ಫೀಚರ್ ಆಂಡ್ರಾಯ್ಡ್ ಹಾಗೂ ಐ ಓ ಎಸ್ ಆವೃತ್ತಿಯ ಬಳಕೆದಾರರಿಗೆ ಲಭ್ಯವಿದೆ. ಬಳಕೆದಾರರು ಈ ಫೀಚರ್ ಅನ್ನು ಆಪ್ ಅಪ್ಡೇಟ್ ಮಾಡಿ ಪಡೆಯಬಹುದು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.