ಪೊಲೀಸ್ ಅಧಿಕಾರಿಯ ಕಾರ್ಯವನ್ನು ಶ್ಲಾಘಸಿದ ನೆಟ್ಟಿಗರು..
(ವಿಶ್ವ ಕನ್ನಡಿಗ ನ್ಯೂಸ್) : ಸಂಚಾರ ಪೊಲೀಸರೊಬ್ಬರು ಅಂಬೆಗಾಲಿಡುವ ಮಗುವಿನ ಜೀವವನ್ನು ಉಳಿಸಿದ ವಿಡಿಯೊ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವೀಡಿಯೋವನ್ನು ಅವನೀಶ್ ಶರಣ್ ಎಂಬವರು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.
ತುರ್ತು ಸಮಯದಲ್ಲಿ ತಮ್ಮ ಬುದ್ದಿಯನ್ನು ತ್ವರಿತವಾಗಿ ಉಪಯೋಗಿಸಿ ತಮ್ಮ ಜೀವದ ಮೇಲಿನ ಹಂಗು ತೊರೆದು ಮಗುವಿನ ಪ್ರಾಣ ಉಳಿಸಿದ ಪೊಲೀಸ್ ಅಧಿಕಾರಿಯ ಕಾರ್ಯವನ್ನು ನೆಟ್ಟಿಗರು ಪ್ರಶಂಸಿದ್ದಾರೆ.
ರಿಕ್ಷಾದಿಂದ ಕೆಳಕ್ಕೆ ಬಿದ್ದ ಮಗುವಿನ ಜೀವವನ್ನು ಉಳಿಸಿದ ಪೊಲೀಸ್ ಸಿಬ್ಬಂದಿಯ ಸಮಯೋಚಿತ ಕಾರ್ಯವು ಮಗುವಿನ ಜೀವವನ್ನು ಹೇಗೆ ಉಳಿಸಿತು ಎಂಬುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಈ ವೀಡಿಯೋಗೆ ಇದುವರೆಗೂ 1.6 ಮಿಲಿಯನ್ ವೀಕ್ಷಣೆಗಳು ಮತ್ತು 85,000ಕ್ಕೂ ಹೆಚ್ಚು ಲೈಕ್ ಗಳು ಬಂದಿವೆ. ಇಷ್ಟೇ ಅಲ್ಲದೆ ಈ ವೀಡಿಯೋವನ್ನು 9,400ಕ್ಕೂ ಹೆಚ್ಚು ಬಾರಿ ಮರು ಟ್ವೀಟ್ ಸಹ ಮಾಡಿದ್ದಾರೆ.
ट्रैफ़िक पुलिस के जवान सुंदर लाल.🙏 pic.twitter.com/ulmX48a5ki — Awanish Sharan 🇮🇳 (@AwanishSharan) June 12, 2022
ट्रैफ़िक पुलिस के जवान सुंदर लाल.🙏 pic.twitter.com/ulmX48a5ki
— Awanish Sharan 🇮🇳 (@AwanishSharan) June 12, 2022
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.