(www.vknews.in) : ಐಶ್ವರ್ಯ ಸುಖವನ್ನು ನೀಡಬಹುದೇ ವಿನಾ ನೆಮ್ಮದಿಯನ್ನಲ್ಲ ಎನ್ನುವ ಮಾತಿದೆ. ಬೇಕಾದಷ್ಟು ಹಣ, ಶ್ರೀಮಂತಿಕೆ ಇದ್ದರೆ ನಮ್ಮ ಬಯಕೆಗಳನ್ನು ಸುಲಭವಾಗಿ ಈಡೇರಿಸಿಕೊಳ್ಳಬಹುದು. ಅವುಗಳಿಂದ ನಮಗೆ ನೆಮ್ಮದಿ ಅಥವಾ ಮನಃಶಾಂತಿ ಲಭಿಸಲಾರದು. ಆದರೆ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡರೆ ಅವುಗಳು ನಾವು ದಿಕ್ಕುತಪ್ಪದಂತೆ ಕಾಯುತ್ತವೆ. ಇದು ನೆಮ್ಮದಿ ಲಭಿಸಲು ಪೂರಕ. ಅದಕ್ಕಾಗಿಯೇ ಹಿರಿಯರು ನೈತಿಕ ಮೌಲ್ಯಗಳೇ ಬದುಕಿನ ನೆಮ್ಮದಿಯ ಮೂಲ ಸೂತ್ರಗಳು ಎಂದಿದ್ದಾರೆ. ಮೌಲ್ಯವರ್ಧನೆ ಎಂದರೆ, ವ್ಯಕ್ತಿಗಳಲ್ಲಿ ನೈತಿಕ ಸದ್ಗುಣಗಳಾದ ಶ್ರದ್ಧೆ, ನಿಷ್ಠೆ, ಪ್ರಾಮಾಣಿಕತೆ, ಸಹನೆ, ಅನುಕಂಪ, ಸತ್ಯ, ನ್ಯಾಯ, ಸಚ್ಚಾರಿತ್ರ್ಯ, ಅಹಿಂಸೆ, ಸಹಕಾರ, ಸಹೋದರತ್ವ, ಸಹಿಷ್ಣುತಾಭಾವ ಇವೇ ಮೊದಲಾದ ಗುಣಗಳನ್ನು ಬೆಳೆಸುವುದಾಗಿದೆ.
ನ್ಯಾಯ ಮತ್ತು ಪ್ರಾಮಾಣಿಕತನಕ್ಕಿರುವ ಪ್ರಾಧಾನ್ಯ ಹಾಗೂ ವ್ಯವಹಾರದಲ್ಲಿ ಅವುಗಳ ಬಳಕೆ ನಮ್ಮ ವ್ಯಕ್ತಿತ್ವವನ್ನು ಸೂಚಿಸುತ್ತವೆ. ಮೌಲ್ಯಗಳು ಎಲ್ಲ ಜೀವಿಗಳಲ್ಲಿ ಅಂತರ್ಗತವಾಗಿದ್ದು, ಅವರ ನೈಜ ಸ್ವಭಾವವೇ ಆಗಿರುತ್ತದೆ. ವ್ಯಕ್ತಿಯ ಜೀವನ, ಸಮಾಜ, ಅರ್ಥವ್ಯವಸ್ಥೆ, ರಾಜಕಾರಣಗಳೆಲ್ಲವೂ ಮೌಲ್ಯಾ ಧಾರಿತವಾಗಿರಬೇಕು. ಮೌಲ್ಯಗಳ ಅಳವಡಿಕೆಯಿಂದ ವ್ಯಕ್ತಿಯ ಗೌರವ, ಘನತೆ ವೃದ್ಧಿಸಿ, ಚಿನ್ನದಂತೆ ಪರಿಶುದ್ಧಗೊಂಡು “ಬದುಕು ಬಂಗಾರ’ವಾಗುವುದು. ಹಾಗೆ ವ್ಯಕ್ತಿತ್ವ ಸಂಪೂರ್ಣವಾಗಿ ವಿಕಾಸಗೊಳ್ಳುವುದು. ಮೌಲ್ಯಗಳು ನಮ್ಮ ಬದುಕಿನಲ್ಲಿ ಆಸ್ತಿ ಇದ್ದಂತೆ. ಸಂಸ್ಕಾರ ಮತ್ತು ಸಂಸ್ಕೃತಿಗಳು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಮಹತ್ವದ ಮೌಲ್ಯಗಳು. ಉತ್ತಮ ಜೀವನ ನಡೆಸಲು ಇವೆರಡೂ ಅತೀ ಅಗತ್ಯ.
ಮಾನವೀಯತೆ ಅತ್ಯಮೂಲ್ಯವಾಗಿರುತ್ತವೆ. ರಸ್ತೆಯಲ್ಲಿ ಬಿದ್ದ ನನಗೆ ಜನರು ಮಾನವೀಯತೆ ತೋರದೆ ಹೋದಾಗ ಉಳಿದವರಿಗೆ ಮಾನವೀಯತೆ ಮೌಲ್ಯದ ಬಗ್ಗೆ ನನ್ನ ನೋವನ್ನೇ ವ್ಯಕ್ತಪಡಿಸುತ್ತಿದ್ದೇನೆ.
ಇತ್ತೀಚೆಗಷ್ಟೇ ಮಂಗಳೂರು ನಗರದ ಟ್ರಾಫಿಕ್ ಸಿಗ್ನಲ್ನಲ್ಲಿ ನನ್ನ ದ್ವಿಚಕ್ರ ವಾಹನ ನಿಲ್ಲಿಸಿರುವಾಗ ಹಿಂಬದಿಯಲ್ಲಿದ ಆಲ್ಟೊ ಕಾರೊಂದು ದಿಢೀರಾಗಿ ಮುಂದೆ ಬಂದು ನನ್ನ ವಾಹನಕ್ಕೆ ಡಿಕ್ಕಿ ಹೊಡೆದು ವಾಹನವು ರಸ್ತೆಗೆ ಬಿದ್ದು ಅದರ ಮೇಲೆ ನಾನು ಬಿದ್ದ ಕಾರಣ ನನ್ನ ಬಲ ಕಾಲಿಗೆ ಪೆಟ್ಟು ಬೀಳುತ್ತವೆ. ಪಕ್ಕದಲ್ಲಿದ್ದ ಕಾರಿನಲ್ಲಿ ಮಹಿಳೆಯರು ಅಯ್ಯೊ ಅಂತ ಕೂಗು ಒಂದು ಕೇಳಿವೆ. ಸಾರ್ವಜನಿಕರು ಓಡಾಡುತ್ತಿದ್ದರು ರಸ್ತೆಗೆ ಬಿದ್ದ ನನ್ನನ್ನು ಮತ್ತು ನನ್ನ ವಾಹನವನ್ನು ಎತ್ತುವುದಾಗಲಿ ಹತ್ತಿರ ಬಂದು ಏನಾಯಿತು ಎಂದು ಕೇಳುವ ಒಂದೇ ಒಂದು ಜನ ಕೂಡ ಬರಲಿಲ್ಲ. ಕಾಲು ನೋವಿನಲ್ಲು ನೆಲಕ್ಕೆ ಬಿದ್ದು ನನ್ನ ವಾಹನವನ್ನು ಸ್ವತಃ ನಾನೆ ಎತ್ತಿ ರಸ್ತೆ ಬದಿಗೆ ದೂಡಿಕೊಂಡು ನಿಲ್ಲಿಸಿದೆ. ಅದೇ ಸ್ಥಳದಲ್ಲಿ ಹಲವಾರು ವಾಹನಗಳಿದ್ದರು ನೂರಾರು ಜನರಿದ್ದರು ಕೇವಲ ನೋಡಿದ್ದಲ್ಲದೆ ಯಾರು ಕೂಡ ಸಹಾಯಕ್ಕೆ ಬಂದಿಲ್ಲ. ಯಾವುದೊ ಒಂದು ಖಾಸಗಿ ಬಸ್ಸಿನ ಚಾಲಕ ಹೇಳಿದ್ದು ಕೇಳಿಸಿತ್ತು (ಓ ಅಣ್ಣ ಗಾಡಿ ಸೈಡ್ಗ್ ಪಾರ್ದ್ ಪಾತೆರ್ಲೆ ಎಂಕ್ಲೆಗ್ ಬ್ಲಾಕ್ ಆಪುಂಡು) ಓ ಅಣ್ಣ ವಾಹನವನ್ನು ಬದಿಗಿಟ್ಟು ಮಾತನಾಡಿ ನಮಗೆ ಬ್ಲಾಕ್ ಆಗುತ್ತವೆ ಎಂದು. ಬರೀ ಜೋರಾಗಿ ಹೇಳಿದ್ದು ಮಾತ್ರ ಹೊರತು ಸಹಾಯಕ್ಕೆ ಯಾರು ಇರಲಿಲ್ಲ ಕೇವಲ ನೋಡಿಕೊಂಡು ಅವರ ಪಾಡಿಗೆ ಹೊರಡುತ್ತಿದ್ದರು. ಎಲ್ಲವನ್ನೂ ನಾನೊಬ್ಬನೆ ಸರಿಪಡಿಸಿ ನನ್ನ ಪಾಡಿಗೆ ಹೊರಟು ಹೋದೆ. ನೋವು ಹೆಚ್ಚಾಗುತ್ತಿದ್ದಾಗ ನನ್ನ ಇಬ್ಬರು ಸ್ನೇಹಿತರಾದ ಇರ್ಶಾದ್ ಮತ್ತು ಸಮೀರ್ರವರ ಸಹಾಯದಿಂದ ನನ್ನನ್ನು ಎತ್ತಿಕೊಂಡು ಆಸ್ಪತ್ರೆ ಸೇರಿಸಿ ಸೂಕ್ತ ಚಿಕಿತ್ಸೆ ಕೊಟ್ಟು ಭೀಕರ ಮಳೆಯ ನಡುವೆಯೂ ನನ್ನನ್ನು ಮನೆ ತನಕ ಬಿಟ್ಟು ಬಂದರು.
ನಾನು ನನ್ನ ಒಂದು ಅನುಭವವನ್ನೆ ಮುಂದಿಟ್ಟು ಜನರಿಗೆ ಮಾನವೀಯ ಮೌಲ್ಯಗಳನ್ನು ದುರುಪಯೋಗಪಡಿಸಬೇಡಿ ಎಂಬ ಉದ್ದೇಶದಿಂದ ಹೇಳಲು ಬಯಸುವೆ. ಒಬ್ಬ ರಸ್ತೆಗೆ ಬಿದ್ದಿದ್ದಾನೆ ಪ್ರಾಣ ಅಪಾಯದಿಂದ ಇರುವಾಗ ನಾವುಗಳು ದೂರದಿಂದ ನೋಡುವುದು ಯಾವತ್ತೂ ಸರಿಯಲ್ಲ ನಮ್ಮಿಂದ ಆಗುವ ಸಹಾಯ ಅಲ್ಲಿ ಅತ್ಯಮೂಲ್ಯವಾಗಿರುತ್ತವೆ. ಜಾತಿ ಧರ್ಮ ಯಾವುದು ನೋಡದೆ ಕಷ್ಟದಲ್ಲಿರುವ ಯಾವುದೇ ವ್ಯಕ್ತಿಯಾದರೂ ಸರಿ ನಾವು ಅವರನ್ನು ಕಾಪಾಡಬೇಕು ಕೇವಲ ದೂರದಿಂದ ನೋಡಿ ಅಥವಾ ಮೊಬೈಲ್ ಫೋನ್ ಮುಖಾಂತರ ಚಿತ್ರೀಕರಣ ಮಾಡಿ ನಾಲ್ಕು ಜನರಿಗೆ ಕಳುಹಿಸಿ ದೊಡ್ಡವರಾದರೆ ಏನು ಪ್ರಯೋಜನವಿಲ್ಲ. ಮಾನವೀಯತೆ ಅತ್ಯಮೂಲ್ಯವಾಗಿರುತ್ತವೆ. ನಾವು ಒಬ್ಬರಿಗೆ ಮಾನವೀಯತೆ ತೋರಿಸಿದೆ ಸೃಷ್ಟಿಕರ್ತನು ನಮಗೆ ಇನ್ನೊಬ್ಬರ ಸಹಾಯದಿಂದ ಮಾನವೀಯತೆ ತೋರಿಸುವನು. ಎರಡು ಮೂರು ದಿನದ ಬದುಕಿನ ಈ ಪ್ರಪಂಚದಲ್ಲಿ ಮಾನವೀಯತೆ ಇಲ್ಲದಿದ್ದರೆ ಬದುಕಿಯು ಏನು ಪ್ರಯೋಜನ.? ಆಸ್ತಿ ಭೂಮಿ ಎಷ್ಟಿದ್ದರು ಏನು ಮಾನವೀಯತೆ ನಮಗೆ ಇಲ್ಲದಿರುವಾಗ. ಇದು ಕೇವಲ ನನ್ನ ಅನುಭವವಾದರೆ ಅದೆಷ್ಟೋ ಜನರಿಗೂ ಅನುಭವ ಆಗಿರುತ್ತದೆ. ಎಷ್ಟೊಂದು ಅಪಘಾತಗಳು ನಡೆದಾಗ ಜನರು ಹತ್ತಿರ ಹೋಗಿ ಸಹಾಯ ಮಾಡಲು ಹೆದರಿಕೊಳ್ಳುತ್ತಾರೆ. ಎಲ್ಲಿ ನಾವು ಆರೋಪಿಗಳಾಗುತ್ತೆವೆಂದು. ಸಾವಿನ ಕೊನೆ ಕ್ಷಣದಲ್ಲೂ ಒಂದು ಹನಿ ನೀರು ಕೊಡಲು ಜನ ಮುಂದೆ ಬರದವರು ಇದ್ದಾರೆ. ನರಳಾಡುತ್ತ ಸಾಯುತ್ತಿದ್ದರೆ ಅದನ್ನು ಚಿತ್ರೀಕರಣ ಮಾಡಿ ವೈರಲ್ ಮಾಡುವುದು ಒಂದು ಬಿಟ್ಟರೆ ನಮ್ಮಲ್ಲಿರುವ ಅತಿ ಹೆಚ್ಚು ಜನ ಮಾನವೀಯತೆ ಮೌಲ್ಯವನ್ನು ತಿಳಿದಿಲ್ಲ. ಸಹಾಯ ಎಂದು ಬಂದಾಗ ನಮ್ಮಿಂದ ಸಾಧ್ಯವಾದಷ್ಟು ಅವರೊಂದಿಗೆ ಕೈ ಜೋಡಿಸಬೇಕು ಅದು ಬಿಟ್ಟು ನಿರ್ಲಕ್ಷ್ಯ ತೋರಿದರೆ ಹುಟ್ಟಿಯು ಪ್ರಯೋಜನವಿಲ್ಲದಂತೆ ಆಗಬಹುದು. ಕೆಲವರು ಸಹಾಯ ಮಾಡಲು ಹೆದರಿಕೊಳ್ಳುತ್ತಾರೆ ರಸ್ತೆಗೆ ಬಿದ್ದವನನ್ನು ಎತ್ತಿಕೊಂಡು ಹೋದರೆ ಅವನ ಆಸ್ಪತ್ರೆ ಬಿಲ್ ನಾನು ಪಾವತಿಸಬೇಕೆಂದು ಇನ್ನಿತರ ಅನಾವಶ್ಯಕ ಯೋಚನೆಗಳೊಂದಿಗೆ ಅವರನ್ನು ಸಾಯಲು ಬಿಡುವವರು ಇದ್ದಾರೆ. ಪ್ರಾಣಕ್ಕೆ ಮಾನವೀಯತೆ ತೋರದೆ ಇದ್ದರೆ ನಮ್ಮ ಪ್ರಾಣ ಇದ್ದು ಏನು ಪ್ರಯೋಜನ.
– ಡಿ.ಎಸ್.ಐ.ಬಿ ಪಾಣೆಮಂಗಳೂರು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.