(ವಿಶ್ವ ಕನ್ನಡಿಗ ನ್ಯೂಸ್) : ತಂದೆ-ತಾಯಿಯ ಮಹತ್ವವನ್ನು ಕೇಳುವಾಗ ಕಣ್ತುಂಬಿದವು. ಯಾಕೆಂದರೆ ನಾನು ಯತೀಂ.. ತಾಯಿಯ ಕಾಲಡಿಯಲ್ಲಿ ಸ್ವರ್ಗ, ತಂದೆ ಸ್ವರ್ಗದ ನಡುವಿನ ಬಾಗಿಲು ಎಂದು ಅರಿವಾದಾಗ ಕಣ್ತುಂಬಿದವು ಕಾರಣ ನಾನು ಯತೀಂ.. ತಾಯಿಯ ಮಡಿಲಲ್ಲಿ ಹಾಗೂ ತಂದೆಯ ತೋಳಿನಲ್ಲಿ ಸಿಗುವ ಸಂತೋಷವನ್ನು ಕೇಳಿದಾಗ ಕಣ್ತುಂಬಿದವು ಕಾರಣ ನಾನು ಯತೀಂ.. ಕೇಳಿದೆಲ್ಲವು ತೆಗೆಸಿ ಕೊಡುವರು ತಂದೆ, ಮೊದಲು ಮಕ್ಕಳಿಗೆ ಉಣಿಸಿ ಮತ್ತೆ ಉಣ್ಣುವವರು ತಾಯೆಂದು ಕೇಳಿದಾಗ ಕಣ್ತುಂಬಿದವು ಕಾರಣ ನಾನು ಯತೀಂ.. ತಂದೆಯೇ ಮನೆಯ ಆಧಾರ, ತಾಯಿಯೇ ಮಕ್ಕಳ ಜವಾಬ್ದಾರಿಯನ್ನು ಹೊರುವವಳೆಂದು ಅರಿವಾದಾಗ ಕಣ್ತುಂಬಿದವು ಕಾರಣ ನಾನು ಯತೀಂ.. ತಂದೆ-ತಾಯಿದ್ದರೆ ಯಾರ ಹಂಗಿನಲ್ಲಿರಬೇಕಾದ ಅವಶ್ಯಕತೆಯಿಲ್ಲವೆಂದು ಅರಿವಾದಾಗ ಕಣ್ತುಂಬಿದವು ಕಾರಣ ನಾನು ಯತೀಂ.. ತಂದೆ-ತಾಯಿದ್ದರೆ ಮೂರೊತ್ತಿನ ಊಟ ಹಾಗೂ ದೇಹವನ್ನು ಮರೆಮಾಚಲು ವಸ್ತ್ರಕ್ಕೆ ಯಾವಾಗಲೂ ಕಡಿಮೆಯಾಗದೆಂದು ತಿಳಿದಾಗ ಕಣ್ತುಂಬಿದವು ಕಾರಣ ನಾನು ಯತೀಂ.. ಯತೀಂ ಆದ ಕಾರಣ ಇನ್ನೊಬ್ಬರ ಮನೆಯಲ್ಲಿ ಜೀತಾಳುವಿನ ತರಹ ಜೀವಿಸಬೇಕಾದೀತು ತಾನೇ ಎಂದು ಕಣ್ಣೀರಾಕಬೇಕಾಯಿತ್ತು ಕಾರಣ ನಾನು ಯತೀಂ.. ತಂದೆ-ತಾಯಿಯನ್ನು ಕಾಣದ ಕಣ್ಣುಗಳಿಗೆ ಹಂಬಲಿಸಿದ ಕಣ್ಣುಗಳು ಕೊನೆಗೆ ದಿಕ್ಕು ತೋಚದೆ ಕಣ್ತುಂಬಿದವು ಕಾರಣ ನಾನು ಯತೀಂ.. ಇಂದು ಇದೆಲ್ಲವನ್ನು ಅನುಭವಿಸುತ್ತಿರುವೆ, ಆಸೆ ಪಟ್ಟ ವಸ್ತು ಸಿಗುತ್ತಿಲ್ಲ, ಕೇಳಿದ ವಸ್ತುವನ್ನು ತೆಗೆದು ಕೊಡಲು ಯಾರು ಇಲ್ಲ, ತನ್ನ ಆಸೆಯ ಗೋಪುರನ್ನು ಕಣ್ಣೀರಿನಿಂದ ಕಡಿತಗೊಳಿಸುತ್ತಿರುವೆ ಕಾರಣ ನಾನು ಯತೀಂ..
– ಅನೀಸ್ ಕುಕ್ಕಾಜೆ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.