(www.vknews.in) : ಕಲ್ಲುಗುಂಡಿಯಲ್ಲಿ ಆಕಸ್ಮಿಕವಾಗಿ ಸಂಭವಿಸಿದ ಜಲಪ್ರಳಯದಿಂದ ತತ್ತರಿಸಿದ ಪ್ರದೇಶದಲ್ಲಿ ತುರ್ತು ಕಾರ್ಯಾಚರಣೆ ನಡೆಸಲಾಯಿತು. ರಾತ್ರಿ ಸುಮಾರು 12-45 ರ ಸಮಯದಲ್ಲಿ ಜಲಾವ್ರತವಾದ ಕಲ್ಲುಗುಂಡಿಯಲ್ಲಿ ಹಿಂದೆಂದೂ ಕಾಣದ ಜಲಪ್ರಳಯವಾಗಿದೆ. ಹಲವಾರು ಮನೆಗಳು, ಅಂಗಡಿಗಳು ಜಾಲದಲ್ಲಿ ಮುಳುಗಿ ಬಹಳಷ್ಟು ನಾಶ ನಷ್ಟ ಉಂಟಾಗಿದೆ.
ರಾತ್ರಿ ಸುಖನಿದ್ರೆಯಲ್ಲಿದ್ದ ಜನರು ಮಂಚದ ಮೇಲೆ ನೀರು ಬಂದಾಗ ಎಚ್ಚರವಾಗಿ ಉಟ್ಟ ವಸ್ತ್ರದಲ್ಲಿ ಓಡಿ ರಕ್ಷಣೆ ಪಡೆದಿದ್ದಾರೆ. ಮಧ್ಯ ರಾತ್ರಿಯಲ್ಲಿಯೇ ಸ್ಥಳಕ್ಕೆ ದಾವಿಸಿದ ಎಸ್ಸೆಸ್ಸಫ್, ಎಸ್ವೈಎಸ್ ತುರ್ತು ಸೇವಾ ತಂಡದ ಸದಸ್ಯರು ಶೀಘ್ರವೇ ಜನರನ್ನು ಹಾಗೂ ವಸ್ತುಗಳನ್ನು ಸುರಕ್ಷಿತಗೊಳಿಸುವ ಕಾರ್ಯಾಚರಣೆ ನಡೆಸಿದರು. ನೀರು ಆರಿದ ನಂತರ ಹೆಚ್ಚಿನ ತುರ್ತು ಸೇವಾ ತಂಡದ ಸದಸ್ಯರು ಸ್ಥಳಕ್ಕೆ ಬಂದು ಮನೆ ಹಾಗೂ ಅಂಗಡಿಗಳನ್ನು ಶುಚಿತ್ವಗೊಳಿಸಿ, ಮನೆಗಳಿಂದ ಹಾಗೂ ಅಂಗಡಿಗಳಿಂದ ನೀರಿನಲ್ಲಿ ತೇಲಿ ಹೋದ ಹಲವಾರು ವಸ್ತುಗಳನ್ನು ಹುಡುಕಿ ಅದರ ವಾರೀಸುದಾರರಿಗೆ ಒಪ್ಪಿಸುವುದರೊಂದಿಗೆ ನಿರಂತರ ಕಾರ್ಯಾಚರಣೆಯಲ್ಲಿ ತೊಡಗಿದ್ದರು.
ನೀರಿನ ರಭಸಕ್ಕೆ ನಿಲ್ಲಿಸಿದ್ದ ಎರಡು ಕಾರುಗಳು ತೋಟದ ಮತ್ತೊಂದು ಬದಿಯಲ್ಲಿ ಮಗುಚಿ ಬಿದ್ದಿತ್ತು. ಅದನ್ನು ನೂಕಿಕೊಂಡು ಮನೆಯಂಗಳದಲ್ಲಿ ತಂದು ನಿಲ್ಲಿಸಲಾಯಿತು. ಈ ಸಂಧರ್ಭದಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಡಿಸಿಯವರೂ, ತಹಶೀಲ್ದಾರರೂ, ಸಚಿವರಾದ ಅಂಗಾರ ರವರೂ ಸ್ಥಳೀಯ ಮುಖಂಡರೂ ಎಲ್ಲರೂ ಎಸ್ಸೆಸ್ಸಫ್, ಎಸ್ವೈಎಸ್ ತುರ್ತು ಸೇವಾ ತಂಡದ ಕಾರ್ಯಾಚರಣೆಯನ್ನು ಮುಕ್ತವಾಗಿ ಪ್ರೋತ್ಸಾಹಿಸಿ ಹುರಿದುಂಬಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.